ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತಾಳ: ಶಾಂಭವಿ ದೇವಿ ಜಾತ್ರೆ ಉತ್ಸವ

Last Updated 5 ಅಕ್ಟೋಬರ್ 2022, 12:35 IST
ಅಕ್ಷರ ಗಾತ್ರ

ಕವಿತಾಳ: ಸಿರವಾರ ತಾಲ್ಲೂಕಿನ ಹುಸೇನಪುರ ಗ್ರಾಮದಲ್ಲಿ ಮಂಗಳವಾರ ಶಾಂಭವಿಯ ದೇವಿಯ ಉಚ್ಛಾಯ ಮಹೋತ್ಸವ ಅದ್ದೂರಿಯಾಗಿ ಜರುಗಿತು.

ನವರಾತ್ರಿ ನಿಮಿತ್ತ ಗ್ರಾಮದಲ್ಲಿ 9 ದಿನಗಳಿಂದ ಶಾಂಭವಿ ದೇವಿ ಪುರಾಣ ಪ್ರವಚನವನ್ನು ಹಮ್ಮಿಕೊಳ್ಳಲಾಗಿತ್ತು. ಶುಕ್ರವಾರ ಮಹಿಷ ಖಾಂಡ ನಿಮಿತ್ತ ಮಲ್ಕಾಪುರ ಗ್ರಾಮಸ್ಥರು ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು. ಕುಂಭೋತ್ಸವ ನಿಮಿತ್ತ ಗ್ರಾಮದ ಅಳ್ಳಪ್ಪ ತಾತನ ಗದ್ದುಗೆಯಿಂದ ಶಾಂಭವಿ ದೇವಿಯ ದೇವಸ್ಥಾನದ ವರೆಗೆ ಶಾಂಭವಿ ದೇವಿಯ ಭಾವಚಿತ್ರದ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಕುಂಭ, ಕಳಸ ಮತ್ತು ಮಂಗಳ ವಾದ್ಯಗಳೊಂದಿಗೆ ಮಹಿಳೆಯರು, ಮಕ್ಕಳು, ಗ್ರಾಮದ ಹಿರಿಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಸಂಜೆ ಉಚ್ಛಾಯ ಮಹೋತ್ಸವ ಅದ್ದೂರಿಯಾಗಿ ಜರುಗಿತು. ಬಸವರಾಜಯ್ಯಸ್ವಾಮಿ ಹಿರೇಮಠ ಮತ್ತು ಭೀಮರಾಯಪ್ಪ ಪೂಜಾರಿ ಅವರು ಪರಾಣ ಪ್ರವಚನ ಮಾಡಿದರು. ಮೋನಯ್ಯಸ್ವಾಮಿ, ಚನ್ನಪ್ಪ ಪೂಜಾರಿ, ಸಂಜೀವರಡ್ಡಿಗೌಡ, ಶರಣಗೌಡ, ದೇವಪ್ಪ ನಾಯಕ, ಅಮರೇಶ ಭೋವಿ, ಶಿವರಾಜ ನಾಯಕ, ಧರ್ಮಣ್ಣ, ತುಳಜಾರಾಮ್‌ ಸಿಂಗ್‌, ಅಮರೇಶ ಪೂಜಾರಿ ಸೇರಿದಂತೆ ಗ್ರಾಮಸ್ಥರು ಉಚ್ಚಾಯ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT