ರಾಯಚೂರು: ಹಳ್ಳಿಗಳಲ್ಲಿ ಜಾತ್ರೆ, ಹಬ್ಬಗಳಲ್ಲಿ ಸಾಮಾಜಿಕ ನಾಟಕಗಳ ಮೂಲಕ ಹಳ್ಳಿಯ ಜನ ರಂಗಭೂಮಿಯ ಕಲೆಗಳನ್ನು ಇನ್ನೂ ಜೀವಂತವಾಗಿಟ್ಟಿದ್ದಾರೆ. ಈ ವರ್ಷ ನಮ್ಮ ಗ್ರಾಮದಲ್ಲಿ ರಂಗ ಕನಸು ರಂಗ ಕೇಂದ್ರ ಸಂಘದಿಂದ ನಾಟಕ ಪ್ರದರ್ಶನ ಮಾಡುತ್ತಿರುವುದು ತುಂಬಾ ಸಂತೋಷ ತಂದಿದೆ ಎಂದು ಗ್ರಾಮದ ಹಿರಿಯರಾದ ರಾಮಲಿಂಗಯ್ಯ ಸ್ವಾಮಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮಂಡಲಗೇರಾ ಗ್ರಾಮದಲ್ಲಿ ಮಾರೆಮ್ಮ ದೇವಿ ಜಾತ್ರೆಯ ಅಂಗವಾಗಿ ರಂಗ ಕನಸು ರಂಗ ಕೇಂದ್ರ ಮಂಡಲಗೇರಾ ತಂಡದಿಂದ ಆಯೋಜಿಸಿ ಪ್ರಸ್ತುತಪಡಿಸಿದ ಮೊಗಳಲ್ಲಿ ನಾಗರಾಜ ಅವರ ಗೂಂಡಾ ರಾಜ್ಯದಲ್ಲಿ ಗಂಡುಗಲಿ ಎನ್ನುವ ಸಾಮಾಜಿಕ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮದ ಮುಖಂಡ ನರಸಣ್ಣ ಗೌಡ ಮಾತನಾಡಿ, ‘ಮಂಡಲಗೇರಾ ಗ್ರಾಮದಲ್ಲಿ ಇಪ್ಪತ್ತು ವರ್ಷಗಳ ನಂತರ ಈ ಬಾರಿ ಜಾತ್ರೆಯ ಅಂಗವಾಗಿ ನಾಟಕ ಪ್ರದರ್ಶನವಾಗುತ್ತಿದೆ. ಇನ್ನು ಮುಂದೆ ಇದೇ ರೀತಿ ರಂಗ ಕನಸು ರಂಗ ಕೇಂದ್ರ ಸಂಘವು ಪ್ರತಿವರ್ಷ ಗ್ರಾಮದಲ್ಲಿ ಈ ನಾಟಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಪ್ರದರ್ಶನಗಳನ್ನೂ ನೀಡಲಿ ಗ್ರಾಮದ ಎಲ್ಲರೂ ಬೆಂಬಲವಾಗಿರುತ್ತಾರೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಲ್ಲನಗೌಡ ದಳಪತಿ, ಎಂಕೆಟಿ ಶಾಲೆಯ ನಿರ್ದೇಶಕ ತಾಯಪ್ಪ, ವಿಜಯ ಕುಮಾರ, ಶಿವಮೂರ್ತಿ ಗೌಡ, ರಜನಿಕಾಂತ ರೆಡ್ಡಿ, ಬಸವರಾಜ ಗೌಡ, ರಂಗ ಕನಸು ಅಧ್ಯಕ್ಷ ಕರಿಯಪ್ಪ, ಗ್ರಾಮ ಪಂಚಾಯಿತಿ ಸದಸ್ಯೆ ಪಾಂಟಮ್ಮ, ಮಲ್ಲೇಶ, ನಾಗರಾಜ, ಮುನಿಯಪ್ಪ ಸೇರಿದಂತ ಗ್ರಾಮದ ಮುಖಂಡರು, ಹಿರಿಯರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-32-810675246

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.