ಮಂಜುನಾಥ ಎನ್ ಬಳ್ಳಾರಿ

ಕವಿತಾಳ: ಇಲ್ಲಿಗೆ ಸಮೀಪದ ವಟಗಲ್ ಗ್ರಾಮದಲ್ಲಿ ಸರ್ಕಾರಿ ಶಾಲೆಯನ್ನು ಶನಿವಾರ ಸ್ವಚ್ಛಗೊಳಿಸಿದ ಹಳೆ ವಿದ್ಯಾರ್ಥಿಗಳು ನೂತನ ಶೈಕ್ಷಣಿಕ ವರ್ಷಾರಂಭಕ್ಕೆ ವಿದ್ಯಾರ್ಥಿಗಳ ಸ್ವಾಗತಕ್ಕೆ ಶಾಲೆಯನ್ನು ಅಣಿಗೊಳಿಸಿದರು.

ಬೇಸಿಗೆಯ ರಜೆ ಅವಧಿ ಮುಗಿದು ಜೂ.1ರಂದು ತರಗತಿಗಳು ಪುನರಾರಂಭ ಆಗಲಿರುವ ಹಿನ್ನೆಲೆಯಲ್ಲಿ ಶಾಲಾ ಆವರಣದಲ್ಲಿನ ಕಸ, ಕಡ್ಡಿ, ಮತ್ತಿತರ ತ್ಯಾಜ್ಯ ವಸ್ತುಗಳನ್ನು ತೆಗೆದು ಸ್ವಚ್ಛಗೊಳಿಸಿದರು. ಗಿಡ–ಮರಗಳ ಕೊಂಬೆಗಳನ್ನು ಸಮನಾಗಿ ಕತ್ತರಿಸಿ, ಸುತ್ತಲಿನ ಕಸ ತೆಗೆದರು. ತರಗತಿ ಕೊಠಡಿಗಳು, ಬಿಸಿಯೂಟ ತಯಾರಿಸುವ ಅಡುಗೆ ಕೋಣೆಯಲ್ಲಿ ಸ್ವಚ್ಛತೆಯ ಜೊತೆಗೆ ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು.

‘ನಮ್ಮೂರ ಶಾಲೆ ಸ್ವಚ್ಛ ಮತ್ತು ಅಂದ, ಆಕರ್ಷಕವಾಗಿರಬೇಕು. ಮಕ್ಕಳನ್ನು ಶಾಲೆಯ ಕಡೆ ಸೆಳೆಯುವಂತ ವಾತಾವರಣ ನಿರ್ಮಾಣವಾಗಬೇಕು. ಎರಡು ತಿಂಗಳ ನಂತರ ಶಾಲೆಗಳು ಪುನರಾರಂಭ ಆಗಲಿದ್ದು, ರಜೆ ಅವಧಿಯಲ್ಲಿ ಕಸ ಕಡ್ಡಿ ಮತ್ತು ಜೀಡಿ ಹುಳು ಹಿಡಿದು ಗಲೀಜು ಉಂಟಾಗಿರುತ್ತದೆ.

ಹೀಗಾಗಿ ಸ್ವಯಂ ಪ್ರೇರಣೆಯಿಂದ ಶಾಲೆಯನ್ನು ಸ್ವಚ್ಛಗೊಳಿಸಲಾಯಿತು ಎಂದು ಹಳೆ ವಿದ್ಯಾರ್ಥಿಗಳಾದ ಪಂಪಾಪತಿ, ಮಹೇಶ ಹಾಗೂ ಬಸವರಾಜ ಹೇಳಿದರು.

ಸ್ಥಳೀಯರು, ಹಳೆ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸುತ್ತಾರೆ ಮತ್ತು ಶಾಲೆಯಲ್ಲಿನ ಯಾವುದೇ ರೀತಿಯ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವದಿಂದ ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ಕಲ್ಪಿಸಲು ಸಾಧ್ಯವಾಗಿದೆ’ ಎಂದು ಎಸ್ಡಿಎಂಸಿ ಅಧ್ಯಕ್ಷ ಅಮರೇಶ ಸಾನಬಾಳ ಅವರು ಹೇಳಿದರು.

ಶಾಲೆಗೆ ಭೇಟಿ ನೀಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಮ್ಮನಗೌಡ ಶಾಲೆಯಲ್ಲಿ ನೀರಿನ ವ್ಯವಸ್ಥೆ ಮಾಡಲು ಪಂಚಾಯಿತಿ ವತಿಯಿಂದ ಮೋಟಾರು ಅಳವಡಿಸಲು ಕ್ರಮ ಕೈಗೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-32-132604896

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.