ದೂರದಿಂದ ನೀರು ಹೊತ್ತು ತಂದು ದಿನ ಸಾಗಿಸುತ್ತಿದ್ದೇವೆ. ಆದರೆ ನಮ್ಮ ಸಂಕಷ್ಟ ಕೇಳಲು ಜಿಲ್ಲೆಯಲ್ಲಿ ಯಾರಿಗೂ ಸಮಯವಿಲ್ಲ
ನಜೀರ್ ಸಾಬ್, ಗ್ರಾಮಸ್ಥ
ಗ್ರಾಮದಲ್ಲಿ ಕೆರೆ ಇದ್ದರೂ ಶುದ್ಧೀಕರಿಸಿ ನೀರು ಪೂರೈಕೆ ಮಾಡಲು ಪಂಚಾಯಿತಿ ಮುಂದಾಗುತ್ತಿಲ್ಲ. ಕೂಡಲೇ ಜಿಲ್ಲಾ ಮಟ್ಟದ ಅಧಿಕಾರಿಗಳು ಕೆರೆ ಶುದ್ಧೀಕರಿಸಿ ನೀರು ಪೂರೈಕೆ ಮಾಡಲು ಮುಂದಾಗಬೇಕು
ವಸಂತಕುಮಾರ ನಾಯಕ, ಗ್ರಾಮಸ್ಥ
ರಾಯಚೂರು ತಾಲ್ಲೂಕಿನ ಕಮಲಾಪುರ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಿ ಸಮರ್ಪಕವಾಗಿ ನೀರು ಸರಬರಾಜು ಮಾಡುವಂತೆ ಕ್ರಮ ಕೈಗೊಳ್ಳಲಾಗುವುದು