ರಾಯಚೂರು: ಆರ್ಯವೈಶ್ಯ ಸಮಾಜ, ನಗರೇಶ್ವರ ದೇವಸ್ಥಾನ ಸಮಿತಿಯ ಆಶ್ರಯದಿಂದ ಏ. 22 ರಿಂದ 26ರವರೆಗೆ ವಾಸವಿ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಆರ್ಯವೈಶ್ಯ ಸಮಾಜದ ಅಧ್ಯಕ್ಷ ಪುರುಷೋತ್ತಮ ತಿಳಿಸಿದರು.

ಏ.22 ರಂದು ಬೆಳಿಗ್ಗೆ 5ಕ್ಕೆ ಸುಪ್ರಭಾತ, 7ಕ್ಕೆ ಧ್ವಜಾರೋಹಣ, ಕಳಸ ಸ್ಥಾಪನೆ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, 11.30ಕ್ಕೆ ಕಳಸ ಅಲಂಕಾರ ಸ್ಪರ್ಧೆ ನಡೆಯಲಿದೆ. ಇದಕ್ಕೂ ಮುನ್ನ ಆರ್ಯವೈಶ್ಯ ಗೀತಾ ಮಂದಿರದಿಂದ ನಗರೇಶ್ವರ ದೇವಸ್ಥಾನದವರೆಗೂ ಮೆರವಣಿಗೆ ಏರ್ಪಡಿಸಲಾಗಿದೆ ಎಂದು ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಏ.23 ರಂದು ಸಂಜೆ 6.15ಕ್ಕೆ ರಾಯಚೂರು ಶೇಷಗಿರಿದಾಸ ಅವರಿಂದ ದಾಸವಾಣಿ, 8.15ಕ್ಕೆ ಗಜವಾಹನ ಉತ್ಸವ, ತೊಟ್ಟಿಲ ಸೇವೆ ನಡೆಯಲಿದೆ. 24ರಂದು ಬೆಳಿಗ್ಗೆ 11.30ಕ್ಕೆ ದೇವಿಗೆ ತುಲಾಭಾರ, ಸಂಜೆ 6.30ರಿಂದ ಸ್ಪೂರ್ತಿ ಡಾನ್ಸ್ ಅಕಾಡೆಮಿ ಕಲಾವಿದರಿಂದ ನೃತ್ಯ ಹಾಗೂ ರಾತ್ರಿ 8.15ಕ್ಕೆ ಅಶ್ವ ವಾಹನ ಉತ್ಸವ ನಡೆಯಲಿದೆ ಎಂದು ವಿವರಿಸಿದರು.

25ರಂದು ಬೆಳಿಗ್ಗೆ 9ಕ್ಕೆ ಡಾ. ಪ್ರೇಮ್ ಕುಮಾರ ಉಚಿತ ಆರೋಗ್ಯ ತಪಾಸಣೆ ಮಾಡಲಿದ್ದಾರೆ. ಸಂಜೆ 6.30 ರಿಂದ ಬಹುಮಾನ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾತ್ರಿ 8.15ಕ್ಕೆ ಕಾಮಧೇನು ಕಲ್ಪವೃಕ್ಷ ವಾಹನ ಉತ್ಸವ ನಡೆಯಲಿದೆ. 26ರಂದು ಸಂಜೆ 5.30ಕ್ಕೆ ವಾಸವಿ ದೇವಿಯ ಮೆರವಣಿಗೆ ನಡೆಯಲಿದೆ. 6ಕ್ಕೆ ಬೆಳ್ಳಿ ಕವಚ ಅಲಂಕಾರ ದರ್ಶನ ಆಯೋಜಿಸಲಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಚಿಗರಂಬಟ್ಲ ಪದ್ಮರಾಜ, ನೆಲ್ಲೂರು ಶ್ರೀನಿವಾಸ, ಬಿ. ಜಗದೀಶ ಗುಪ್ತಾ, ಬಿ. ಗೋವಿಂದ, ಕೆ.ಸಿ.ವೀರೇಶ, ದೇವನಪಲ್ಲಿ ವೆಂಕಣ್ಣ ಶೆಟ್ಟಿ, ಚ್ಯಾಗಿ ವೆಂಕಟೇಶ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-32-1292985065

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.