ಶುಕ್ರವಾರ, ನವೆಂಬರ್ 22, 2019
27 °C

ರಾಯಣ್ಣ ಆಕ್ಷೇಪಾರ್ಹ ಚಿತ್ರ: ದೂರು

Published:
Updated:

ಲಿಂಗಸುಗೂರು (ರಾಯಚೂರು ಜಿಲ್ಲೆ): ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಿಗೆ ಅಪಮಾನಿಸಿ, ನಿಂದನೆ ಮಾಡಿದ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕುರುಬ ಸಮಾಜದ ಮುಖಂಡ ಗದ್ದೆನಗೌಡ ಪಾಟೀಲ ಲಿಂಗಸುಗೂರು ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಿಸಿದ್ದಾರೆ.

ನಿಂದಿಸುವ ಆಡಿಯೊ ಸಹಿತ ಚಿತ್ರವನ್ನು ಸಿದ್ದು ವಾಲ್ಮೀಕಿ ಹೆಸರಿನ ವಾಟ್ಸ್‌ಅ್ಯಪ್‌ ಸಂಖ್ಯೆಯಿಂದ ಗ್ರೂಪ್‌ಗೆ ಕಳಿಸಲಾಗಿದೆ. ಹಾಲುಮತ ಸಮಾಜದ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿದ ಆರೋಪಿಯನ್ನು ಕೂಡಲೇ ಪತ್ತೆ ಮಾಡಿ, ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.

ಪ್ರತಿಕ್ರಿಯಿಸಿ (+)