ರಾಯಚೂರು: ತರಕಾರಿ ಮಾರುಕಟ್ಟೆಯಲ್ಲಿ ಈರುಳ್ಳಿ, ಆಲೂಗಡ್ಡೆ, ಹಸಿಶುಂಠಿ, ಬೀಟ್ರೂಟ್, ಟೊಮೆಟೊ, ಬದನೆಕಾಯಿ, ಬೆಂಡೆಕಾಯಿ, ಚವಳೆಕಾಯಿ, ಎಲೆಕೋಸು, ಹಿರೇಕಾಯಿ, ಸೌತೆಕಾಯಿ ಬೆಲೆ ಸ್ಥಿರವಾಗಿದೆ. ಬೆಳ್ಳುಳ್ಳಿ, ಹೂಕೋಸು, ಗಜ್ಜರಿ ಹಾಗೂ ತುಪ್ಪದ ಹಿರೇಕಾಯಿ ಬೆಲೆ ಕಡಿಮೆಯಾಗಿದೆ.

ಗಿಳಿ ಹಸಿರು ಮೆಣಸಿನಕಾಯಿ ಕೆ.ಜಿಗೆ ₹40 ಹಾಗೂ ಕಡು ಹಸಿರು ಮೆಣಸಿನಕಾಯಿ ಕೆ.ಜಿಗೆ ₹80 ಆಗಿದೆ. ಬೇಸಿಗೆಯಲ್ಲಿ ಹಸಿ ಮೆಣಸಿನಕಾಯಿ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ. ನುಗ್ಗೆಕಾಯಿ ಬೆಲೆ ದುಪ್ಪಟ್ಟಾಗಿದೆ. ಪ್ರತಿ ಕೆ.ಜಿ ತೊಂಡೆಕಾಯಿ ₹1ಸಾವಿರ ಹಾಗೂ ಡೊಣಮೆಣಸಿನಕಾಯಿ ₹2 ಸಾವಿರ ಹೆಚ್ಚಾಗಿದೆ. ಬೀನ್ಸ್ ಬೆಲೆ ಕೆ.ಜಿಗೆ ₹160 ತಲುಪಿ ಗ್ರಾಹಕರು ಹುಬ್ಬೇರಿಸುವಂತೆ ಮಾಡಿದೆ.

ಮಹಾರಾಷ್ಟ್ರದ ನಾಸಿಕ್ನಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಬಂದಿದೆ. ಬೆಳಗಾವಿ ಜಿಲ್ಲೆಯಿಂದ ಹಸಿ ಮೆಣಸಿನಕಾಯಿ ಆವಕವಾಗಿದೆ. ರಾಯಚೂರು ತಾಲ್ಲೂಕಿನ ಗಡಿ ಗ್ರಾಮ, ಆಂಧ್ರಪ್ರದೇಶ, ತೆಲಂಗಾಣ ಗಡಿ ಗ್ರಾಮಗಳು ಹಾಗೂ ಜಿಲ್ಲೆಯ ಗ್ರಾಮೀಣ ಪ್ರದೇಶದಿಂದ ಟೊಮೆಟೊ, ಎಲೆಕೋಸು, ಹೂಕೋಸು, ಬದನೆಕಾಯಿ, ಸೌತೆಕಾಯಿ ಸೇರಿದಂತೆ ಕೆಲ ಕಾಯಿಪಲ್ಲೆ ಇಲ್ಲಿಯ ತರಕಾರಿ ಸಗಟು ಮಾರುಕಟ್ಟೆಗೆ ಬಂದಿದೆ.

‘ನಾಲ್ಕು ದಿನ ಬಿಸಿಲಿನ ತಾಪ ಕಡಿಮೆಯಾದರೂ ಸೆಕೆ ಕಡಿಮೆಯಾಗಿಲ್ಲ. ಬಾಯಾರಿಕೆಯಿಂದ ನೀರು ಕುಡಿಯುವುದು ಹೆಚ್ಚಾಗಿದೆ. ಬಿಸಿಲಿನ ಕಾರಣ ಹೊಟ್ಟೆ ತುಂಬ ಊಟ ಮಾಡಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ತರಕಾರಿ ಮಾರಾಟ ಸಹ ಮಂದಗತಿಯಲ್ಲಿ ಪ್ರಮುಖ ತರಕಾರಿ ಬೆಲೆ ಕಡಿಮೆಯಾಗಿದೆ. ಇನ್ನು ಎರಡು ವಾರ ತರಕಾರಿ ಬೆಲೆ ಇದೇ ರೀತಿ ಮುಂದುವರಿಯುವ ಸಾಧ್ಯತೆ ಇದೆ’ ಎಂದು ತರಕಾರಿ ವ್ಯಾಪಾರಿ ಸುನೀಲಕುಮಾರ ಹೇಳುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-32-613371671

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.