ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತಬ್ಧಚಿತ್ರ ಪ್ರದರ್ಶನ: ಅವಕಾಶ ನಿರಾಕರಣೆ ಸಲ್ಲ -ಆರ್.ಎನ್.ರಾಜಶೇಖರ

Last Updated 25 ಜನವರಿ 2022, 5:06 IST
ಅಕ್ಷರ ಗಾತ್ರ

ಸಿಂಧನೂರು: ‘ಬ್ರಹ್ಮಶ್ರೀ ನಾರಾಯಣ ಗುರೂಜಿ ಸಮ ಸಮಾಜದ ಪರಿಕಲ್ಪನೆ ಸಾರಿದ ಮಹನೀಯರು. ಶೋಷಿತ ಮತ್ತು ಹಿಂದುಳಿದ, ಅಲ್ಪಸಂಖ್ಯಾತರಿಗೆ ಹಿಂದೂ ಧರ್ಮದ ಸಂಸ್ಕೃತಿಯಡಿಯಲ್ಲಿ ದೇವರ ದರ್ಶನ ಮಾಡಿಸಿದ ಮಹಾನ್ ಸಂತ. ಅಂಥ ಸಂತನ ಸ್ತಬ್ಧಚಿತ್ರಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡದೆ ಅವಮಾನಿಸಿರುವುದು ಖಂಡನೀಯ’ ಎಂದು ಈಡಿಗ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಎನ್.ರಾಜಶೇಖರ ವಕೀಲ ಅವರು ದೂರಿದ್ದಾರೆ.

ಸೋಮವಾರ ಹೇಳಿಕೆ ನೀಡಿರುವ ಅವರು,‘ಕೇಂದ್ರ ಸರ್ಕಾರದ ನಿಜ ಬಣ್ಣ ಈಗ ಬಯಲಾಗಿದೆ. ನಾರಾಯಣ ಗುರುಗಳು ಹಿಂದುಳಿದ ಜಾತಿಗೆ ಸೇರಿದವರೆಂಬ ಕಾರಣಕ್ಕಾಗಿ ಅವರ ಸ್ತಬ್ಧ ಚಿತ್ರಕ್ಕೆ ಅನುಮತಿ ನೀಡದೆ ಅನಮಾನ ಮಾಡಿದ್ದಾರೆ. ಕೇಂದ್ರ ಸರ್ಕಾರ ಜನರ ಕ್ಷಮೆ ಕೇಳಿ, ಸ್ತಬ್ಧಚಿತ್ರಕ್ಕೆ ಅನುಮತಿ ನೀಡಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರಾದ ನಿರುಪಾದೆಪ್ಪ ಗುಡಿಹಾಳ ವಕೀಲ, ಎಚ್.ಎನ್.ಬಡಿಗೇರ್, ಮೋಸಿಮ್ ಖಾದ್ರಿ, ಪ್ರಾಣೇಶ, ಪದ್ಮನಾಭ, ಗಂಗಾಧರ ಶ್ರೀಕಾಂತ ರಾಗಲಪರ್ವಿ, ರಾಮಕೃಷ್ಣ ದೇವಿಕ್ಯಾಂಪ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT