ಮಂಗಳವಾರ, ಸೆಪ್ಟೆಂಬರ್ 17, 2019
21 °C

ರಾಯಚೂರು: ಹಿರಿಯ ಪತ್ರಕರ್ತ ಕೆ.ರಾಮಕೃಷ್ಣ ನಿಧನ

Published:
Updated:

ರಾಯಚೂರು: ನಗರದ ಹಿರಿಯ ಪತ್ರಕರ್ತ ಕೆ.ರಾಮಕೃಷ್ಣ(65) ಅವರು ಹೃದಯಘಾತದಿಂದ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.

ಕಳೆದ‌ 40 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದ ಹಿರಿಯ ಜೀವಿ ನಮ್ಮೊಂದಿಗೆ ಇಲ್ಲ. ಮಿತ್ರವಾಣಿ ಪತ್ರಿಕೆ ಮೂಲಕ ವೃತ್ತಿ ಜೀವ ಆರಂಭಿಸಿದ ಅವರು ಗ್ರಿನೋಬಲ್, ರಾಯಚೂರುವಾಣಿ, ಕನ್ನಡ ಪ್ರಭ, ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಇವರ ಸೇವಾ ಸಾಧನೆಗಾಗಿ ಕರ್ನಾಟಕ ಮಾದ್ಯಮ ಅಕಾಡೆಮಿ ಪ್ರಶಸ್ತಿ, ಜಿಲ್ಲಾ ರಾಜ್ಯೊತ್ಸ ಪ್ರಶಸ್ತಿ, ಪತ್ರಕರ್ತರ ಸಂಘದ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರಶಸ್ತಿಗಳು ಬಂದಿವೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ರಾಯಚೂರು ರಿಪೋಟರ್ಸ್ ಗಿಲ್ಡ್ ಅಧ್ಯಕ್ಷರಾಗಿ, ಕರ್ನಾಟಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ಸಾಹಿತ್ಯ ಚಟುವಟಿಕೆಯಲ್ಲಿಯೂ ತೊಡಗಿಸಿಕೊಂಡಿದ್ದರು.
ಹಿರಿಯ ಪತ್ರಕರ್ತನ ನಿಧನದಿಂದ ಪತ್ರಿಕಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. 

ಹಿರಿಯ ಪತ್ರಕರ್ತ ಕೆ.ರಾಮಕೃಷ್ಣ ನಿಧನಕ್ಕೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಾಯಚೂರು ರಿಪೋರ್ಟರ್ಸ ಗಿಲ್ಡ್ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ.

Post Comments (+)