ಗುರುವಾರ , ಡಿಸೆಂಬರ್ 3, 2020
18 °C

ಮಾನ್ವಿ| ಸಂಗೋಳ್ಳಿ ರಾಯಣ್ಣ ಮೂರ್ತಿ ತೆರವು: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾನ್ವಿ:  ಗದಗ ಜಿಲ್ಲೆಯ ಬಳಗಾನೂರಿನಲ್ಲಿ ಈಚೆಗೆ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಮೂರ್ತಿ ತೆರವುಗೊಳಿಸಿದ ಘಟನೆ ಖಂಡಿಸಿ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಸದಸ್ಯರು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಬಸವ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.

ಬಳಗಾನೂರು ಗ್ರಾಮದಲ್ಲಿ ಸಚಿವ ಸಿ.ಸಿ.ಪಾಟೀಲ ಅವರ ಜಾತಿ ದ್ವೇಷದ ರಾಜಕಾರಣದಿಂದ ಕಾಂತಿವೀರ ಸಂಗೋಳ್ಳಿ ರಾಯಣ್ಣ ಮುರ್ತಿ ತೆರವುಗೊಳಿಸಲಾಗಿದೆ. ಈ ಕುರಿತು ಪ್ರತಿಭಟಿಸಿದವರ ಮೇಲೆ ದೌರ್ಜನ್ಯ ನಡೆಸಿ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದರು. 

ರಾಜ್ಯ ಸರ್ಕಾರ ಕೂಡಲೇ
ಸಂಗೋಳ್ಳಿ ರಾಯಣ್ಣ ಮೂರ್ತಿಯನ್ನು ಮರುಸ್ಥಾಪನೆ ಮಾಡಬೇಕು. ಸಿ.ಸಿ.ಪಾಟೀಲ್ ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಶಂಶಾಲಂ ಅವರಿಗೆ ಸಲ್ಲಿಸಲಾಯಿತು.

ಕುರುಬ ಸಮಾಜದ ಮುಖಂಡರಾದ ಕೆ.ಬಸವಂತಪ್ಪ, ಕೆ.ಸತ್ಯನಾರಾಯಣ ಮುಷ್ಟೂರು, ಈರಣ್ಣ ಮರ್ಲಟ್ಟಿ, ಶ್ರೀನಿವಾಸ ಸೀಕಲ್, ಎಂ.ಪ್ರವೀಣಕುಮಾರ, ಎಸ್.ಎಂ.ಪಾಟೀಲ್, ಮಲ್ಲಿಕಾರ್ಜುನ ಕೆ.ಗೌಡ ರಾಹುಲ್ ಕಲಂಗೇರ, ಕೆ.ಗುರುಪ್ರತಾಪ, ಕೆ.ಅಜೇಯಕುಮಾರ, ಶಿವುಮಹಾಂತೇಶ ನಕ್ಕುಂದಿ, ಲಿಂಗರಾಜ ಬೊಮ್ಮನಾಳ, ದುರುಗಪ್ಪ ತಡಕಲ್, ಕೆ.ಗುರುಸ್ವಾಮಿ, ಚಂದ್ರು ಕನ್ನಾರಿ, ಎಂ.ವಿರೂಪಾಕ್ಷಿಗೌಡ, ಯಲ್ಲಪ್ಪ, ಲಿಂಗರಾಜ ತಡಕಲ್, ಅಯ್ಯಪ್ಪ ಗಬ್ಬೂರ, ತಾಯ ವಿ.ತೇಜ, ವೀರೇಶ, ಆನಂದ ಬಂಡಿ, ಮಲ್ಲೇಶ ಕಂಬಳತ್ತಿ, ಅನಿಲ್, ರಮೇಶ ಓಂಕಾರಿ, ಶಂಕರ ಬಂಡಿ, ಸತೀಶ, ಯಲ್ಲಾಲಿಂಗ, ಮಲ್ಲಿಕಾರ್ಜುನ ಹಳ್ಳಿಹೊಸೂರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು