ಮಂಗಳವಾರ, ಅಕ್ಟೋಬರ್ 26, 2021
20 °C

ಕೀಟನಾಶಕ ಔಷಧ ಮಾರಾಟ ಮಳಿಗೆ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕವಿತಾಳ: ಪಟ್ಟಣದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವಿ.ಅಂಬಿಕಾ ಅವರು ಇಲ್ಲಿನ ರಸಗೊಬ್ಬರ ಹಾಗೂ ಕ್ರಿಮಿನಾಶಕ ಔಷಧ ಮಾರಾಟ ಮಾಡುವ ಮಳಿಗೆಗಳಿಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ಮಾಡಿದರು.

‘ಈ ಭಾಗದಲ್ಲಿ ತೊಗರಿ, ಭತ್ತ ಮತ್ತು ಹತ್ತಿ ಬೆಳೆಗಳನ್ನು ಪ್ರಮುಖವಾಗಿ ಬೆಳೆಯಲಾಗಿದ್ದು ಈ ಬೆಳೆಗಳಲ್ಲಿ ಕೀಟ ಮತ್ತು ರೋಗ ಬಾಧೆ ಕಂಡು ಬರುತ್ತಿದೆ. ಹೀಗಾಗಿ ರೈತರು ಉತ್ತಮ ಗುಣಮಟ್ಟದ ಕ್ರಿಮಿನಾಶಕ ಔಷಧಗಳನ್ನು ಖರೀದಿಸಿ ಸಿಂಪಡಿಸಬೇಕು. ರೈತರು ತಾವು ಖರೀದಿಸಿದ ಕ್ರಿಮಿನಾಶಕಗಳಿಗೆ ತಪ್ಪದೆ ರಸೀದಿ ಪಡೆಯಬೇಕು’ ಎಂದು ಹೇಳಿದರು.

ಮಾರಾಟ ಮಳಿಗೆಗಳಲ್ಲಿ ಅವಧಿ ಮೀರಿದ ಮತ್ತು ಬಯೋ ಕೀಟನಾಶಕ ಮತ್ತಿತರ ಅನಧಿಕೃತ ಕೀಟನಾಶಕಗನ್ನು ಮಾರಾಟ ಮಾಡಲಾಗುತ್ತಿದಿಯೇ ಎನ್ನುವುದನ್ನು ಪರಿಶೀಲನೆ ಮಾಡಲಾಗಿದೆ ಎಂದು ಹೇಳಿದರು.

ಸಿಬ್ಬಂದಿ ಚಾಂದ್ ಪಾಶಾ ಮುಲ್ಲಾ ಮತ್ತಿತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.