ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂದೆ–ತಾಯಿಯಲ್ಲಿ ದೇವರನ್ನು ಹುಡುಕಿ

ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಯಂಕಣ್ಣ ಸಲಹೆ
Last Updated 10 ಮಾರ್ಚ್ 2023, 14:25 IST
ಅಕ್ಷರ ಗಾತ್ರ

ರಾಯಚೂರು: ಹೆತ್ತ ತಂದೆ ತಾಯಿಯನ್ನು ದೇವರ ಸ್ವರೂಪದಲ್ಲಿ ಕಾಣಬೇಕು ಹಾಗೂ ಗುರು ಹಿರಿಯರನ್ನು ಗೌರವದಿಂದ ನೋಡಬೇಕು. ಹೆತ್ತವರಲ್ಲಿಯೇ ದೇವರನ್ನು ಹುಡುಕಬೇಕು ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಯಂಕಣ್ಣ ಹೇಳಿದರು.

ನಗರದ ಆಶಾಪೂರ ಮಾರ್ಗದಲ್ಲಿರುವ ಲಲಿತಾ ಹಿರಿಯ ನಾಗರಿಕರ ಮನೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆಶಾಪೂರ ಮಾರ್ಗದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅರುಣಾ ಮಾತನಾಡಿ, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಒಂದು ವೃದ್ಧಾಶ್ರಮದಲ್ಲಿ ಅದು ಹಿರಿಯರ ನಡುವೆ ಆಚರಣೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಈ ಭಾಗದಲ್ಲಿ ಮಹಿಳೆಯರ ಆರೋಗ್ಯ ಸಮಸ್ಯೆಗಳಿಗೆ ಎಲ್ಲರೂ ಸ್ಪಂದಿಸಬೇಕಾಗಿದೆ ಎಂದರು.

ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಜೆ ಎಲ್ ಈರಣ್ಣ ಮಾತನಾಡಿದರು.

ಕಾಲೇಜಿನ ಐಕ್ಯುಎಸಿ ಸಂಯೋಜಕಿ ಇಸ್ರತ್ ಬೇಗ ಮಾತನಾಡಿ, ತಂದೆ ತಾಯಿಯರನ್ನು ದೇವರೆನ್ನುವ ನಾಡಿನಲ್ಲಿ ನಾವಿದ್ದೇವೆ .ಇಂಥ ನಾಡಿನಲ್ಲಿ ವೃದ್ಧಾಶ್ರಮ ಬೆಳೆಯುತ್ತಿರುವುದು ಬೇಸರದ ವಿಷಯ. ಆದರಿಂದ ಇಂದಿನ ಯುವಕರು ಮನೆಯಲ್ಲಿ ಹಿರಿಯರನ್ನ ಕಿರಿಯರನ್ನ ಗೌರವದಿಂದ ಕಾಣಬೇಕು ಎಂದು ಹೇಳಿದರು.

ಕಾಲೇಜಿನ ಕಲ್ಪನಾ ಚಾವ್ಲಾ ಮಹಿಳಾ ಕೇಂದ್ರದ ಸಂಯೋಜಿಕಿ ವಿಜಯಶ್ರೀ ಪಾಟೀಲ್ ಹಾಗೂ ಲಲಿತ ಹಿರಿಯ ನಾಗರಿಕರ ಮನೆಯ ಮೇಲ್ವಿಚಾರಕಿ ಮರಿಯಪ್ಪ ಮಾತನಾಡಿದರು.

ಉಪನ್ಯಾಸಕ ಮಹಾದೇವಪ್ಪ ಡಾ ತಿಮ್ಮಪ್ಪ ವಡ್ಡೆಪಲ್ಲಿ, ಮಹಾದೇವಿ ದೈಹಿಕ ನಿರ್ದೇಶಕ ರಾಜಶೇಖರ ,ವಿನೋದ್ ಮತ್ತಿತರರು ಇದ್ದರು. ರೇಣುಕಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕಿ ಮಹಾದೇವಿ ಸ್ವಾಗತಿಸಿದರು. ಉಪನ್ಯಾಸಕ ಮಹಾದೇವಪ್ಪ ನಿರೂಪಿಸಿದರು. ತಿಮ್ಮಪ್ಪ ವಡ್ಡೆಪಲ್ಲಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT