ರಾಯಚೂರು: ಸಿಂಧನೂರು ತಾಲ್ಲೂಕಿನಲ್ಲಿ ವಾಸಿಸುತ್ತಿರುವ ವಲಸೆ ಬಂಗಾಲಿ ಸಮುದಾಯದ ಜನರು ಏಳು ದಶಕಗಳಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿ ಆಜಾದ್ ಬಂಗ್ ಆರ್ಮಿ ಸಂಘದ ಪದಾಧಿಕಾರಿಗಳು ಜಿಲ್ಲಾಡಳಿತ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಮುಖಂಡ ಸುಬ್ರತ್ಕುಮಾರ ವಿಶ್ವಾಸ್ ಮಾತನಾಡಿ, ‘1947ರ ವಿಭಜನೆ ಹಾಗೂ 1964 ಮತ್ತು 1971ರ ಸಂದರ್ಭಗಳಲ್ಲಿ ಪೂರ್ವ ಬಂಗಾಳದಿಂದ ಸ್ಥಳಾಂತರಗೊಂಡ ಹಿಂದೂ ಕುಟುಂಬಗಳನ್ನು ಭಾರತ ಸರ್ಕಾರದ ಪುನರ್ವಸತಿ ಯೋಜನೆಯಡಿ ಸಿಂಧನೂರು ಭಾಗದಲ್ಲಿ ನೆಲೆಗೊಳಿಸಲಾಗಿತ್ತು. ಆದರೆ ಆ ಕುಟುಂಬಗಳ ಮೂರನೇ ತಲೆಮಾರಿನವರೂ ಹಕ್ಕುಗಳಿಂದ ವಂಚಿತರಾಗಿದ್ದಾರೆ’ ಎಂದು ಆರೋಪಿಸಿದರು.

ಭೂ ಸಂಬಂಧಿತ ಸಮಸ್ಯೆಗಳು ಗಂಭೀರವಾಗಿದ್ದು, ಹಲವು ಕುಟುಂಬಗಳಿಗೆ ಇನ್ನೂ ಮಾಲೀಕತ್ವದ ದಾಖಲೆಗಳು ಲಭ್ಯವಾಗಿಲ್ಲ. ಭೂಮಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎಂದು ದೂರಿದರು.

ಇದರಿಂದಾಗಿ ರೈತರಿಗೆ ಕೃಷಿ ಸಾಲಗಳು ಅಥವಾ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯಗಳು ಸಿಗುತ್ತಿಲ್ಲ. ಜಾತಿ ಮತ್ತು ಸಾಮಾಜಿಕ ಗುರುತಿನ ವಿಚಾರದಲ್ಲಿ, ನಾಮಶೂದ್ರ, ಪೊಂದ್ರ, ಮಾಝಿ ಮೊದಲಾದ ಸಮುದಾಯಗಳು ಪಶ್ಚಿಮ ಬಂಗಾಳದಲ್ಲಿ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದರೂ ಕರ್ನಾಟಕದಲ್ಲಿ ಅವರಿಗೆ ಮೀಸಲಾತಿ ಸೌಲಭ್ಯಗಳು ದೊರೆಯುತ್ತಿಲ್ಲ. ಇದರ ಪರಿಣಾಮವಾಗಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಿಂದ ವಂಚಿತ ರಾಗುತ್ತಿದ್ದಾರೆ ಎಂದು ಹೇಳಿದರು.

ಭೂಮಿ ಮಾಲಿಕತ್ವದಲ್ಲಿ ಸರ್ಕಾರದ ಹೆಸರು ಬಳಸುತ್ತಿರುವುದರಿಂದ ಆಡಳಿತಾತ್ಮಕ ಗೊಂದಲ ಉಂಟಾಗಿ, ಜಾತಿ ಪ್ರಮಾಣ ಪತ್ರ ಸೇರಿದಂತೆ ಹಲವು ದಾಖಲೆಗಳನ್ನು ಪಡೆಯಲು ತೊಂದರೆ ಆಗುತ್ತಿದೆ. ಇದನ್ನು ಕುಟುಂಬ ಹೆಸರಾಗಿ ಪರಿಗಣಿಸುವಂತೆ ಸರ್ಕಾರ ಸ್ಪಷ್ಟ ನಿರ್ದೇಶನ ನೀಡಬೇಕು. ಬಂಗಾಲಿ ಭಾಷಾ ಶಿಕ್ಷಕರನ್ನು ಮರುನಿಯೋಜಿಸಬೇಕು ಎಂದು ಆಗ್ರಹಿಸಿದರು.

ಮತದಾರರ ಗುರುತಿನ ಚೀಟಿ ಮತ್ತು ರೇಷನ್ ಕಾರ್ಡ್ ನೀಡುವಲ್ಲಿ ಅನಗತ್ಯ ದಾಖಲೆಗಳನ್ನು ಕೇಳಲಾಗುತ್ತಿದ್ದು, ಹಲವಾರು ಕುಟುಂಬಗಳು ಬಿಪಿಎಲ್ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ನಾವು ವಲಸಿಗರಲ್ಲ, ಸರ್ಕಾರದಿಂದ ಪುನರ್ವಸತಿ ಪಡೆದ ನಾಗರಿಕರು ಎಂಬುದನ್ನು ಆಡಳಿತ ಅರಿಯಬೇಕು ಎಂದು ಹೇಳಿದರು.

90 ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ, ಸಿಂಧನೂರಿನಿಂದ ರಾಯಚೂರುವರೆಗೆ ಪಾದಯಾತ್ರೆ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು. ಹೋರಾಟವನ್ನು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಲಾಗುವುದು ಎಂದರು.

ನಂತರ ಜಿಲ್ಲಾಧಿಕಾರಿ ಕಚೇರಿಯ ಸ್ಥಾನಿಕ ಅಧಿಕಾರಿಗೆ ಮನವಿ ಸಲ್ಲಿಸಿದರು.

ನಿತಾಯ್ ತರಫದಾರ್, ಸಾಧನ್ ಸನ್ ಸಾನಾ, ಸುನೀಲ್ ಮಿಸ್ತ್ರಿ, ಶ್ರೀದುಲ್ ದತ್ತಾ, ಸರೋಜಿತ್ ಗೈನ್, ಅರ್ಜುನ್ ಗೋಲ್ಡರ್, ಸಾಧನ್ ಮಂಡಲ್, ಸಮರೇಶ್ ಮಂಡಲ್, ಬಿಶು ರಾಯ್, ದಿನೇಶ್ ರಾಯ್, ಸುಖ ಮಂಡಲ್, ಸಾಗರ್ ಮಂಡಲ್, ಕನಕ್ ಮಂಡಲ್, ಕುಮಾರೇಶ್ ಮಂಡಲ್, ಪ್ರಮೋದ್ ಮಿಸ್ತ್ರಿ, ಧಮೇರ್ಂದ್ರ ಬಿಸ್ವಾಸ್, ಪಿಯೂಷ್ ಮಿರ್ಧಾ, ಪ್ರದೀಪ್ ದಾಸ್, ದಿಲೀಪ್ ಸರ್ಕಾರ್, ರಂಜಿತ್ ದತ್ತಾ, ಸುಧಾನಾ ಸಿಕಂದರ್ ಹಾಗೂ ಬಂಗಾಲಿ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-32-770226937

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.