ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಸಿರಿಧಾನ್ಯ ಬೆಳೆಯಿಂದ ಭೂಮಿಯ ಫಲವತ್ತತೆ, ರೈತರ ಆದಾಯ ಹೆಚ್ಚಳ’

Published : 12 ಸೆಪ್ಟೆಂಬರ್ 2024, 15:43 IST
Last Updated : 12 ಸೆಪ್ಟೆಂಬರ್ 2024, 15:43 IST
ಫಾಲೋ ಮಾಡಿ
Comments

ಸಿರವಾರ: ‘ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯುವುದರಿಂದ ಭೂಮಿಯ ಫಲವತ್ತತೆ, ರೈತರಿಗೆ ಆದಾಯ ಹೆಚ್ಚಳದ ಜತೆ ಮನುಷ್ಯನ ಆರೋಗ್ಯ ಉತ್ತಮವಾಗಿರಲು ಆಹಾರ ದೊರೆಯುತ್ತದೆ’ ಎಂದು ಹೈದರಾಬಾದ್‌ ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆಯ ವಿಜ್ಞಾನಿ ವೈದ್ಯ ಆಮಸಿದ್ಧ ಹೇಳಿದರು.

ತಾಲ್ಲೂಕಿನ ಜಕ್ಕಲದಿನ್ನಿ ಗ್ರಾಮದಲ್ಲಿ ಬೆಟ್ಟದ ಬಸವೇಶ್ವರ ರೈತ ಉತ್ಪಾದಕ ಕಂಪನಿ ಮತ್ತು ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆ, ಹೈದರಾಬಾದ್, ಕೃಷಿ ವಿಜ್ಞಾನ ಕೇಂದ್ರ ರಾಯಚೂರು ನ ಸಹಯೋಗದಲ್ಲಿ ಗುರುವಾರ ನಡೆದ ‘ಊದಲು ಸಿರಿಧಾನ್ಯ ಬೀಜ ಉತ್ಪಾದನಾ ಕ್ಷೇತ್ರೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆಯ ವೈದ್ಯ ಸಂಗಪ್ಪ ಅವರು ಸಿರಿಧಾನ್ಯ ಬೀಜ ಉತ್ಪಾದನೆಯು ಜಕ್ಕಲದಿನ್ನಿ ಗ್ರಾಮವನ್ನು ಒಂದು ಬೀಜ ಗ್ರಾಮವಾಗಿ ರೂಪಿಸುವ ಕುರಿತು ಮಾಹಿತಿ ನೀಡಿ ಅದಕ್ಕೆ ಎಲ್ಲರ ಸಹಕಾರ ಅಗತ್ಯ ಇದೆ ಎಂದರು.

ಹೈದರಾಬಾದ್‌ನ ಸಿರಿಧಾನ್ಯ ಉದ್ಯಮಿ ಅನಿಲ ರಾಚ್ಮಲ್ಲಾ, ರಾಯಚೂರು ಕೃಷಿ ವಿಶ್ವವಿದ್ಯಾಲಯದ ವೈದ್ಯ ಸುನೀಲ ಸಿರೋಳ, ಪ್ರಗತಿಪರ ರೈತ ಶಿವಪ್ಪ, ಅತ್ತನೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶರಣಗೌಡ ಜಕ್ಕಲದಿನ್ನಿ,
ಬೆಟ್ಟದ ಬಸವೇಶ್ವರ ರೈತ ಉತ್ಪಾದಕ ಕಂಪನಿಯ ನಿರ್ದೇಶಕರು ಮತ್ತು ಜಕ್ಕಲದಿನ್ನಿ ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT