ರಾಯಚೂರು: ‘ದೇಶ ರಕ್ಷಣೆಯಲ್ಲಿ ತೊಡಗಿರುವ ಸೈನಿಕರ ಸೇವೆ ಅಮೂಲ್ಯವಾಗಿದೆ. ಸೈನಿಕರನ್ನು ಗೌರವದಿಂದ ಕಾಣುವುದು ದೇಶದ ಸಂಸ್ಕೃತಿಯಾಗಿದೆ’ ಎಂದು ಶಾಸಕ ಬಸನಗೌಡ ದದ್ದಲ್ ಹೇಳಿದರು.

ಇಲ್ಲಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಾಜಿ ಯೋಧರಿಂದ ಆಯೋಜಿಸಿದ್ದ ಕೇಂದ್ರೀಯ ಅರೆಸೇನಾ ಪಡೆಗಳ ಯೋಧರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ದೇಶ ಸುಭದ್ರವಾಗಿರಲು ಸೈನಿಕರ ಸೇವೆಯಿಂದ ಮಾತ್ರ ಸಾಧ್ಯ. ಸರ್ಕಾರಗಳು ಅವರಿಗೆ ಸಿಗುವ ಸೌಲಭ್ಯಗಳನ್ನು ಹೆಚ್ಚಿಸಬೇಕು. ಪಿಂಚಣಿ ಸೇರಿ ವಿವಿಧ ಸೌಲಭ್ಯ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ’ ಎಂದು ತಿಳಿಸಿದರು.

‘ಕೇಂದ್ರೀಯ ಶಸ್ತ್ರಾಸ್ತ್ರ ಪೊಲೀಸ್ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಾಲಯಕ್ಕೆ ಖಾಲಿ ಇರುವ ಯಾವುದಾದರೂ ಒಂದು ಸರ್ಕಾರಿ ಹಳೆ ಕಟ್ಟಡ ಅಥವಾ ಸರ್ಕಾರಿ ಜಾಗವನ್ನು ಮಂಜೂರು ಮಾಡಬೇಕೆಂಬ ಒತ್ತಾಯವಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆಯುತ್ತೆನೆ’ ಎಂದು ಹೇಳಿದರು.

ಇರಕಲ್ನ ಶಿವಶಕ್ತಿ ಪೀಠದ ಬಸವಪ್ರಸಾದ ಸ್ವಾಮಿ ಮಾತನಾಡಿ, ‘ಇಂದು ಕೇಂದ್ರೀಯ ಆರೆಸೇನಾ ಪಡೆಗಳ ಮಾಜಿ ಯೋಧರು ಸೇರಿಕೊಂಡು ಕ್ಷೇಮಾಭಿವೃದ್ಧಿಗಾಗಿ ಸಂಘಟನೆ ಮಾಡಿರುವುದು ಶ್ಲಾಘನೀಯ’ ಎಂದು ಹೇಳಿದರು.

‘ಮನುಷ್ಯ ಬಹಳ ಸ್ವಾರ್ಥ ಜೀವಿಯಾಗಿದ್ದಾನೆ. ತನ್ನ ಸುಖ, ತನ್ನ ಕುಟುಂಬದ ಸುಖ, ತನ್ನ ಪೀಳಿಗೆಯಲ್ಲ ಸುಖವಾಗಿರಬೇಕೆಂಬ ಸ್ವಾರ್ಥವನ್ನು ಹೊಂದಿದ್ದಾನೆ. ಸ್ವಾರ್ಥ ಮತ್ತು ನಿಸ್ವಾರ್ಥದ ಮದ್ಯದಲ್ಲಿ, ತನ್ನವರಿಗೋಸ್ಕರ ತನ್ನ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡುವನು ಸೈನಿಕವೊಬ್ಬನೇ. ಗಳಿಕೆಯ ಆಸೆಗಳು ಸೈನಿಕರಲ್ಲಿಲ್ಲ’ ಎಂದು ಹೇಳಿದರು.

‘ದೇಶದ ರಕ್ಷಣೆಗೆ ಶ್ರೀಮಂತರು, ರಾಜಕರಣಿಗಳ ಮನೆಯಿಂದ ಮಕ್ಕಳು ಬರುವುದಿಲ್ಲ. ಅತ್ಯಂತ ಕಟ್ಟಕಡೆಯ ಬಡವನ, ಕಾರ್ಮಿಕನ, ರೈತನ ಹಾಗೂ ಶೋಷಿತರ ಮನೆಯಿಂದ ಸೈನಿಕರು ಸೇವೆಗಾಗಿ ಬರುತ್ತಾರೆ. ಅತ್ಯಂತ ತ್ಯಾಗಮಯವಾದ, ಘೋರವಾದ ಬದುಕನ್ನು ಬದುಕುವವರು ಸೈನಿಕರು. ರಾಜ್ಯಮಟ್ಟದಲ್ಲಿ ದೊಡ್ಡ ಸಂಘಟನೆಯಾಗಬೇಕು. ತಾಲ್ಲೂಕು ಮಟ್ಟಗಳಲ್ಲಿಯೂ ಸಂಘಟನೆ ಬೆಳೆಯಬೇಕು’ ಎಂದು ಆರ್ಶಿವಾದಿಸಿದರು.

ಕಲ್ಲೂರು ಶಂಕರಾಚಾರ್ಯ ಮಠದ ಶಿವರಾಮಾನಂದ ಭಾರತಿ ಸ್ವಾಮಿ, ಪ್ರಮುಖರಾದ ವೆಂಕನಗೌಡ, ಧರ್ಮಣ್ಣ, ಕೇಂದ್ರೀಯ ಅರೆಸೇನಾ ಪಡೆಗಳ ಮಾಜಿ ಯೋಧರ ಸಂಘದ ಅಧ್ಯಕ್ಷ ಎಂ. ಪಿ. ಎನ್. ರೆಡ್ಡಿ, ಕೃಷ್ಣಮೂರ್ತಿ, ಬಸವರಾಜ ವಾಲಿ, ಎಸ್. ಮಲ್ಲಯ್ಯ, ಆಂಜನೇಯ ಜೆಲ್ಲಿ, ಬಸವರಾಜ ನಾಯಕ, ವಿಶ್ವನಾಥ ನಾಯಕ, ಸಲೀಂ ಹುಸೇನ್, ರಂಗಸ್ವಾಮಿ, ವಿಶ್ವನಾಥ, ರಂಗನಗೌಡ, ವೀರಭದ್ರಯ್ಯ, ಪಂಪಣ್ಣ, ಶಬೀರ್, ಭೀಮಣ್ಣ, ಲಕ್ಷ್ಮೀ ನಾರಾಯಣ, ಲಿಂಗನಗೌಡ, ಶರಣಬಸವ, ಮೋನುಮಿತ್ರ, ಸಾಜೀದ್ ಹುಸೇನ್, ಹಂಪನಗೌಡ ಪಾಟೀಲ, ಹನುಮಂತ, ಬಸವರಾಜ, ಸಣ್ಣೆಪ್ಪ, ಮಲ್ಲೇಶ ಸೇರಿದಂತೆ ಮಾಜಿ ಯೋಧರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-32-849230313

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.