ರಾಯಚೂರು: ನೆರೆಯ ಜಿಲ್ಲೆಗಳಲ್ಲಿನ ಕುರಚಲು ಕಾಡಿನಲ್ಲಿ ವನ್ಯಜೀವಿಗಳನ್ನು ಬೇಟೆಯಾಡಿ ಊರು ಸೇರಿಕೊಳ್ಳುತ್ತಿರುವ ಕಳ್ಳಬೇಟೆಗಾರರನ್ನು ಪತ್ತೆ ಹಚ್ಚಲು ಜಿಲ್ಲೆಯ ಅರಣ್ಯ ಇಲಾಖೆಯ ಅಧಿಕಾರಿಗಳು ವಿಶೇಷ ತಂಡ ರಚಿಸಿದ್ದಾರೆ.

ವಿಶೇಷ ತಂಡವು ಮೂರು ದಿನಗಳಿಂದ ಹಗಲು ರಾತ್ರಿ ಎನ್ನದೇ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಮಾಡುತ್ತಿದ್ದಾರೆ. ಕಾರ್ಯಾಚರಣೆ ಸಂದರ್ಭದಲ್ಲಿ ಕಳ್ಳಬೇಟೆಗಾರ ಜಾಲದ ಯುವಕನೊಬ್ಬನನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಯಚೂರು ಜಿಲ್ಲೆಯಲ್ಲಿ ವನ್ಯಜೀವಿಗಳ ಕಳ್ಳಬೇಟೆ ಪ್ರಕರಣ ನಡೆಯುವುದು ಅಪರೂಪ. ಆದರೆ, ಜಿಲ್ಲೆಯ ದೇವದುರ್ಗ ತಾಲ್ಲೂಕಿನ ತಂಡವೊಂದು ರಹಸ್ಯವಾಗಿ ನೆರೆಯ ಜಿಲ್ಲೆಗಳು ಹಾಗೂ ಬೆಳಗಾವಿ ಜಿಲ್ಲೆಯ ಅರಣ್ಯ ಪ್ರದೇಶಗಳಿಗೆ ಹೋಗಿ ಮೊಲಗಳನ್ನು ಬೇಟೆ ಆಡುವುದು ಮುಂದುವರಿಸಿತ್ತು. ಆರೋಪಿಗಳನ್ನು ಪತ್ತೆ ಹಚ್ಚುವುದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿತ್ತು.

ಯುಗಾದಿ ಸಂದರ್ಭದಲ್ಲಿ ಕೆಲವರು ಮೊಲಗಳನ್ಜು ಬೇಟೆಯಾಡುವ ಸಂಪ್ರದಾಯ ರೂಢಿಸಿಕೊಂಡಿದ್ದರು. ವನ್ಯಜೀವಿ ಸಂರಕ್ಷಣೆಯ ಜಾಗೃತಿ ಹಾಗೂ ಬಿಗಿ ಕ್ರಮಗಳಿಂದಾಗಿ ರಾಯಚೂರು ಜಿಲ್ಲೆಯಲ್ಲಿ ಕಡಿವಾಣ ಬಿದ್ದಿದೆ. ಆದರೆ, ತೆರೆಮರೆಯಲ್ಲಿ ಕೆಲವರು ಕಳ್ಳಬೇಟೆ ನಡೆಸುತ್ತಿದ್ದರು. ಇದೀಗ ಅದಕ್ಕೂ ಕಡಿವಾಣ ಹಾಕಲಾಗಿದೆ.

‘ದೇವದುರ್ಗ ಪ್ರಾದೇಶಿಕ ಅರಣ್ಯ ವಲಯದ ವಲಯ ಅರಣ್ಯಧಿಕಾರಿ ಅಲಿವುದ್ದಿನ್ ನೇತೃತ್ವದಲ್ಲಿ ಉಪ ವಲಯ ಅರಣ್ಯಧಿಕಾರಿ, ಗಸ್ತು ಅರಣ್ಯ ಪಾಲಕರ ತಂಡ ರಚಿಸಿ ಉಡ ಮತ್ತು ಮೊಲಗಳನ್ನು ಭೇಟೆಯಾಡಿ ಇನ್ಸ್ಟ್ರಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದ ಆಕಳಕುಂಪಿಯ ಬಸಯ್ಯ ಅಲಿಯಾಸ್ ಮುದ್ದಪ್ಪ ಆಕಳಕುಂಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ’ ಎಂದು ರಾಯಚೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ ಬಾಬು ತಿಳಿಸಿದ್ದಾರೆ.

‘ಚಿರತೆ, ಕೃಷ್ಣಮೃಗ, ಉಡ, ಕಾಡುಹಂದಿ ಹಾಗೂ ಮೊಲಗಳ ವಾಸಕ್ಕೆ ಸೂಕ್ತವಾದ ಕುರುಚಲು ಕಾಡು ರಾಯಚೂರು ಜಿಲ್ಲೆಯಲ್ಲಿ ಇದೆ. ಅರಣ್ಯ ಇಲಾಖೆಯ ಬಿಗಿ ಕ್ರಮಗಳಿಂದಾಗಿ ವನ್ಯಜೀವಿಗಳು ಬದುಕಲು ಸಾಧ್ಯವಾಗಿವೆ. ಆದರೂ ಕೆಲವು ಕಿಡಿಗೇಡಿಗಳು ತೆರೆಮರೆಯಲ್ಲಿ ಕೃತ್ಯಗಳನ್ನು ಎಸಗುತ್ತಾರೆ. ಇದಕ್ಕೂ ಕಡಿವಾಣ ಹಾಕುವ ದಿಸೆಯಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

‘ರಾಯಚೂರು ಜಿಲ್ಲೆಯಲ್ಲಿ ಒಂದು ವರ್ಷದ ಅವಧಿಯಲ್ಲಿ ವನ್ಯಜೀವಿಗಳ ಬೇಟೆಯಾಡಿದ ನಾಲ್ಕು ಪ್ರಕರಣಗಳು ದಾಖಲಾಗಿವೆ. ವನ್ಯಜೀವಿಗಳನ್ನು ಕೊಂದು ಖುಷಿಪಡುವ ಮಾನಸಿಕ ಸ್ಥಿತಿ ಕೊನೆಯಾಗಬೇಕು. ಈ ದಿಸೆಯಲ್ಲಿ ಗ್ರಾಮಸ್ಥರಿಗೆ ತಿಳಿವಳಿಕೆ ಕೊಡುವ ಕಾರ್ಯವೂ ನಡೆದಿದೆ’ ಎನ್ನುತ್ತಾರೆ.

‘ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ಗಿಡಮರಗಳನ್ನು ಬೆಳೆಸುವ ಮೂಲಕ ಅರಣ್ಯ ಪ್ರದೇಶವನ್ನು ಹೆಚ್ಚಿಸಲಾಗಿದೆ. ಇದರಿಂದ ವನ್ಯಜೀವಿಗಳ ರಕ್ಷಣೆಗೂ ಅನುಕೂಲವಾಗಿದೆ. ಸಾರ್ವಜನಿಕರು ಸಹ ಕಾಡು ಪ್ರಾಣಿಗಳ ರಕ್ಷಣೆಗೆ ಸಹಕಾರ ನೀಡಬೇಕು‘ ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.