ರಾಯಚೂರು: ‘ಶಿಕ್ಷಕರ ಸಂಘದ ಚುನಾವಣೆಯ ಮತದಾರರ ಪಟ್ಟಿಯಿಂದ ನನ್ನ ಹೆಸರು ಹಾಗೂ ಪತಿ ಮಹಾಂತೇಶ ಬಿರಾದಾರ ಹೆಸರನ್ನು ಉದ್ದೇಶಪೂರ್ವಕವಾಗಿ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಮಲ್ಲೇಶ ನಾಯಕ ಕೈಬಿಟ್ಟಿದ್ದಾರೆ’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯ ಸ್ಪರ್ಧಾಕಾಂಕ್ಷಿ ಪ್ರಮೀಳಾ ಪಾಟೀಲ ಆರೋಪಿಸಿದರು.

‘ಚುನಾವಣಾ ಪ್ರಕ್ರಿಯೆ ಸಂಪೂರ್ಣ ಅಕ್ರಮಗಳಿಂದ ಕೂಡಿದೆ. ನಾನು, ಪತಿ ಮಹಾಂತೇಶ ಬಿರಾದಾರ ಇಬ್ಬರೂ ಶಿಕ್ಷಕರಾಗಿದ್ದು, ಏಪ್ರಿಲ್ 3ರಂದು ಮತದಾರರ ಪಟ್ಟಿ ಪರಿಶೀಲಿಸಿದಾಗ ಇಬ್ಬರ ಹೆಸರೂ ಕಾಣಿಸಲಿಲ್ಲ. ಇದೇ ರೀತಿಯ ಘಟನೆ 5 ವರ್ಷಗಳ ಹಿಂದೆಯೂ ನಡೆದಿದ್ದು, ಆಗ 28 ಶಿಕ್ಷಕರ ಹೆಸರನ್ನು ಪಟ್ಟಿಯಿಂದ ತೆಗೆಯಲಾಗಿತ್ತು’ ಎಂದು ಭಾನುವಾರ ಮಾಧ್ಯಮ ಗೋಷ್ಠಿಯಲ್ಲಿ ದೂರಿದರು.

‘ಚುನಾವಣೆ ಸಂಬಂಧ ಕನಿಷ್ಠ ಒಂದು ವಾರ ಮುಂಚಿತವಾಗಿ ಪ್ರಕಟಣೆ ನೀಡಬೇಕು. ಆದರೆ, ತಾಲ್ಲೂಕಿನಲ್ಲಿ ಚುನಾವಣಾಧಿಕಾರಿ ಯಾರು, ಚುನಾವಣೆ ಸ್ಥಳ ಯಾವುದು ಎಂಬುದನ್ನು ಗುಟ್ಟಾಗಿ ಇಡಲಾಗಿದೆ. ಇದು ಪ್ರಜಾಪ್ರಭುತ್ವದ ಮೂಲತತ್ವಗಳಿಗೆ ವಿರುದ್ಧವಾಗಿದೆ’ ಎಂದು ಆರೋಪಿಸಿದರು.

ಶಿಕ್ಷಕ ಮಹಾಂತೇಶ್ ಬಿರಾದಾರ ಮಾತನಾಡಿ,‘ಹಿಂದೆ ನನ್ನ ನೇತೃತ್ವದಲ್ಲಿ ಅಧಿಕಾರ ಅನುಭವಿಸಿದವರೇ ಈಗ ನನ್ನ ಹೆಸರನ್ನು ಕೈಬಿಟ್ಟು ನಂಬಿಕೆ ದ್ರೋಹ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಈ ಸಂಬಂಧ ಈಗಾಗಲೇ ನ್ಯಾಯಾಲಯದ ಮೊರೆ ಹೋಗಿದ್ದು, ದಾಖಲೆಗಳೊಂದಿಗೆ ಮತ್ತೊಮ್ಮೆ ಹಾಜರಾಗುತ್ತೇವೆ. ನ್ಯಾಯ ಸಿಗುವ ವಿಶ್ವಾಸವಿದೆ. ನಾನು ಇರದಿದ್ದರೂ 10 ಸಾಮಾನ್ಯ ಹಾಗೂ 5 ಮಹಿಳಾ ಅಭ್ಯರ್ಥಿಗಳೊಂದಿಗೆ ಹಿರಿಯರಾದ ನಂದೀಶ್ ಅವರ ನೇತೃತ್ವದಲ್ಲಿ ಮತ್ತೆ ಚುನಾವಣೆಗೆ ಬರುತ್ತೇವೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-32-1472511582

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.