ಸಿಂಧನೂರು: ‘ಬಕ್ರೀದ್ ವೇಳೆ ಗೋಹತ್ಯೆಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕು’ ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಪದಾಧಿಕಾರಿಗಳು ತಹಶೀಲ್ದಾರ್ ಅರುಣ ಎಚ್.ದೇಸಾಯಿ ಅವರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.

ವಿಶ್ವ ಹಿಂದೂ ಪರಿಷತ್ತಿನ ಮುಖಂಡ ದುರ್ಗಾ ಪ್ರಸಾದ್ ಶರ್ಮಾ ಮಾತನಾಡಿ,‘ಗೋವುಗಳ ವಧೆ ನಿಲ್ಲಬೇಕು. ಸನಾತನ ಧರ್ಮ ಉಳಿಸಿಕೊಳ್ಳದಿದ್ದರೆ ನಮಗೆ ಬೇರೆ ದೇಶವಿಲ್ಲ. ಆದ್ದರಿಂದ ಸರ್ಕಾರ ತಕ್ಷಣವೇ ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿದ ನಿರ್ದಿಷ್ಟವಾದ ಕಾನೂನು ತರಬೇಕು’ ಎಂದು ಒತ್ತಾಯಿಸಿದರು. ಬಜರಂಗದಳದ ಜಿಲ್ಲಾ ಸಂಚಾಲಕ ಬಸವರಾಜ ಸಾಲಗುಂದ ಮಾತನಾಡಿ,‘ಪ್ರತಿವರ್ಷ ಬಕ್ರೀದ್ ವೇಳೆ ಗೋಹತ್ಯೆ ನಿಲ್ಲಿಸಿ ಎಂದು ಮನವಿ ಪತ್ರ ಸಲ್ಲಿಸುತ್ತೇವೆ. ಆದಾಗ್ಯೂ ಕಾನೂನು ಬಾಹಿರವಾಗಿ ಗೋಹತ್ಯೆ ನಡೆಸಲಾಗುತ್ತದೆ’ ಎಂದು ಆರೋಪಿಸಿದರು.

ವಿಎಚ್ಪಿ ತಾಲ್ಲೂಕು ಘಟಕದ ಅಧ್ಯಕ್ಷ ದೇವರಾಜ ಪಾಟೀಲ, ಜಿಲ್ಲಾ ಧಾರ್ಮಿಕ ಪ್ರಚಾರಕ ವಿಶ್ವನಾಥ ಚೌಧರಿ, ಮುಖಂಡರಾದ ಮನೋಹರ ಹಿರೇಮಠ, ನಾಗೇಶ ಪವಾರ್, ಕಿಶೋರ್ ಕುಮಾರ, ಶಿವಕುಮಾರ, ದೀಪು ಸಾಲಿಮಠ, ಶಿವಪ್ರಸಾದ, ನೆಕ್ಕಂಟಿ ಸುರೇಶ, ಟಿ.ರಾಮಾಂಜನೇಯ, ಉದಯಕುಮಾರ, ಅಕ್ಷಯಗೌಡ, ಶಿವು ಹಿರೇಮಠ, ಬಸವರಾಜ ತೆಂಗಿನಕಾಯಿ, ಆರ್.ಕೆ.ಚೌದ್ರಿ, ಅನಿಲ್ಕುಮಾರ, ಪ್ರಹ್ಲಾದ್ ಕೆಂಗಲ್, ಆನಂದ್ ಸಿಂಗ್, ಡಿ.ನಾಗರಾಜ, ಮನೋಜ್ ಕುಮಾರ, ಪ್ರದೀಪ್, ದೀಪು ನಾಯಕ, ವಿಜಯಲಕ್ಷ್ಮಿ, ಸುಮಿತ್ರಾ, ರಾಜೇಶ್ವರಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-32-414308920

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.