ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣರ ತತ್ವಾದರ್ಶ ಮಾದರಿ: ಸದಾನಂದ ಪೂಜಾರಿ

Last Updated 22 ಸೆಪ್ಟೆಂಬರ್ 2021, 13:23 IST
ಅಕ್ಷರ ಗಾತ್ರ

ರಾಯಚೂರು: ಹೂಗಾರ ಸಮಾಜ 12ನೇ ಶತಮಾನದಿಂದ ಎಲ್ಲಾ ಸಮುದಾಯಗಳ ಜೊತೆ ಅನ್ಯೋನ್ಯದಿಂದ ಕಾಯಕ ಮಾಡುತ್ತಿದೆ. ಶರಣ ಪರಂಪರೆಯಲ್ಲಿ ಕಾಯಕ ನಂಬಿದ ಶರಣ ಹೂಗಾರ ಮಾದಯ್ಯ ಅವರು 700 ಗಣಂಗಗಳಲ್ಲಿ ಗುರುತಿಸಿಕೊಂಡವರು ಎಂದು ಜಿಲ್ಲಾ ಹೂಗಾರ ಸಮಾಜ ಸಂಘದ ಸದಸ್ಯ ಸದಾನಂದ ಎಂ.ಪೂಜಾರಿ ಹೇಳಿದರು.

ನಗರದ ಶ್ರೀ ಸಾಯಿಮಂದಿರದಲ್ಲಿ ರಾಯಚೂರು ಜಿಲ್ಲಾ ಹಾಗೂ ತಾಲ್ಲೂಕು ಹೂಗಾರ ಸಮಾಜ ಸಂಘದಿಂದ ಈಚೆಗೆ ಏರ್ಪಡಿಸಿದ್ದ ಶರಣ ಹೂಗಾರ ಮಾದಯ್ಯ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶರಣರ ಕಾಲದಲ್ಲಿ ಕಾಯಕ ತತ್ವ ಪರಿಪಾಲನೆಯ ಭಾಗವಾಗಿ ಹೂವು, ಪತ್ರಿ ಪೂಜೆಗೆ ನೀಡುವ ಮೂಲಕ ತಮ್ಮ ಬದ್ದತೆ ಪ್ರದರ್ಶಿಸಿದ್ದರು. ಹೂಗಾರ ಮಾದಯ್ಯ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ. ಮಲ್ಲರಸ ರಾಜನ ಶಿವಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಹೂಗಾರ ಮಾದಯ್ಯ ಅವರಿಗೆ ಮಲ್ಲರಸ ರಾಜರೇ ಶ್ರೀಶೈಲದಲ್ಲಿ ಲಿಂಗ ದೀಕ್ಷೆ ಕೊಡಿಸಿದ್ದಾರೆ ಎಂದರು.

ಜಿಲ್ಲಾ ಹೂಗಾರ ಸಮಾಜ‌ ಸಂಘದ ಅಧ್ಯಕ್ಷ ಈರಣ್ಣ ಹೂಗಾರ ಮಾತನಾಡಿ, ನಾಡಿನ ಎಲ್ಲಾ ಸಮುದಾಯಗಳ ಜೊತೆ ಪ್ರೀತಿ, ವಿಶ್ವಾಸದೊಂದಿಗೆ ಇಂದಿಗೂ ಹೂಗಾರ ಮಾದಯ್ಯ ಅವರ ಹೂ,‌ಪತ್ರಿ ನೀಡುವ ಕಾಯಕದಲ್ಲಿ ಇದೆ. ಹಿರಿಯರ ಮಾರ್ಗದರ್ಶನದಲ್ಲಿ ಸಮಾಜ ಸಂಘಟಿಸಬೇಕಿದೆ. ಹೂಗಾರ ಮಾದಯ್ಯನವರ ಆದರ್ಶಗುಣ ಪಾಲನೆ ಮಾಡಬೇಕಿದೆ ಎಂದು ಹೇಳಿದರು.

ಜಿಲ್ಲಾಧ್ಯಕ್ಷ ಈರಣ್ಣ ಹೂಗಾರ, ಗೌರವಾಧ್ಯಕ್ಷ ಉಗ್ರನರಸಿಂಹಪ್ಪ ಹೂಗಾರ ಅವರಿಗೆ ಶ್ರೀ ಸಾಯಿ ಮಂದಿರ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.

ಸಮಾಜದ ಮುಖಂಡ ಬಸವರಾಜ ಹೂಗಾರ, ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಹೂಗಾರ ಸಿರವಾರ, ರಾಯಚೂರು ತಾಲ್ಲೂಕಾಧ್ಯಕ್ಷ ನರಸಿಂಹ ಹೂಗಾರ, ಈರಣ್ಣ ಹೂಗಾರ ಜಾಲಿಬೆಂಚಿ, ಶಿವಕುಮಾರ ದೇವಸೂಗೂರು, ಮಲ್ಲಿಕಾರ್ಜುನ ಉಣ್ಣಿಬಾವಿ, ಹನುಮಂತ್ರಾಯ ಹೂಗಾರ, ಪ್ರಭು ಕಟ್ಲಟಕೂರು, ಸಾಯಿಮಂದಿರದ ಸಾಯಿಕಿರಣ್ ಆದೋನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT