ಚಿಕ್ಕಕೊಟ್ನೇಕಲ್ ಗ್ರಾಮ ಲೆಕ್ಕಾಧಿಕಾರಿಗೆ ಪದೋನ್ನತಿ ನೀಡಬೇಡಿ: ಯುವಜನ ಒಕ್ಕೂಟ

7

ಚಿಕ್ಕಕೊಟ್ನೇಕಲ್ ಗ್ರಾಮ ಲೆಕ್ಕಾಧಿಕಾರಿಗೆ ಪದೋನ್ನತಿ ನೀಡಬೇಡಿ: ಯುವಜನ ಒಕ್ಕೂಟ

Published:
Updated:
Deccan Herald

ರಾಯಚೂರು: ಬರ ಪರಿಹಾರದ ಹೆಸರಿನಲ್ಲಿ ರೈತರನ್ನು ವಂಚಿಸಿ ಹಣ ಲೂಟಿ ಮಾಡಿರುವ ಚಿಕ್ಕಕೊಟ್ನೇಕಲ್ ಗ್ರಾಮ ಲೆಕ್ಕಾಧಿಕಾರಿ ಸತೀಶ ಅವರಿಗೆ ಕಂದಾಯ ನಿರೀಕ್ಷಕರೆಂದು ಪದನ್ನೋತಿ ನೀಡಿರುವುದನ್ನು ತಡೆಹಿಡಿಯಬೇಕು ಎಂದು ಆಗ್ರಹಿಸಿ ಭಾರತ ಕ್ರಾಂತಿಕಾರಿ ಯುವಜನ ಒಕ್ಕೂಟ ಮಾನ್ವಿಯ ತಾಲ್ಲೂಕು ಘಟಕದ ಸದಸ್ಯರು ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದರು.

ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ತಮಗೆ ಹಾಗೂ ಮಾನ್ವಿ ತಹಶೀಲ್ದಾರರಿಗೆ ದೂರು ಸಲ್ಲಿಸಿ ಒಂದು ವರ್ಷ ಏಳು ತಿಂಗಳು ಕಳೆದರೂ ಇದುವರೆಗೆ ಯಾವುದೇ ಕ್ರಮ ಜರುಗಿಸಿಲ್ಲ. ದೂರು ನೀಡಿದರೂ ಯಾವುದೇ ಕ್ರಮವಾಗದಿರುವುದು ನೋಡಿದರೆ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮ ಲೆಕ್ಕಾಧಿಕಾರಿಗೆ ಪದೋನ್ನತಿ ನೀಡುತ್ತಿರುವುದು ಸಂಘಟನೆಯ ಗಮನಕ್ಕೆ ಬಂದಿದ್ದು, ಈಗಲಾದರೂ ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ತನಿಖೆ ನಡೆಸಿ ಸೇವೆಯಿಂದ ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿದರು.

ಗಂಗಪ್ಪ ತೋರಣದಿನ್ನಿ, ರಂಜಾನ್ ಅಮರಾವತಿ, ಕಿರಣಕುಮಾರ ತಡಕಲ್, ರಾಮಚಂದ್ರಪ್ಪ, ಬಸವರಾಜ, ಸಣ್ಣ ಅಮರೇಶ, ಅಮರೇಶ, ಶರಣಪ್ಪ, ನಿಂಗಯ್ಯ ಜಾನೇಕಲ್, ಯಲ್ಲಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !