ಸಿಂಧನೂರು: ‘ಹಿಂದೂ, ಮುಸ್ಲಿಂ, ಕ್ರೈಸ್ತ ಮತ್ತಿತರ ಧರ್ಮಗಳ ಜನ ಹಬ್ಬಗಳ ಮಹತ್ವವನ್ನು ಅರಿತು ಅರ್ಥಪೂರ್ಣವಾಗಿ ಆಚರಿಸಬೇಕು’ ಎಂದು ಡಿವೈಎಸ್ಪಿ ಚಂದ್ರಶೇಖರ ಜಿ.ನಾಯಕ ಹೇಳಿದರು.

ಸ್ಥಳೀಯ ಶಹರ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

‘ಬಕ್ರೀದ್ ಹಬ್ಬದ ದಿನದಂದು ಬಲಿ ಕೊಡುವುದು ವಾಡಿಕೆ. ಅದು ಕಾನೂನು ವ್ಯಾಪ್ತಿಯಲ್ಲಿರಬೇಕು. ವೈಯಕ್ತಿಕ ಜಗಳವನ್ನು ಹಬ್ಬಗಳಲ್ಲಿ ಹರಡಿ ಗಲಭೆ ಸೃಷ್ಟಿಸಬಾರದು. ಯುವಕರು ಬೈಕ್ಗಳ ಸೈಲೆನ್ಸರ್ ಕಿತ್ತು ಸಂಚರಿಸಿದರೆ ಕಾನೂನು ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಎಸ್.ಶರಣೇಗೌಡ, ವಕೀಲರ ಸಂಘದ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಎನ್.ರಾಮನಗೌಡ, ಜಾತಿ ನಿರ್ಮೂಲನಾ ಚಳವಳಿಯ ಸಂಸ್ಥಾಪಕ ಎಚ್.ಎನ್.ಬಡಿಗೇರ್, ಮುಖಂಡರಾದ ವೀರೇಶ ಯಡಿಯೂರಮಠ, ರವಿ ಹಿರೇಮಠ, ನಿಸಾರ್ ಖಾನ್ ಮಾತನಾಡಿ, ‘ಎಲ್ಲ ಜಾತಿ, ಧರ್ಮದವರು ಒಗ್ಗೂಡಿ ಹಬ್ಬ ಆಚರಿಸಬೇಕು’ ಎಂದರು.

ಸರ್ಕಲ್ ಇನ್ಸ್ಪೆಕ್ಟರ್ ವಿನಾಯಕ, ಮುಖಂಡರಾದ ಶ್ರೇಣಿಕ್ರಾಜ್ ಶೇಠ್, ವಿಶ್ವನಾಥ ಚೌದರಿ, ಸುರೇಶ ಜಿ.ಗೊಬ್ಬರಕಲ್, ವೀರೇಶ ರಾರಾವಿ, ಶಿವು, ಹನುಮೇಶ ಹಾಗೂ ಪ್ರೊಬೇಷನರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-32-235259838

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.