ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭೆಗೆ ಅಸಮಪರ್ಕ ಮಾಹಿತಿ: ತರಾಟೆ

ಸಫಾಯಿ ಕರ್ಮಚಾರಿ, ಮ್ಯಾನುವೆಲ್ ಸ್ಕ್ಯಾವೆಂಜರ್ ಸಭೆ
Last Updated 22 ಜುಲೈ 2021, 16:50 IST
ಅಕ್ಷರ ಗಾತ್ರ

ರಾಯಚೂರು: ಪೌರ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳು, ಸಮಪರ್ಕ ವೇತನ ನೀಡದೆ ಇರುವುದು ರಾಜ್ಯದಲ್ಲಿಯೇ ರಾಯಚೂರು ನಗರಸಭೆಗೆ ಕಪ್ಪು ಚುಕ್ಕೆಯಾಗಿದೆ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅದ್ಯಕ್ಷ ಎಂ. ಶಿವಣ್ಣ ಅವರು ಅಧಿಕಾರಿಗಳನ್ನು ಗುರುವಾರ ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಧಿಕಾರಿಗಳು ಮೊಬೈಲ್ ನೋಡಿ ಮಾಹಿತಿ ನೀಡುತ್ತಿರುವುದು ಅಸಮಾಧಾನಕ್ಕೆ ಕಾರಣವಾಯಿತು. ‘ನಗರಸಭೆಯು ನೀಡಿದ ಪ್ರತಿಯೊಂದು ಮಾಹಿತಿಯನ್ನು ಅಧಿಕಾರಿಗಳು ಮೊಬೈಲ್ ನೋಡಿ ಹೇಳುತ್ತಿದ್ದು, ಯಾವುದೇ ದಾಖಲೆಯನ್ನು ಸಂಗ್ರಹ ಮಾಡಿಲ್ಲ, ಕಚ್ಚಾ ವರದಿಯನ್ನು ನೋಡಿ ನಗರಸಭೆ ಆಯುಕ್ತರು ಮಾಹಿತಿ ನೀಡುತ್ತಿದ್ದಾರೆ’ ಎಂದರು.

‘ಇದು ಸಭೆಗೆ ಶೋಭೆ ತರುವುದಲ್ಲ, ಅಧಿಕಾರಿಗಳದ್ದು ಅಸಮರ್ಪಕ ಮಾಹಿತಿ. ರಾಯಚೂರು ನಗರಸಭೆಯಂತೆ ರಾಜ್ಯದಲ್ಲಿ ಇಂತಹ ನಗರಸಭೆ ನೋಡಿಯೇ ಇಲ್ಲ, ಎಲ್ಲ ಸುಳ್ಳು ವರದಿಗಳನ್ನು ನೀಡಲಾಗುತ್ತಿದೆ. ಕಾರ್ಮಿಕರಿಗೆ ಆಗಿದ್ದ ಅನ್ಯಾಯವನ್ನು ಸರಿಪಡಿಸಲಾಗುವುದು, ಸರ್ಕಾರದಿಂದ ಪ್ರತಿಯೊಬ್ಬ ಪೌರ ಕಾರ್ಮಿಕರಿಗೆ ಸಿಗುವ ಎಲ್ಲ ಸೌಲಭ್ಯ ಒದಗಿಸಲಾಗುವುದು, 115 ಜನ ಅಕ್ರಮವಾಗಿ ನೇಮಕ ಮಾಡಿದ ಕಾರ್ಮಿಕ ಬಗ್ಗೆ ಕ್ರಮ ವಹಿಸಲಾಗುತ್ತದೆ. ಕೋವಿಡ್ ಸಂದರ್ಭದಲ್ಲಿ ಅವರಿಗೆ ನೀಡಬೇಕಾದ ಸೌಲಭ್ಯಗಳು ನೀಡಿಲ್ಲ, ಆದರೆ ನೀಡಿದ್ದೇವೆ’ ಎಂದು ಹೇಳಿದರು.

ನಗರಸಭೆಯಲ್ಲಿ ಕಾಯಂ ಪೌರ ಕಾರ್ಮಿಕರು 163, ನೇರ ನೇಮಕಾತಿ 280 ಸೇರಿ ಒಟ್ಟು 465 ನೌಕರರಿದ್ದಾರೆ, ಇದಲ್ಲದೆ ಎರಡನೇ ಪಟ್ಟಿಯಲ್ಲಿ ಕಾಯಂ ಆಗಿ ಕೆಲಸ ಮಾಡುವವರು 229, ದಿನಗೂಲಿ 74, ನೇರ ನೇಮಕಾತಿ 275 ಹೊರಗುತ್ತಿಗೆ 25 ಸೇರಿ 604 ಜನರು ಪಟ್ಟಿ ಮಾಡಿದ್ದಾರೆ. ಇದು ಸುಳ್ಳು ವರದಿ ಎಂದು ಗೊತ್ತಾಗಿದೆ. ಕೋವಿಡ್ ವೇಳೆ ಪೌರಕಾರ್ಮಿಕರಿಗೆ ಪಿಪಿ ಕಿಟ್,ಮತ್ತು ಮಾಸ್ಕ್, ಸ್ಯಾನಿಟೈಜ್, ಸೇರಿ ಸೌಕರ್ಯ ಕಲ್ಪಿಸಿಲ್ಲ, ಎಲ್ಲ ವರದಿಗಳ ಬಗ್ಗೆ ಸಮರ್ಪಕವಾಗಿ ಮಾಹಿತಿ ಸಂಗ್ರಹಿಸಿ ಪೌರಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ಮತ್ತು ವೇತನ ಒದಗಿಸಿಕೊಡಲಾಗುತ್ತದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ನಿಗಮ ಅದ್ಯಕ್ಷ ಎಚ್. ಹನುಮಂತಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್‌.ದುರುಗೇಶ, ಕಾರ್ಯದರ್ಶಿ ರಮಾ, ನಗರಸಭೆ ಪೌರಾಯುಕ್ತ ಕೆ.ಮುನಿಸ್ವಾಮಿ, ನಗರಸಭೆ ಅಧ್ಯಕ್ಷ ಈ.ವಿನಯ ಕುಮಾರ್, ಉಪಾಧ್ಯಕ್ಷ ನರಸಮ್ಮ ಮಾಡಗಿರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT