ರಾಯಚೂರು: ‘ಭವಿಷ್ಯದಲ್ಲಿ ಹೆಣ್ಣು ಮಕ್ಕಳು ಗರ್ಭಕಂಠದ ಕ್ಯಾನ್ಸರ್ನಿಂದ ಬಳಲಬಾರದು. ಸಂತಸದ ಜೀವನಕ್ಕಾಗಿ 14 ವರ್ಷದ ಹೆಣ್ಣು ಮಕ್ಕಳಿಗೆ ಪಾಲಕರು ಎಚ್.ಪಿ.ವಿ ಲಸಿಕೆಯನ್ನು ಹಾಕಿಸಬೇಕು’ ಎಂದು ರಾಯಚೂರು ತಹಶೀಲ್ದಾರ್ ಸುರೇಶ ವರ್ಮಾ ಹೇಳಿದರು.

ನಗರದ ಡಿಎಚ್ಒ ಕಾರ್ಯಾಲಯದ ತುಂಗಾ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಆಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಸಹಯೋಗದಲ್ಲಿ ನಡೆದ ಎಚ್ಪಿವಿ ಲಸಿಕೆ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಲಸಿಕೆ ಹಾಕಿಸಲು ಎಲ್ಲರೂ ಮುಂದೆ ಬರಬೇಕು. ಇದಕ್ಕಾಗಿ ಆರೋಗ್ಯ ಇಲಾಖೆಯೊಂದಿಗೆ ಶಿಕ್ಷಣ ಇಲಾಖೆ, ವಸತಿ ನಿಲಯಗಳನ್ನು ಹೊಂದಿರುವ ವಿವಿಧ ಕಲ್ಯಾಣ ಇಲಾಖೆಗಳು ಕೈಜೊಡಿಸಬೇಕು. ಸರ್ಕಾರದ ಮಹತ್ವಾಕಾಂಕ್ಷಿ ಅಭಿಯಾನ ಯಶ ಕಾಣಬೇಕು’ ಎಂದರು.

ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ.ನಂದೀತಾ ಎಮ್.ಎನ್. ಮಾತನಾಡಿ, ’ಗರ್ಭಕಂಠದ ಕ್ಯಾನ್ಸರ್ ತಡೆಗೆ ಈ ಲಸಿಕೆ ಅತ್ಯಂತ ಉಪಯುಕ್ತವಾಗಿದೆ. ಮಾರುಕಟ್ಟೆಯಲ್ಲಿ ದೊರಕುವ ಲಸಿಕೆಗೆ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣ ಪಾವತಿಸಬೇಕು.ಸರ್ಕಾರವೇ ಉಚಿತವಾಗಿ ಹಾಕುತ್ತಿರುವ ವ್ಯವಸ್ಥೆ ಕಲ್ಪಿಸಿದ್ದು, ಪೋಷಕರು ತಾವಾಗಿಯೇ ತಮ್ಮ ಮಕ್ಕಳಿಗೆ ತಪ್ಪದೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಲಸಿಕೆ ಹಾಕಿಸಬೇಕು‘ ಎಂದು ಹೇಳಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಮೃತ ಹುಕ್ಕೇರಿ, ಶಿಕ್ಷಣ ಇಲಾಖೆಯ ಬಿಆರ್ಸಿ ಅಧಿಕಾರಿ ಯುನಸ್ ಬಾಬು, ಇಸಿಓ ರಾಮಕೃಷ್ಣ, ವೈದ್ಯಾಧಿಕಾರಿ ಡಾ. ಪರ್ಹಾನ್ ನಸ್ರೀನ್ ಖಾಜಿ, ಡಾ.ಸುನೀಲ, ಡಾ.ಗುಂಡಮ್ಮ, ಡಾ.ಅಸ್ಫಾಕ್ ಹುಸೇನ್, ಡಿಹೆಚ್ಇಓ ಈಶ್ವರ ಎಚ್ ದಾಸಪ್ಪನವರ, ಹಿರಿಯ ಎಚ್ಐಒ ಸುರೇಶ್, ಬಿಎಚ್ಇಒ ಸರೋಜಾ ಕೆ, ಹಿರಿಯ ಪಿಎಚ್ಸಿಓ ಈರಮ್ಮ, ಎಮ್ ಆ್ಯಂಡ್ಇ ಗುರುಗಂಪಾ, ಬಿಪಿಎಮ್ ವರಲಕ್ಷ್ಮೀ, ತಾಲ್ಲೂಕು ಆಶಾ ಮೇಲ್ವಿಚಾರಕಿ ಮರಿಯಾಳಮ್ಮ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.