ಕವಿತಾಳ: ‘ಸಾಮೂಹಿಕ ವಿವಾಹ ಸಮಾರಂಭಗಳು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೆರವಾಗುತ್ತವೆ. ಸರಳ ವಿವಾಹ ಪದ್ಧತಿ ಯನ್ನು ಪ್ರೋತ್ಸಾಹಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಸಮೀಪದ ಪಾತಾಪುರ ಗ್ರಾಮದಲ್ಲಿ ಬಾಡದ ಲಿಂಗೇಶ್ವರ ಹಾಗೂ ಕರಿಲಿಂಗೇಶ್ವರ ದೇವಸ್ಥಾನದ ಅಗ್ಗಿ ಮಹೋತ್ಸವ ಹಿನ್ನೆಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಧಾರ್ಮಿಕ ಕಾರ್ಯಕ್ರಮಗಳು ವಿವಿಧ ಸಮಾಜದ ಜನರನ್ನು ಒಗ್ಗೂಡಿಸುತ್ತವೆ. ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳ ಜೊತೆಗೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ’ ಎಂದರು.

ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್. ಎಸ್. ಬೋಸರಾಜು, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಶಾಸಕ ಜಿ. ಹಂಪಯ್ಯ ನಾಯಕ, ತುರ್ವಿಹಾಳದ ಚಿದಾನಂದಯ್ಯ ಗುರುವಿನ, ಕನಕ ಗುರು ಪೀಠದ ಬೀರದೇವರು ಸ್ವಾಮೀಜಿ, ನವಲಕಲ್ ಬೃಹನ್ಮಠದ ಸೋಮನಾಥ ಶಿವಾಚಾರ್ಯ ಸ್ವಾಮಿ, ಮುಖಂಡರಾದ ಬಿ. ಕೆ. ಅಮರೇಶಪ್ಪ, ಬಸವಂತಪ್ಪ, ಮಲ್ಲಿಕಾರ್ಜುನ ಜಕ್ಕಲದಿನ್ನಿ ಮತ್ತು ಬಸವರಾಜ ಪಾಟೀಲ್ ಡೊಣಮರಡಿ ಮಾತನಾಡಿದರು.

19 ಜೋಡಿ ನೂತನ ವಧು–ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಶಿವಶಂಕ್ರಪ ಪೂಜಾರಿ, ಅಯ್ಯಪ್ಪ ತಾತ ಹೀರಾ, ಬೀರಪ್ಪ ಪೂಜಾರಿ, ಕರಿಯಣ್ಣ ಜಡೆ ಪೂಜಾರಿ, ಶಿವಣ್ಣ ಪೂಜಾರಿ ಹಣಗಿ, ಮೌನೇಶ ಪೂಜಾರಿ ಹೀರಾ, ಎಂ.ಈರಣ್ಣ, ರವಿ ಬೋಸರಾಜು, ಯಮನಪ್ಪ ದಿನ್ನಿ, ಕಿರಲಿಂಗಪ್ಪ, ಶಿವಣ್ಣ ವಕೀಲ, ನಿರೂಪಾದೆಪ್ಪ ವಕೀಲ, ಸಿದ್ದನಗೌಡ ತುರ್ವಿಹಾಳ, ಚುಕ್ಕಿ ಸೂಗಪ್ಪ ಸಾಹುಕಾರ, ವೈ. ಶರಣಪ್ಪ ಮತ್ತು ಹನು ಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-32-1166630127

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.