ರಾಯಚೂರು: ಬೇಸಿಗೆ ಕಾರಣ ಎಲ್ಲ ಬಗೆಯ ಸೊಪ್ಪುಗಳ ಬೆಲೆ ದುಬಾರಿಯಾಗಿದೆ. ₹20ಕ್ಕೆ ಎರಡು ಅಥವಾ ಮೂರು ಕಟ್ಟು ಸೊಪ್ಪು ಮಾರಾಟವಾಗುತ್ತಿದೆ. ಪ್ರಮುಖ ತರಕಾರಿ ಬೆಲೆಯಲ್ಲೂ ತುಸು ಹೆಚ್ಚಳವಾಗಿದೆ.

ಹಸಿ ಶುಂಠಿ ಬೆಲೆ ದುಪ್ಪಟ್ಟಾಗಿದೆ. ಪ್ರತಿ ಕ್ವಿಂಟಲ್ಗೆ ಈರುಳ್ಳಿ ₹500, ಹೂಕೋಸು, ಟೊಮೆಟೊ ₹1 ಸಾವಿರ, ಗಜ್ಜರಿ ₹2 ಸಾವಿರ ಹೆಚ್ಚಾಗಿದೆ. ಬೆಳ್ಳುಳ್ಳಿ, ಆಲೂಗಡ್ಡೆ, ಎಲೆಕೋಸು, ಬೀಟ್ರೂಟ್, ಬೀನ್ಸ್, ಬೆಂಡೆಕಾಯಿ, ತುಪ್ಪದ ಹಿರೇಕಾಯಿ, ಚವಳೆಕಾಯಿ, ಸೌತೆಕಾಯಿ ಬೆಲೆ ಸ್ಥಿರವಾಗಿದೆ.

ಬದನೆಕಾಯಿ, ಡೊಣ ಮೆಣಸಿನ ಕಾಯಿ, ಹಿರೇಕಾಯಿ, ತೊಂಡೆಕಾಯಿ, ಹಸಿ ಮೆಣಸಿನಕಾಯಿ ಬೆಲೆ ಕಡಿಮೆ ಯಾಗಿದೆ. ಕೊಂಬಿನ ತರಕಾರಿ ಬೆಲೆ ಹೆಚ್ಚಿಸಿಕೊಳ್ಳದೇ ಗ್ರಾಹಕರ ಹಿತ ಕಾಯ್ದಿವೆ.

ಮಹಾರಾಷ್ಟ್ರದ ನಾಸಿಕ್ನಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಬಂದಿದೆ. ರಾಯಚೂರು ತಾಲ್ಲೂಕಿನ ಗಡಿ ಗ್ರಾಮಗಳು, ಆಂಧ್ರಪ್ರದೇಶ, ತೆಲಂಗಾಣ ಗಡಿ ಗ್ರಾಮಗಳಿಂದ ಟೊಮೆಟೊ, ಎಲೆಕೋಸು, ಹೂಕೋಸು, ಬದನೆಕಾಯಿ, ಸೌತೆಕಾಯಿ ಸೇರಿದಂತೆ ಕೆಲ ಕಾಯಿಪಲ್ಲೆ ನಗರದ ತರಕಾರಿ ಸಗಟು ಮಾರುಕಟ್ಟೆಗೆ ಬಂದಿದೆ.

‘ಬೇಸಿಗೆ ಕಾರಣ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ತಾಜಾ ತರಕಾರಿ ಬಂದಿದೆ. ಹೀಗಾಗಿ ಸಹಜವಾಗಿ ಬೆಲೆ ಏರಿದೆ. ಒಂದು ತಿಂಗಳು ತರಕಾರಿ ಬೆಲೆ ದುಬಾರಿಯಾಗಿದ್ದರೂ ಅಚ್ಚರಿ ಇಲ್ಲ’ ಎಂದು ತರಕಾರಿ ವ್ಯಾಪಾರಿ ಸುನೀಲಕುಮಾರ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.