ಸಿಂಧನೂರು: ಸಚಿವ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಬಸನಗೌಡ ಬಾದರ್ಲಿ ಬೆಂಬಲಿತ ವೀರಶೈವ ಲಿಂಗಾಯತ ಸಮಾಜದ ಮುಖಂಡ ಹೊನ್ನನಗೌಡ ಬೆಳಗುರ್ಕಿ ಒತ್ತಾಯಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,‘ನವ ಸಂಕಲ್ಪ ನವ ಸಿಂಧನೂರು’ ಧ್ಯೇಯವಾಕ್ಯದಡಿ ಬಸನಗೌಡ ಬಾದರ್ಲಿ ಅವರು ಸಿಂಧನೂರು ತಾಲ್ಲೂಕಿನ ಸಮಗ್ರ ಅಭಿವೃದ್ಧಿಯ ಸಂಕಲ್ಪ ಮಾಡಿದ್ದಾರೆ. ಕಡಿಮೆ ಅವಧಿಯಲ್ಲಿಯೇ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿರುವ ಅವರು ಎಂಎಲ್ಸಿ ಅನುದಾನದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದ್ದಾರೆ’ ಎಂದರು.

‘ಅವರಿಗೆ ಸಚಿವ ಸ್ಥಾನ ನೀಡಿದರೆ ಈ ಭಾಗದಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಅನುಕೂಲವಾಗಲಿದೆ’ ಎಂದು ಹೇಳಿದರು.

ಮುಖಂಡರಾದ ಶಿವಕುಮಾರ ಜವಳಿ, ಆದನಗೌಡ ವಲ್ಕಂದಿನ್ನಿ, ರಾಮನಗೌಡ ಮಾಲಿ ಪಾಟೀಲ, ಲಿಂಗರಾಜ ಸಾಸಲಮರಿ, ಅಮರೇಶ ಕುರುಕುಂದಾ, ಹನುಮಂತಪ್ಪ ಮುಕ್ಕುಂದಾ, ಸಿದ್ದನಗೌಡ ಮಲ್ಲಾಪುರ, ಶರಣಯ್ಯಸ್ವಾಮಿ ಕೋಟೆ, ಶಶಿಧರಸ್ವಾಮಿ ಸಿಂಗಾಪುರ, ಸಂಗನಗೌಡ ಪಗಡದಿನ್ನಿ, ಚನ್ನಬಸವ ಅಲಬನೂರು, ಚನ್ನಬಸನಗೌಡ ಅಲಬನೂರು, ಬಸನಗೌಡ ಪಗಡದಿನ್ನಿ, ಪಂಪಾಪತಿ ಹುಡಾ, ಶರಣಯ್ಯ ಸ್ವಾಮಿ ರಾಗಲಪರ್ವಿ ಹಾಗೂ ಮಲ್ಲಿಕಾರ್ಜುನ ಹುಡಾ ಅವರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-32-1731079347

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.