ಸಿರವಾರ: ವಯಸ್ಸು 70ರ ಗಡಿ ದಾಟಿದಾಗ ದೇಹ ದಣಿಯುತ್ತದೆ. ಮನಸ್ಸು ಆಸರೆ ಹುಡುಕುತ್ತದೆ. ಆದರೆ, ತಾಲ್ಲೂಕಿನ ಶಾಖಾಪುರ ಗ್ರಾಮದ ವೃದ್ಧೆ ಯಲ್ಲಮ್ಮ ನರೇಗಾದಡಿ ಕೆಲಸ ಮಾಡಿ ಸ್ವಾಭಿಮಾನಿಯಾಗಿ ಬದುಕುವ ಮೂಲಕ ಮಾದರಿಯಾಗಿದ್ದಾರೆ. ಪತಿಯನ್ನು ಕಳೆದುಕೊಂಡ ಯಲ್ಲಮ್ಮನಿಗೆ ಮಕ್ಕಳಿಲ್ಲ. ಬಂಧುಗಳೂ ಹತ್ತಿರ ಸುಳಿಯುತ್ತಿಲ್ಲ. ಜೀವನೋಪಾಯಕ್ಕೆ ನರೇಗಾವೇ ಆಸರೆಯಾಗಿದೆ.

‘ಕೈ ಕಾಲು ಗಟ್ಟಿ ಇರುವ ತನಕ ದುಡಿದು ತಿನ್ನಬೇಕು. ಯಾರ ಹಂಗಿನಲ್ಲೂ ಬದುಕಬಾರದು’ ಎನ್ನುತ್ತಾರೆ ಯಲ್ಲಮ್ಮ.

‘ಪತಿ ತೀರಿಕೊಂಡ ನಂತರ ಒಪ್ಪೊತ್ತಿನ ಊಟಕ್ಕೂ ಕಷ್ಟವಾಗಿತ್ತು. ಆಗ ಜಾಬ್ ಕಾರ್ಡ್ ಮಾಡಿಸಿಕೊಂಡು ನರೇಗಾ ಕೆಲಸಕ್ಕೆ ಹೋದೆ, ಅಂದಿನಿಂದ ಅದೇ ನನ್ನ ಬದುಕಿಗೆ ಆಧಾರವಾಗಿದೆ’ ಎಂದು ಹೇಳುತ್ತಾರೆ.

ನರೇಗಾದಡಿ ಶಾಖಾಪುರದಲ್ಲಿ ಪ್ರಸ್ತುತ ನಡೆಯುತ್ತಿರುವ ನಾಲೆ ಹೂಳೆತ್ತುವ ಕಾಮಗಾರಿಯಲ್ಲಿ ರಣ ಬಿಸಿಲನ್ನು ಲೆಕ್ಕಿಸದೇ ಉತ್ಸಾಹದಿಂದ ಮಣ್ಣು ಹೊರುತ್ತಾರೆ.

ಜೊತೆಗಿರುವ ಯುವಕ- ಯುವತಿಯರೇ ಸುಸ್ತಾದರೂ ಯಲ್ಲಮ್ಮ ಮಾತ್ರ ಆಯಾಸವಿಲ್ಲದೆ ದುಡಿಯುತ್ತಾರೆ.

‘ದುಡಿಯೋಣ ಬಾ’ ಅಭಿಯಾನದಡಿ 7 ದಿನಗಳ ಎನ್ಎಂಆರ್ ಕೆಲಸ ಮಾಡುತ್ತಿರುವ ಯಲ್ಲಮ್ಮ, ಯಾರ ಹಂಗೂ ಇಲ್ಲದೆ ಒಂಟಿ ಜೀವನ ನಡೆಸುತ್ತಿದ್ದಾರೆ.

ಕಳೆದ 8-10 ವರ್ಷಗಳಿಂದ ನರೇಗಾದಡಿ ನಾಲೆ, ಹಳ್ಳ-ಕೊಳ್ಳಗಳ ಹೂಳೆತ್ತುವ ಕಾಮಗಾರಿಯಲ್ಲಿ ಯಲ್ಲಮ್ಮ ದುಡಿಯುತ್ತಿದ್ದಾರೆ. ಇಲ್ಲಿಯವರೆಗೆ ಅವರಿಗೆ ಸಿಕ್ಕ ಮಾನವ ದಿನಗಳಲ್ಲಿ ಒಂದು ದಿನವೂ ತಪ್ಪದೇ ಕೆಲಸ ಮಾಡಿ ಕೂಲಿ ಪಡೆದಿದ್ದು, ಇದೇ ಹಣದಲ್ಲಿ ಮೂರು ಹೊತ್ತು ಊಟ ಮಾಡಿ ನೆಮ್ಮದಿ ಕಂಡುಕೊಂಡಿದ್ದಾರೆ. ನರೇಗಾ ಕೆಲಸವಿರದ ದಿನಗಳಲ್ಲಿ ಗ್ರಾಮದಲ್ಲಿ ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಾರೆ.

ಇಳಿ ವಯಸ್ಸಿನಲ್ಲೂ ಕಷ್ಟಪಟ್ಟು ಕೆಲಸ ಮಾಡುವ ಯಲ್ಲಮ್ಮ ಇತರರಿಗೆ ಮಾದರಿಯಾಗಿದ್ದಾರೆ. ಯಾವುದೇ ಸಮಸ್ಯೆಗಳಿದ್ದರೂ ಕೆಲಸದ ವಿಷಯದಲ್ಲಿ ರಿಯಾಯಿತಿ ಕೇಳಿದ ಉದಾಹರಣೆಗಳಿಲ್ಲ
ರಾಜೇಂದ್ರ ಕುಮಾರ, ನರೇಗಾ ತಾಲ್ಲೂಕು ಐಇಸಿ ಸಿರವಾರ

ತನ್ನವರು ಎಂದು ಯಾರೂ ಇಲ್ಲದಿದ್ದರೂ ದುಡಿದು ಸ್ವಾವಲಂಬಿ ಬದುಕು ಸಾಗಿಸುತ್ತಿರುವ ಯಲ್ಲಮ್ಮ ಅವರದ್ದು ಮಾದರಿ ಜೀವನ
ರಮೇಶ ಶಾಖಾಪೂರು, ಸಹ ಕೂಲಿಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.