’ಅನಾಥ ಮಕ್ಕಳ ಸೇವೆ; ದೇವರ ಸೇವೆ’

7

’ಅನಾಥ ಮಕ್ಕಳ ಸೇವೆ; ದೇವರ ಸೇವೆ’

Published:
Updated:
Prajavani

ರಾಯಚೂರು: ಸಮಾಜದಲ್ಲಿ ಅನಾಥ ಮಕ್ಕಳು ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಸರ್ಕಾರವು ಅವರಿಗೆ ಊಟ, ವಸತಿ ವ್ಯವಸ್ಥೆ ಮಾಡಿದೆ. ಇದರೊಂದಿಗೆ ಸಂಘ–ಸಂಸ್ಥೆಗಳು ಕೈಜೋಡಿಸುವುದು ಅಗತ್ಯ. ಇಂತಹ ಮಕ್ಕಳ ಸೇವೆ, ನಿಜವಾದ ದೇವರ ಸೇವೆ ಎಂದು ರೋಟರಿ ಕ್ಲಬ್‌ ಅಧ್ಯಕ್ಷ ಎನ್‌. ಶಿವಶಂಕರ ಹೇಳಿದರು.

ನಗರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಡೆಯುವ ಅನಾಥ ಮಕ್ಕಳ ಬಾಲ ಮಂದಿರಕ್ಕೆ ರೋಟರಿ ಕ್ಲಬ್‌ ರಾಯಚೂರು ಮತ್ತು ಗ್ಯಾಲಕ್ಸಿ ಸಂಗೀತ ಕಲಾವಿದರ ಸಂಘದಿಂದ ₹25 ಸಾವಿರ ಮೌಲ್ಯದ ಎರಡು ಗೀಜರ್‌ಗಳನ್ನು ಗುರುವಾರ ದೇಣಿಗೆ ನೀಡಿ ಮಾತನಾಡಿದರು.

ಎಲ್ಲರಂತೆ ಈ ಮಕ್ಕಳು ಜೀವನ ರೂಪಿಸಿಕೊಳ್ಳಲು ಅನುಕೂಲತೆ ಮಾಡಿಕೊಡಬೇಕಾಗುತ್ತದೆ. ಸರ್ಕಾರವು ತಕ್ಕಮಟ್ಟಿಗೆ ವ್ಯವಸ್ಥೆ ಕಲ್ಪಿಸಿದ್ದರೂ ಕೆಲವು ಪರಿಕರಗಳನ್ನು ಒದಗಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲತೆ ಮಾಡಿಕೊಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಮಂಗಳಾ ಮಾತನಾಡಿದರು. ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಪ್ರಭುದೇವ ಪಾಟೀಲ, ಬಸವರಾಜ ಬ್ಯಾಗವಟ್,  ರೋಟರಿ ನಿರ್ದೇಶಕ ಯಶವಂತ್ ವಿಜಯಕುಮಾರ್ ಸಜ್ಜನ, ಕಲಾವಿದರಾದ ಓಕಾರ, ಮಹ್ಮದ್ ಫಾರೂಕ್‌,  ಸಾಜೀದ , ರಹೀಮ್, ದಂಡಪ್ಪ ಬಿರದಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !