ರೌಡಿ ಶೀಟರ್‌ ಗೇಟ್‌ ಲಕ್ಷ್ಮಣ ಕೊಲೆ

ಮಂಗಳವಾರ, ಜೂಲೈ 23, 2019
26 °C

ರೌಡಿ ಶೀಟರ್‌ ಗೇಟ್‌ ಲಕ್ಷ್ಮಣ ಕೊಲೆ

Published:
Updated:

ರಾಯಚೂರು: ನಗರದ ರೈಲ್ವೆ ನಿಲ್ದಾಣ ಮುಂಭಾಗ ಶುಕ್ರವಾರ ರಾತ್ರಿ ಯುವಕರ ಗುಂಪೊಂದು ರೌಡಿ ಶೀಟರ್‌ ಗೇಟ್‌ ಲಕ್ಷ್ಮಣ ಮೇಲೆ ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿದೆ.

ಈ ಸಂಬಂಧ ಪೊಲೀಸರು ಮೂವರು ಶಂಕಿತರನ್ನು ಬಂಧಿಸಿದ್ದಾರೆ. ಬಂಧಿತರ ಹೆಸರು ಬಹಿರಂಗ ಮಾಡಿಲ್ಲ. ಆರೋಪಿಗಳಿಗಾಗಿ ಇನ್ನೂ ಶೋಧ ಮುಂದುವರಿದಿದೆ. ಕೊಲೆಗೆ ನಿಖರ ಕಾರಣ ಗೊತ್ತಾಗಿಲ್ಲ. ಕೊಲೆ ಘಟನೆಯಿಂದಾಗಿ ಸ್ಟೇಷನ್‌ ಏರಿಯಾದಲ್ಲಿ ಶುಕ್ರವಾರ ರಾತ್ರಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಶನಿವಾರ ಮರಣೋತ್ತರ ಪರೀಕ್ಷೆಯ ಬಳಿಕ ಶವವನ್ನು ಕುಟುಂಬದವರಿಗೆ ಒಪ್ಪಿಸಲಾಯಿತು. ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !