ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಕೃಷ್ಣನ ಸಂದೇಶಗಳು ಇಂದಿಗೂ ಪ್ರಸ್ತುತ

ಜಿಲ್ಲೆಯಾದ್ಯಂತ ಸಂಭ್ರಮದ ಶ್ರೀಕೃಷ್ಣ ಜಯಂತಿ ಆಚರಣೆ
Last Updated 23 ಆಗಸ್ಟ್ 2019, 15:18 IST
ಅಕ್ಷರ ಗಾತ್ರ

ರಾಯಚೂರು: ಶ್ರೀಕೃಷ್ಣನು ಭಗದ್ಗೀತೆಯಲ್ಲಿ ನೀಡಿದ ಸಂದೇಶಗಳು ಮಾನವ ಕುಲಕ್ಕೆ ಅಂದು, ಇಂದು ಎಂದೆಂದಿಗೂ ಪ್ರಸ್ತುತವಾಗಿವೆ ಎಂದು ಸಂಸದ ರಾಜಾ ಅಮರೇಶ ನಾಯಕ ಹೇಳಿದರು.

ನಗರದ ಜಿಲ್ಲಾ ಗೊಲ್ಲರ (ಯಾದವ) ಸಂಘದ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶುಕ್ರವಾರ ಏರ್ಪಡಿಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶ್ರೀಕೃಷ್ಣನ ಆಚರಣೆ ಭಾರತೀಯ ಸಂಸ್ಕೃತಿಯಲ್ಲಿ ಬಹುದೊಡ್ಡ ಆಚರಣೆ ಆಗಿದೆ. ವಿದೇಶಗಳಲ್ಲಿ ಅವರ ಆದರ್ಶ ತತ್ವಗಳನ್ನು ಪಾಲಿಸುತ್ತಾರೆ. ಶ್ರೀಕೃಷ್ಣನ ಕುಲಬಾಂಧವರು ಹಿಂದುಳಿದ ಜನಾಂಗವಾಗಿದ್ದರೂ, ಸಮಾಜದ ವಿಚಾರಗಳು ಒಂದೇ ರೀತಿಯಲ್ಲಿವೆ ಎಂದರು.

‘ದೇವರಾಜು ಅರಸು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಹಿಂದುಳಿದ ವರ್ಗಗಳಿಗೆ ನೀಡಿದ ವಿಶೇಷ ಸೌಲಭ್ಯಗಳಿಂದ ನಾವುಗಳು ಮೇಲ್ಮಟ್ಟಕ್ಕೆ ಬರಲು ಸಾಧ್ಯವಾಯಿತು. ಕೇಂದ್ರ ಸರ್ಕಾರದಿಂದ ಬಂದಂತಹ ಯೋಜನೆಗಳಲ್ಲಿ ತಮ್ಮ ಸಮುದಾಯದಕ್ಕೂ ನನ್ನ ಕೈಲಾದಷ್ಟು ಸಹಾಯ ಮಾಡುತ್ತೆನೆ’ ಎಂದು ಭರವಸೆ ನೀಡಿದರು.

ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಎಲ್ಲಿ ಅಧರ್ಮ ಹೆಚ್ಚುತ್ತದೆ ಅಲ್ಲಿ ಶ್ರೀಕೃಷ್ಣ ಜನ್ಮ ತಾಳುತ್ತಾನೆ. ಅದು ಯಾವುದೇ ರೂಪದಲ್ಲಿರಬಹುದು, ಶ್ರೀಕೃಷ್ಣ ವಂಶದವರಾದ ತಾವುಗಳು ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಮುಂದೆ ಬರಬೇಕು. ಸಮುದಾಯಗಳು ಯಾವುದೇ ಪಕ್ಷಕ್ಕೆ ಸೀಮಿತವಾಗದೆ ಎಲ್ಲಾ ಪಕ್ಷಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ತಿಳಿಸಿದರು.

ಶ್ರೀಕೃಷ್ಣ ಜಯಂತಿಗೆ ಸರ್ಕಾರಿ ರಜೆ ಘೋಷಿಸುವಂತೆ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಪ್ರಸ್ತಾಪಿಸುತ್ತೇನೆ ಎಂದರು.

ಜಿಲ್ಲಾ ಯಾದವ ಸಂಘದ ರಾಜ್ಯ ಉಪಾಧ್ಯಕ್ಷ ಎ.ಮಾರೆಪ್ಪ, ಜಿಲ್ಲಾ ಯಾದವ ಸಂಘದ ಅಧ್ಯಕ್ಷ ಕೆ.ಹನುಮಂತಪ್ಪ, ಮಾಜಿ ನಗರ ಸದಸ್ಯ ತಿಮ್ಮಪ್ಪ, ತಾಲೂಕ ಪಂಚಾyiti ಅಧ್ಯಕ್ಷ ತಿಮ್ಮಪ್ಪ ರಾಠೋಡ, ಸಿರವಾರ ತಾಲ್ಲೂಕು ಯಾದವ ಸಂಘದ ಅಧ್ಯಕ್ಷ ಯಮುನಪ್ಪ, ನಗರಸಭೆ ಸದಸ್ಯ ಹರೀಶ ನಾಡಗೌಡ, ಈಡಿಗ ಸಮಾಜದ ಅಧ್ಯಕ್ಷ ಯಂಕನಗೌಡ ಸೇರಿದಂತೆ ಯಾದವ ಸಮಾಜದ ಕುಲಭಾಂದವರು ಇದ್ದರು.

ಮೆರವಣಿಗೆ: ಶ್ರೀ ಕೃಷ್ಣ ಜಯಂತಿ ಅಂಗವಾಗಿ ಮಹಿಳಾ ಸಮಾಜದಿಂದ ಜಿಲ್ಲಾ ಯಾದವ ಸಂಘದ ಮೈದಾನವರೆಗೆ ಶ್ರೀ ಕೃಷ್ಣ ಭಾವಚಿತ್ರ ಮೆರವಣಿಗೆ ಆಯೋಜಿಸಲಾಗಿತ್ತು. ಸಂಸದ ರಾಜಾ ಅಮರೇಶ್ವರ ನಾಯಕ ಅವರು ಮೆರವಣಿಗೆಗೆ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT