ರಾಯಚೂರು: ಕೃಷಿ ವಿಶ್ವವಿದ್ಯಾಲಯ ಕ್ರೀಡಾಂಗಣದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕೃಷಿ ಮಹಾವಿದ್ಯಾಲಯದ ಆಶ್ರಯದಲ್ಲಿ ಶುಕ್ರವಾರ ಬೆಂಕಿ ಬಿಸಿಲಲ್ಲಿ ನಡೆದ 16ನೇ ಅಂತರ ಕಾಲೇಜುಗಳ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು.

ಶೈಕ್ಷಣಿಕ ವರ್ಷ ಮುಗಿಯಲು ಮೂರೇ ದಿನ ಬಾಕಿ ಇದ್ದ ಕಾರಣ ಕೃಷಿ ವಿಶ್ವವಿದ್ಯಾಲಯದವರು ತರಾತುರಿಯಲ್ಲಿ ಬಿರು ಬೇಸಿಗೆಯಲ್ಲಿ ಕ್ರೀಡಾಕೂಟ ಆಯೋಜಿಸಿದ್ದು, ಕ್ರೀಡಾಪಟುಗಳನ್ನು ಹೈರಾಣಾಗಿಸಿತು.

ಬಿಸಿಲಿನಲ್ಲಿ ಕ್ರೀಡಾಕೂಟ ಆಯೋಜಿಸಿರುವ ಕಾರಣ ಕ್ರೀಡಾಪಟುಗಳಿಗೆ ತೊಂದರೆಯಾದರೆ ಸಮಸ್ಯೆ ಉಲ್ಬಣಗೊಳ್ಳಲಿದೆ ಎನ್ನುವ ಉದ್ದೇಶದಿಂದ ವಿಶ್ವವಿದ್ಯಾಲಯದವರು ಮಾಧ್ಯಮಗಳಿಗೆ ಕ್ರೀಡಾಕೂಟದ ಮಾಹಿತಿ ನೀಡಿರಲಿಲ್ಲ.

ಕ್ರೀಡಾ ನಿಯಮಗಳ ಪ್ರಕಾರ 100 ಮೀ., 200 ಮೀ., 400 ಮೀ. ಮತ್ತು 1500 ಮೀ. ಓಟದ ಸ್ಪರ್ಧೆಗಳನ್ನು ಬೆಳಿಗ್ಗೆ 9 ಗಂಟೆ ಒಳಗೆ ಪೂರ್ಣಗೊಳಿಸಬೇಕಿತ್ತು. ಆದರೆ, ಕ್ರೀಡಾಕೂಟ ಆರಂಭವಾಗಿದ್ದೆ ತಡವಾಗಿ, ಭಾಷಣ ಹಾರ, ತುರಾಯಿ ಕೊಡುವುದರಲ್ಲೇ ಹೆಚ್ಚು ಸಮಯ ವ್ಯರ್ಥವಾದ್ದರಿಂದ ಕ್ರೀಡಾಪಟುಗಳು ಇನ್ನಿಲ್ಲದ ತೊಂದರೆ ಅನುಭವಿಸಬೇಕಾಯಿತು.

ಮೂರು–ನಾಲ್ಕು ದಿನಗಳಿಂದ ರಾಜ್ಯದಲ್ಲೇ ಅತಿ ಹೆಚ್ಚು ಬಿಸಿಲು ಸರಾಸರಿ 40ರಿಂದ 41 ಡಿಗ್ರಿ ಸೆಲ್ಸಿಯಸ್ ಇದೆ. ಜನ ಬೆಳಿಗ್ಗೆ 8 ಗಂಟೆಯ ನಂತರ ಮನೆಗಳಿಂದ ಹೊರಗೆ ಬರಲು ಹಿಂಜರಿಯುತ್ತಿದ್ದಾರೆ. ವಿಶ್ವವಿದ್ಯಾಲಯದ ಅಧಿಕಾರಿಗಳು ವಿದ್ಯಾರ್ಥಿಗಳ ಹಿತ ಕಾಪಾಡದೆ, ಮಾರ್ಚ್ ಅಂತ್ಯಗೊಳ್ಳಲು ಮೂರು ದಿನ ಬಾಕಿ ಇರುವಾಗ ಕ್ರೀಡಾಕೂಟ ಆಯೋಜಿಸಿದ್ದು, ಕ್ರೀಡಾಪಟುಗಳು ಮಾನಸಿಕ ಹಿಂಸೆ ಅನುಭವಿಸುವಂತೆ ಮಾಡಿತು.

‘ಮೈದಾನದಲ್ಲಿ ಸಹಜವಾಗಿ ನಿಂತುಕೊಳ್ಳಲು ಸಾಧ್ಯವಾಗದಂಥ ಬೆಂಕಿ ಬಿಸಿಲು ಇದೆ. ಸರಿಯಾದ ನೆರಳಿನ ವ್ಯವಸ್ಥೆ ಸಹ ಮಾಡಿಲ್ಲ. ಅಲ್ಲಲ್ಲಿ ಇರುವ ಮರದ ಕೆಳಗೆ ಆಶ್ರಯ ಪಡೆದುಕೊಳ್ಳುತ್ತಿದ್ದೇವೆ. ನವೆಂಬರ್, ಡಿಸೆಂಬರ್ನಲ್ಲಿ ಕ್ರೀಡಾಕೂಟ ನಡೆಸಬೇಕಾಗಿತ್ತು. ನೆತ್ತಿ ಸುಡುವ ಬಿಸಿಲಲ್ಲಿ ಕ್ರೀಡಾಕೂಟ ನಡೆಸುವ ಅಗತ್ಯವಿರಲಿಲ್ಲ’ ಎಂದು ಭೀಮರಾಯನಗುಡಿಯ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು.

‘ವಿಶ್ವವಿದ್ಯಾಲಯದ ಅಧಿಕಾರಿಗಳು ತಮ್ಮ ಭಾಷಣದ ಪ್ರತಿಗಳನ್ನು ಮಾತ್ರ ಪತ್ರಿಕೆಗಳಿಗೆ ಕಳಿಸುತ್ತಾರೆ. ಕ್ರೀಡಾಕೂಟದಲ್ಲಿ ಜಯ ಸಾಧಿಸಿದ ವಿದ್ಯಾರ್ಥಿಗಳ ಹೆಸರು ಬಹಿರಂಗ ಪಡಿಸುವುದಿಲ್ಲ. ಕ್ರೀಡಾ ಪ್ರತಿಭೆಗಳು ಬೆಳೆಯಬೇಕು ಎನ್ನುವ ಉದ್ದೇಶ ಅವರಿಗೆ ಇಲ್ಲ’ ಎಂದು ಕ್ರೀಡಾಪಟುಗಳು ಆಕ್ರೋಶ ವ್ಯಕ್ತಪಡಿಸಿದರು.

ವಿವಿಯಿಂದ ಅಪೂರ್ಣ ಮಾಹಿತಿ

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಯಾವುದೇ ಕ್ರೀಡಾ ಆಯೋಜಿಸಿದರೂ ಗೆದ್ದ ಕ್ರೀಡಾಪಟುಗಳ ಹೆಸರುಗಳನ್ನು ಬಹಿರಂಗ ಪಡಿಸುವುದಿಲ್ಲ. ಮಾಧ್ಯಮಗಳಿಗೂ ಪ್ರಕಟಣೆ ಕೊಡುವುದಿಲ್ಲ. ಮಾಧ್ಯಮಗಳಿಗೆ ಕಳಿಸುವ ಮಾಹಿತಿಯೇ ಅಪೂರ್ಣವಾಗಿರುತ್ತದೆ.

ಅಷ್ಟೇ ಅಲ್ಲ ಗೊಂದಲಗಳಿಂದ ಕೂಡಿರುತ್ತದೆ. ಕ್ರೀಡಾಕೂಟದಲ್ಲಿ ವಿಜೇತ ವಿದ್ಯಾರ್ಥಿಗಳ ಹೆಸರು ಕಳಿಸುವಂತೆ ವಿಶ್ವವಿದ್ಯಾಲಯದ ಕುಲಪತಿ ಹನುಮಂತಪ್ಪ ಅವರಿಗೆ ಮಾಧ್ಯಮ ಪ್ರತಿನಿಧಿಗಳು ಅನೇಕ ಬಾರಿ ನೇರವಾಗಿಯೇ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ವಾಸ್ತವದಲ್ಲಿ ಕೆಳ ಹಂತದ ಅಧಿಕಾರಿಗಳು ಕುಲಪತಿ ಅವರ ಮಾತನ್ನೇ ಕೇಳುತ್ತಿಲ್ಲ. ಅವ್ಯವಸ್ಥೆ ಹೆಚ್ಚಿರುವುದು ಹಲವು ಗೊಂದಲಗಳಿಗೆ ಕಾರಣವಾಗಿದೆ.

‘ಮಾಧ್ಯಮಗಳಿಗೆ ಕ್ರೀಡಾಕೂಟದಲ್ಲಿ ವಿಜೇತರ ಹೆಸರುಗಳನ್ನು ಕೊಡುವಂತೆ ಸೂಚಿಸಲಾಗಿತ್ತು. ಆದರೂ ಸಂಬಂಧಪಟ್ಟವರು ಕೊಟ್ಟಿಲ್ಲ. ಸರಿಯಾದ ವಿಜೇತರ ಪಟ್ಟಿ ಕೊಡುವ ವ್ಯವಸ್ಥೆ ಮಾಡಲಾಗುವುದು’ ಎಂದು ವಿಶ್ವವಿದ್ಯಾಲಯದ ಕುಲಪತಿ ಹನುಮಂತಪ್ಪ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.