ಕವಿತಾಳ: ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಕೆರೆಗಳನ್ನು ನಿರ್ಮಿಸಲಾಗಿದೆ. ತುಂಗಭದ್ರಾ ಎಡದಂಡೆ ಕಾಲುವೆಯಿಂದ ಕೆರೆಗಳಿಗೆ ನೀರು ಭರ್ತಿ ಮಾಡಲಾಗುತ್ತದೆ.

ನಿರ್ವಹಣೆ ಕೊರತೆ, ಪದೇ ಪದೇ ಪೈಪ್ಲೈನ್ ಹಾಳಾಗುವುದು, ಮತ್ತಿತರ ತಾಂತ್ರಿಕ ಸಮಸ್ಯೆಗಳಿಂದ ಕೆಲವು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಸಾಮಾನ್ಯವಾಗಿದೆ. ವಿಶೇಷವಾಗಿ ಬೇಸಿಗೆಯಲ್ಲಿ ನೀರಿಗಾಗಿ ನಿತ್ಯ ಪರದಾಡುವ ಪರಿಸ್ಥಿತಿ ಉಂಟಾಗುತ್ತದೆ.

ಮಸ್ಕಿ ತಾಲ್ಲೂಕಿನ ವಟಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇರಕಲ್ ಗ್ರಾಮದಲ್ಲಿ ನಿರ್ಮಿಸಿದ ಕೆರೆಯಿಂದ ಅಮೀನಗಡ, ವಟಗಲ್ ಮತ್ತು ಪಾಮನಕಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ನೀರು ಪೂರೈಸಬೇಕಿದೆ. ಪಂಚಾಯಿತಿ ಕೇಂದ್ರ ಸ್ಥಾನ ಮತ್ತು ಕೆಲವು ಹಳ್ಳಿಗಳಿಗೆ ಹೊರತುಪಡಿಸಿ, ಬಹುತೇಕ ಹಳ್ಳಿಗಳಿಗೆ ಕೆರೆ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಅಮೀನಗಡ ಗ್ರಾಮದಲ್ಲಿ ಎರಡು ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಕೆರೆ ನೀರು ಸರಬರಾಜು ಸ್ಥಗಿತವಾದರೆ, ಊರಿನ ಕೆಳ ಭಾಗದಲ್ಲಿ ಮತ್ತು ಹಿಂದಿನ ಓಣಿಯಲ್ಲಿ ನೀರಿನ ಸಮಸ್ಯೆ ತೀವ್ರವಾಗುತ್ತದೆ. ಊರ ಹೊರಗಿನ ಗದ್ದುಗೆ ಹತ್ತಿರ ನಿರ್ಮಿಸಿದ ನೀರಿನ ತೊಟ್ಟಿಯಿಂದ ಸೈಕಲ್ ಮತ್ತು ತಳ್ಳು ಬಂಡಿಗಳಲ್ಲಿ ನೀರು ತರಬೇಕಾದ ಅನಿವಾರ್ಯತೆ ಎದುರಾಗುತ್ತದೆ.

ಹಿಂದಿನ ಓಣಿ ಸ್ವಲ್ಪ ಎತ್ತರದ ಪ್ರದೇಶವಾಗಿದ್ದು, ಇದೇ ವಿಷಯ ನೀರಿನ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ತೊಟ್ಟಿ ನಿರ್ಮಿಸಿ ನೀರು ಪೂರೈಸಬೇಕು ಎಂದು ಭೀಮಪ್ಪ ಇಟಗಿ, ಈರಪ್ಪ ನಾಯಕ, ಮಂಜುನಾಥ ಸಾಗರ, ಹುಚ್ಚಪ್ಪಗೌಡ, ಮಲ್ಲಪ್ಪ, ಅಬ್ದುಲ್ ಮತ್ತು ಶರಣಪ್ಪ ಆಗ್ರಹಿಸಿದರು.

‘ಎತ್ತರದ ಗುಡ್ಡ ಪ್ರದೇಶದಲ್ಲಿನ ಯತಗಲ್ ಗ್ರಾಮಕ್ಕೆ ಕೆರೆ ನೀರು ಪೂರೈಕೆ ಸವಾಲಾಗಿದೆ. ಅಮೀನಗಡ ಗ್ರಾಮದಲ್ಲಿ ತೊಟ್ಟಿ ನಿರ್ಮಿಸಿ, ಅದರಲ್ಲಿ ನೀರು ಸಂಗ್ರಹ ಮಾಡಿ, ಯತಗಲ್ಗೆ ಪೂರೈಸುವ ವ್ಯವಸ್ಥೆ ಮಾಡಿದ್ದರೂ ನೀರು ಪೂರೈಕೆಯಲ್ಲಿ ನಿರಂತರ ವ್ಯತ್ಯಯ ಉಟಾಗುತ್ತದೆ’ ಎಂದು ಗ್ರಾಮಸ್ಥರು ಆರೋಪಿಸಿದರು.

ಗ್ರಾಮದ ಹಿಂದಿನ ಓಣಿಗೆ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ಸ್ಥಳೀಯ ಆಡಳಿತ ತುರ್ತು ಗಮನಹರಿಸಬೇಕು.
ರಶೀದ್ ಬಂಕದ, ಅಮೀನಗಡ ನಿವಾಸಿ

ಪಾಮನಕಲ್ಲೂರು ಗ್ರಾಮದಲ್ಲಿ ಜೆಜೆಎಂ ಯೋಜನೆಯಡಿ ಮನೆಗಳಿಗೆ ನಳದ ಸಂಪರ್ಕ ಮಾತ್ರ ಕಲ್ಪಿಸಲಾಗಿದೆ. ಅದರಲ್ಲಿ ನೀರು ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು.
-ರಮೇಶ ಗಂಟ್ಲಿ, ಪಾಮನಕಲ್ಲೂರು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-32-1415421076

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.