ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಬ್ರಿಗೇಡ್‌ನಿಂದ ಮಂತ್ರಾಲಯದಲ್ಲಿ ‘ತುಂಗಾರತಿ‘ 

Last Updated 12 ಮಾರ್ಚ್ 2022, 13:18 IST
ಅಕ್ಷರ ಗಾತ್ರ

ರಾಯಚೂರು: ಮಂತ್ರಾಲಯದಲ್ಲಿ ಯುವ ಬ್ರಿಗೇಡ್‌ ಮುಖಂಡ ಸೂಲಿಬೆಲೆ ಚಕ್ರವರ್ತಿ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ತುಂಗಭದ್ರಾ ನದಿಯನ್ನು ತ್ಯಾಜ್ಯಮುಕ್ತಗೊಳಿಸುವ ’ತುಂಗಾರತಿ‘ ವಿಶೇಷ ಅಭಿಯಾನ ಶನಿವಾರದಿಂದ ಆರಂಭಿಸಿದ್ದಾರೆ.

ನದಿ ಹರಿಯುವ ವಿಸ್ತಾರದುದ್ದಕ್ಕೂ ಬಿದ್ದಿರುವ ಪ್ಲಾಸ್ಟಿಕ್‌, ಬಟ್ಟೆ, ಗಾಜು, ಲೋಹದ ಅವಶೇಷ ಹಾಗೂ ಇತರೆ ತ್ಯಾಜ್ಯವನ್ನೆಲ್ಲ ವಿಲೇವಾರಿ ಮಾಡುತ್ತಿದ್ದಾರೆ. ನದಿನೀರಿನ ಕೆಸರಿನಲ್ಲಿ ಸೇರಿದ ತ್ಯಾಜ್ಯವನ್ನು ಕೂಡಾ ಎತ್ತಿ ಸಮಗ್ರವಾಗಿ ಶುಚಿತ್ವಗೊಳಿಸುತ್ತಿರುವುದು ಗಮನ ಸೆಳೆಯಿತು.

ಶ್ರೀರಾಘವೇಂದ್ರ ಸ್ವಾಮಿ ಮಠದ ಸಹಯೋಗದಲ್ಲಿ ಕೈಗೊಂಡ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡವರಿಗೆ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಶುಭಾಶಿರ್ವಾದ ಸಂದೇಶ ನೀಡಿದರು. ಸ್ವಾಮೀಜಿ ಕೂಡಾ ಕೆಲಕಾಲ ಸ್ವಚ್ಛತೆಯಲ್ಲಿ ಪಾಲ್ಗೊಂಡು, ತ್ಯಾಜ್ಯರಾಶಿಯನ್ನು ಸಲಕರಣೆಯಿಂದ ಎತ್ತಿ ಹಾಕಿದರು. ಭಾನುವಾರ ಕೂಡಾ ಅಭಿಯಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT