ಸಿಂಧನೂರು: ಎಪಿಎಂಸಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಲೋಡಿಂಗ್ ಮತ್ತು ಅನ್ ಲೋಡಿಂಗ್ ಮಾಡುತ್ತಿರುವ ಹಮಾಲರಿಗೆ ಹಾಗೂ ಗಂಜ್ನಲ್ಲಿ ದುಡಿಯುವ ಮಹಿಳೆಯರಿಗೆ ವಸತಿ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಎಐಟಿಯುಸಿ ಸಂಯೋಜಿತ ಹಮಾಲರ ಸಂಘದಿಂದ ಎಪಿಎಂಸಿ ಕಾರ್ಯದರ್ಶಿ ರವಿಚಂದ್ರ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಹಮಾಲರ ಸಂಘದ ಅಧ್ಯಕ್ಷ ಬಾಷುಮಿಯ ಮಾತನಾಡಿ,‘ಪರವಾನಗಿ ಇಲ್ಲದ ಹಮಾಲರಿಗೆ ಪರವಾನಗಿ ಕೊಟ್ಟು ವಿಮಾ ಸೌಕರ್ಯ ಕಲ್ಪಿಸಬೇಕು. ಹಮಾಲರು ಸ್ವಾಭಾವಿಕವಾಗಿ ಮರಣ ಹೊಂದಿದರೆ, ₹5 ಲಕ್ಷ ಪರಿಹಾರ ಕೊಡಬೇಕು. ಅಪಘಾತದಿಂದ ಮರಣ ಹೊಂದಿದರೆ ₹10 ಲಕ್ಷ, ಕೆಲಸ ಮಾಡುವಾಗ ಕೈ-ಕಾಲು ಕಳೆದುಕೊಂಡರೆ ₹10 ಲಕ್ಷ ಪರಿಹಾರ ಕೊಡುವುದಕ್ಕೆ ಸಂಬಂಧಿಸಿದಂತೆ ವಿಮಾ ಕಂಪನಿಗಳೊಂದಿಗೆ ಸರ್ಕಾರ ಒಪ್ಪಂದ ಮಾಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.

‘ಹಲವಾರು ವರ್ಷಗಳಿಂದ ದುಡಿಯುವ ಹಮಾಲರಿಗೆ ಆರೋಗ್ಯ, ಅವರ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ವ್ಯವಸ್ಥೆ ಸೇರಿದಂತೆ ಇನ್ನಿತರ ಸೌಕರ್ಯ ಕಲ್ಪಿಸಬೇಕು’ ಎಂದು ಬಾಷುಮಿಯಾ ಅವರು ಎಪಿಎಂಸಿ ಕಾರ್ಯದರ್ಶಿ ಅವರ ಗಮನ ಸೆಳೆದರು.

‘ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಾದರಿಯಲ್ಲಿ ವಿವಾಹ, ಹೆರಿಗೆ ಮತ್ತು ಮರಣದ ಸಮಯದಲ್ಲಿ ಆರ್ಥಿಕ ನೆರವನ್ನು ಹಮಾಲರಿಗೂ ಕಲ್ಪಿಸಬೇಕು. 60 ವರ್ಷ ಪೂರ್ಣಗೊಂಡ ಹಮಾಲರಿಗೆ ₹50 ಸಾವಿರ ಇಡುಗಂಟು ಕೊಡಬೇಕು. ಪ್ರತಿ ತಿಂಗಳು ₹3,000 ಪಿಂಚಣಿ ಸೌಕರ್ಯ ಕೊಡಬೇಕು’ ಎಂದು ಒತ್ತಾಯಿಸಿದರು.

ಸಂಘದ ರಾಜ್ಯ ಸಮಿತಿ ಮುಖಂಡರಾದ ತಿಮ್ಮಣ್ಣ, ಹುಲುಗಪ್ಪ, ತಾಲ್ಲೂಕು ಘಟಕದ ಗೌರವಾಧ್ಯಕ್ಷ ವೆಂಕನಗೌಡ ಗದ್ರಟಗಿ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಜಗದೀಶ ಸುಕಾಲಪೇಟೆ, ಮುಖಂಡರಾದ ಹನುಮಂತಪ್ಪ ಹಂಚಿನಾಳ, ಅಮರೇಶಪ್ಪ ನಾಯಕ, ಗಂಗಪ್ಪ, ಸುಭಾನ್ ಸಾಬ್, ಶಿವಪ್ಪ ಗದ್ರಟಗಿ, ಹುಲಗಯ್ಯ, ಮೌಲಪ್ಪ, ಬಸವರಾಜ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-32-275357764

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.