ರೈಲು ನಿಲ್ದಾಣದಲ್ಲಿ ವಿಶಿಷ್ಟ ರೀತಿಯ ಗಾಂಧಿ ಜಯಂತಿ

7
ನಿಲ್ದಾಣ ಸೌಂದರ್ಯೀಕರಣಕ್ಕೆ ಒತ್ತು ನೀಡಿರುವ ರೈಲ್ವೆ ಇಲಾಖೆ ಅಧಿಕಾರಿಗಳು

ರೈಲು ನಿಲ್ದಾಣದಲ್ಲಿ ವಿಶಿಷ್ಟ ರೀತಿಯ ಗಾಂಧಿ ಜಯಂತಿ

Published:
Updated:
Deccan Herald

ರಾಯಚೂರು: ಗುಂತಕಲ್‌ ರೈಲ್ವೆ ವಿಭಾಗದ ವ್ಯಾಪ್ತಿಯ ರಾಯಚೂರು ರೈಲ್ವೆ ನಿಲ್ದಾಣದಲ್ಲಿ ಮಹಾತ್ಮ ಗಾಂಧೀಜಿ ಅವರ 151ನೇ ಜಯಂತಿಯನ್ನು ಈ ವರ್ಷ ಮಂಗಳವಾರ ವಿಶಿಷ್ಟ ರೀತಿಯಲ್ಲಿ ಆಯೋಜಿಸಲಾಗಿತ್ತು.

ಇಡೀ ನಿಲ್ದಾಣವನ್ನು ಗಾಂಧಿಮಯಗೊಳಿಸಲಾಗಿತ್ತು. ನಿಲ್ದಾಣದ ಮುಂಭಾಗದಲ್ಲಿ ಎಲ್ಲಿ ನೋಡಿದರೂ ಗಾಂಧೀಜಿ ಅವರ ಚಿತ್ರಗಳು ಗಮನ ಸೆಳೆಯುತ್ತಿದ್ದವು. ನಿಲ್ದಾಣದ ಸೌಂದರ್ಯೀಕರಣದ ಭಾಗವಾಗಿ ರೈಲ್ವೆ ನಿಲ್ದಾಣ ಪ್ರತಿ ಗೋಡೆಗಳಲ್ಲೂ ಗಾಂಧೀಜಿ ಅವರ ಬದುಕಿನ ಘಟನಾವಳಿಗಳನ್ನು ನೆನಪಿಸುವ ಚಿತ್ರಕಲೆಗಳನ್ನು ಕಲಾವಿದರ ಮೂಲಕ ಬಿಡಿಸುವ ವ್ಯವಸ್ಥೆ ಮಾಡಲಾಗಿದೆ.

ಗಾಂಧೀಜಿ ಜಯಂತಿ ಅರ್ಥಪೂರ್ಣ ಆಚರಣೆಗೆ ರೈಲ್ವೆ ನಿಲ್ದಾಣವು ಸಾಕ್ಷಿಯಾಗಿತ್ತು. ನಿಲ್ದಾಣದ ಪ್ರವೇಶಿಸಿದಾಗ ಪ್ರಯಾಣಿಕರ ಗಮನ ಸೆಳೆಯಲು ತೊಗಲು ಬೊಂಬೆಯಾಟದ ವ್ಯವಸ್ಥೆ ಮಾಡಲಾಗಿತ್ತು. ಇಡೀ ದಿನ ತೊಗಲು ಬೊಂಬೆಯಾಟದ ಮೂಲಕ ಗಾಂಧೀಜಿ ಜೀವನ ನೆನಪಿಸುವ ವ್ಯವಸ್ಥೆ ಮಾಡಲಾಗಿತ್ತು. ನಿಲ್ದಾಣದೊಳಗೆ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಕ್ಕಿಂತ ಒಂದು ಸುಂದರ ಏನಿಸುವ ಬಾಪೂಜಿ ಚಿತ್ರಗಳು ನೋಡುಗರ ಮೈಮರೆಸುತ್ತಿವೆ.

ರೈಲ್ವೆ ನಿಲ್ದಾಣದ ಎದುರಿನ ಗಾಂಧಿ ಪ್ರತಿಮೆಗೆ ಗುಂತಕಲ್‌ ರೈಲ್ವೆ ವಿಭಾಗದ ವ್ಯವಸ್ಥಾಪಕ ವಿಜಯ ಪ್ರತಾಪ್‌ ಸಿಂಗ್‌, ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಹಾಗೂ ಸಂಸದ ಬಿ.ವಿ. ನಾಯಕ ಅವರು ಮಾಲಾರ್ಪಣೆ ಮಾಡಿದರು.

ಆನಂತರ ರೈಲ್ವೆ ನಿಲ್ದಾಣದಲ್ಲಿ ತೊದಲು ಬೊಂಬೆ ಆಟ ವೀಕ್ಷಿಸಿದರು. ಚೆನ್ನೈ ಕಲಾವಿದರು ಗೋಡೆಗಳಲ್ಲಿ ಬಿಡಿಸಿರುವ ಗಾಂಧೀಜಿ ಚಿತ್ರಗಳನ್ನು ವೀಕ್ಷಿಸಿ, ಸಂತೋಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ರೈಲ್ವೆ ಸಿಬ್ಬಂದಿ ಹಾಗೂ ಶಾಲಾ ಮಕ್ಕಳಿಂದ ಗಾಂಧೀಜಿ ಪರ ಘೋಷಣೆಗಳು ಮೊಳಗಿದವು.

ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗುಂತಕಲ್‌ ರೈಲ್ವೆ ವಿಭಾಗದ ವ್ಯವಸ್ಥಾಪಕ ವಿಜಯಪ್ರತಾಪ್‌ ಸಿಂಗ್‌, ‘ರಾಯಚೂರು ರೈಲ್ವೆ ನಿಲ್ದಾಣದಲ್ಲಿ ಕೆಲವು

ಮಾರ್ಪಾಡು ಮಾಡಲಾಗುತ್ತಿದೆ. ಹೊಸದಾಗಿ ಎರಡು ಲಿಫ್ಟ್‌ ಅಳವಡಿಸಲಾಗುವುದು. ಎರಡು ಫುಟ್‌ ಓವರ್‌ ಬ್ರಿಡ್ಹ್‌ ನಿರ್ಮಿಸಲಾಗುವುದು. ನಿಲ್ದಾಣದ ಪಕ್ಕದಲ್ಲಿರುವ ಗೋದಾಮನ್ನು ಯರಮರಸ್‌ಗೆ ಸ್ಥಳಾಂತರ ಮಾಡುವ ಕುರಿತು ನಿರ್ಧರಿಸಲಾಗಿದೆ’ ಎಂದು ಹೇಳಿದರು.

ಗಿಣಿಗೇರಾ– ಮಹಿಬೂಬ್‌ನಗರ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿ 2020 ರ ವೇಳೆಗೆ ಪೂರ್ಣವಾಗಲಿದೆ. ಇದಕ್ಕಾಗಿ 27 ಕಿಲೋ ಮೀಟರ್ ಭೂಸ್ವಾಧೀನ ಬಾಕಿ ಇದೆ. ರೈಲ್ವೆ ನಿಲ್ದಾಣಗಳಲ್ಲಿ ಸ್ವಚ್ಛ ಭಾರತ ಜಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !