ರಾಯಚೂರು: ‘ದೌರ್ಜನ್ಯ, ಅತ್ಯಾಚಾರ, ಶೋಷಣೆ, ಮಾನಸಿಕ ಹಿಂಸೆಯಂತಹ ಹಲವು ಬಗೆಯ ಸಂಕಷ್ಟಗಳಿಗೆ ದೇಶದ ಮಹಿಳೆಯರು ಒಳಗಾಗುತ್ತಿರುವುದು ಕಳವಳಕಾರಿ ಸಂಗತಿ’ ಎಂದು ಲೇಖಕಿ ವಿನಯಾ ಒಕ್ಕುಂದ ಹೇಳಿದರು.

ನಗರದ ಅಕಾಡೆಮಿ ಆಫ್ ಮೆಡಿಕಲ್ ಎಜುಕೇಶನ್ ಸಂಸ್ಥೆಯ ಎಎಂಇ ದಂತ ಮಹಾವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ಲಿಂಗ ಸೂಕ್ಷ್ಮತೆಯ ಅರಿವು ಮತ್ತು ವ್ಯಕ್ತಿತ್ವ ನಿರ್ಮಾಣ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಲಿಂಗ ರಾಜಕಾರಣದಿಂದಾಗಿ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರು ನಿರಂತರವಾಗಿ ಶೋಷಣೆಗೆ ಒಳಗಾಗುತ್ತಲೇ ಇದ್ದಾರೆ. ಒಲೆ ಬದಲಾಗಿದ್ದರೂ ಉರಿ ಬದಲಾಗಿಲ್ಲ ಎನ್ನುವಂತಹ ಬಿಕ್ಕಟ್ಟಿನ ಪರಿಸ್ಥಿತಿ ಇಂದಿನ ಆಧುನಿಕ ಮಹಿಳೆಯರದ್ದಾಗಿದೆ’ ಎಂದು ಹೇಳಿದರು.

‘ಹೆಣ್ಣಾಗಿ ಜಗತ್ತನ್ನು ನೋಡುವ ಕ್ರಮವನ್ನು ಗಂಡು ಮತ್ತು ಗಂಡಾಗಿ ನೋಡುವ ಮನೋಧರ್ಮವನ್ನು ಹೆಣ್ಣು ರೂಪಿಸಿಕೊಳ್ಳಬೇಕಾಗಿರುವುದು ಆರೋಗ್ಯಕರ ಸಮಾಜದ ದೊಡ್ಡ ಲಕ್ಷಣ’ ಎಂದು ತಿಳಿಸಿದರು.

ಲೇಖಕ ದಸ್ತಗೀರಸಾಬ್ ದಿನ್ನಿ ಮಾತನಾಡಿ, ‘ವರ್ತಮಾನದ ಮಹಿಳೆ ಕೌಟುಂಬಿಕ ಅಸುರಕ್ಷತೆ, ಆರ್ಥಿಕ ಅಸಹಾಯಕತೆಯಿಂದಾಗಿ ಎಲ್ಲವನ್ನೂ ಮೂಕವಾಗಿ ಅನುಭವಿಸುತ್ತಲೇ ಮತ್ತೆ ಮತ್ತೆ ಅವಮಾನದ ಕೆಂಡವನ್ನು ಹಾಯುತ್ತಿದ್ದಾಳೆ. ವಿನಯಾ ಅವರ ಮಾತುಗಳಲ್ಲಿ ಹೊಸ ಆಲೋಚನಾಕ್ರಮ, ಮನುಷ್ಯ ಪ್ರೇಮ, ಮಾನವೀಯ ಧೋರಣೆ ವ್ಯಕ್ತವಾಗಿದೆ’ ಎಂದು ಹೇಳೀದರು.

ಸಂಸ್ಥೆಯ ಖಜಾಂಚಿ ಭೀಮನಗೌಡ ಇಟಗಿ ಮಾತನಾಡಿ, ‘ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ, ಆಪ್ತ ತಿಳಿವಳಿಕೆ, ವೈಚಾರಿಕ ಪ್ರಜ್ಞೆ, ಸಮಾಜವನ್ನು ನೋಡುವ ಹೊಸ ಕಣ್ಣೋಟವನ್ನು ಕೊಡುತ್ತವೆ’ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ದರೂರು ಬಸವರಾಜ ಪಾಟೀಲ ಮಾತನಾಡಿ, ‘ಯುವಸಮುದಾಯ ಬದುಕು, ಸಮಾಜವನ್ನು ಪ್ರೀತಿಸಬೇಕು. ಉತ್ತಮ ಸಂವೇದನೆಯನ್ನು ಬೆಳೆಸಿಕೊಂಡು ಸಮಾನತೆಯ ಸಮಾಜಕ್ಕಾಗಿ ಮಿಡಿಯಬೇಕು’ ಎಂದರು.

ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಕೆ.ವೆಂಕಟೇಶ್, ಪ್ರಾಚಾರ್ಯ ಶಿವಾನಂದ ಆಸ್ಪಲ್ಲಿ, ಪ್ರಾಧ್ಯಾಪಕ ರಾಘವೇಂದ್ರ ಹವಳೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅತಿಥಿಗಳೊಂದಿಗೆ ಸಂವಾದ ನಡೆಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-32-1139366946

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.