ಸ್ವಾವಲಂಬಿ ಜೀವನ ನಡೆಸಲು ಕರೆ

7

ಸ್ವಾವಲಂಬಿ ಜೀವನ ನಡೆಸಲು ಕರೆ

Published:
Updated:
Prajavani

ರಾಯಚೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುವ ತರಬೇತಿಯನ್ನು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬೇಕು ಎಂದು ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಜಿ.ಎಸ್. ಹಿರೇಮಠ ಕರೆ ನೀಡಿದರು.

ಭಾರತ ಸರ್ಕಾರ ನೆಹರು ಯುವ ಕೇಂದ್ರ, ಭಾರತ ಸೇವಾದಳ ಹಾಗೂ ತೃಪ್ತಿ ಮಹಿಳಾ ಸಂಘವು ಆಯೋಜಿಸಿದ್ದ ಮೂರು ತಿಂಗಳ ವೃತ್ತಿ ಹೊಲಿಗೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಗುರುವಾರ ಮಾತನಾಡಿದರು.    

ತೃಪ್ತಿ ಮಹಿಳಾ ಸಂಘದ ಮುಖ್ಯ ಅತಿಥಿ ಪರಿಮಳಾ ತರಬೇತಿದಾರ ಮಾತನಾಡಿ, ಮಹಿಳೆಯರು ಮೂರು ತಿಂಗಳ ವೃತ್ತಿ ಹೊಲಿಗೆ ತರಬೇತಿಯನ್ನು ಒಳ್ಳೆಯ ರೀತಿಯಲ್ಲಿ ಕಲಿತುಕೊಂಡು ತಮ್ಮ ಸ್ವಂತ ಜೀವನವನ್ನು ನಡೆಸಿಕೊಳ್ಳಲು ಕರೆ ನೀಡಿದರು.

ತೃಪ್ತಿ ಮಹಿಳಾ ಸಂಘದ ಅಧ್ಯಕ್ಷೆ ಮುನ್ನಿಬೇಗಂ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಪ್ರಗತಿಗಾಗಿ ಭ್ರಷ್ಟಾಚಾರ ನಿರ್ಮೂಲನೆ ಅತಿ ಅವಶ್ಯವಾಗಿದೆ ಎಂದು ಹೇಳಿದರು.

ಶ್ರೀಜಾ ವಿದ್ಯಾರ್ಥಿ ನಿರೂಪಿಸಿ, ಸ್ವಾಗತಿಸಿದರು. ನೆಹರು ಯುವ ಕೇಂದ್ರದ ರಾಷ್ಟ್ರೀಯ ಸ್ವಯಂ ಸೇವಾಕಾರ್ಯಕರ್ತ ತಿರುಮಲೇಶ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !