ಸಿಂಧನೂರು: ಜಮೀನಿನ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಅಲಬನೂರು ಗ್ರಾಮದಲ್ಲಿ ಮೈದುನನೇ ಅಣ್ಣನ ಹೆಂಡತಿಗೆ ಬುಧವಾರ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದು, ಇದನ್ನು ತಡೆಯಲು ಹೋದ ಅಣ್ಣನ ಮಗನ ಮೇಲೆಯೂ ದಾಳಿ ನಡೆಸಿ ಹೊಟ್ಟೆಗೆ ಚಾಕು ಚುಚ್ಚಿ ಕೊಲೆ ಮಾಡಿದ್ದಾನೆ.

ಬಸವರಾಜ ಕೊಲೆ ಆರೋಪಿ. ಈತನು ಮದುವೆಯಾದ ನಂತರ ಸಿರುಗುಪ್ಪ ತಾಲ್ಲೂಕಿನ ಅಳ್ಳಿಗನೂರಿನ ತನ್ನ ಪತ್ನಿಯ ಮನೆಯಲ್ಲಿ ವಾಸವಾಗಿದ್ದನು. ಈತನ ತಂದೆ ರುದ್ರಣ್ಣ ಹೆಸರಿನಲ್ಲಿ 1 ಎಕರೆ, ಅಣ್ಣ ಸಿದ್ದಪ್ಪ ಆಲ್ವಿ ಹೆಸರಿನಲ್ಲಿ 3 ಎಕರೆ ಜಮೀನು ಇತ್ತು. ಇದರಲ್ಲಿ ಎರಡು ಎಕರೆ ಜಮೀನಿಗಾಗಿ ಬಸವರಾಜ ಮತ್ತು ಸಿದ್ದಪ್ಪ ಎಂಬ ಸಹೋದರರ ಮಧ್ಯೆ ನಿರಂತರ ಜಗಳ ನಡೆದಿತ್ತು.

ಬಸವರಾಜ ಇತ್ತೀಚೆಗೆ ಅಲಬನೂರು ಗ್ರಾಮಕ್ಕೆ ಬಂದು ತನ್ನ ತಾಯಿಯ ಮನೆಯಲ್ಲಿದ್ದನು. ಸಹೋದರ ಸಿದ್ದಪ್ಪ ಆಲ್ವಿ ಮದುವೆ ಕಾರ್ಯಕ್ರಮದ ನಿಮಿತ್ತ ಹತ್ತಿಗುಡ್ಡಕ್ಕೆ ಅಡುಗೆ ಮಾಡಲು ತೆರಳಿದ್ದನು. ಅಣ್ಣ ಮನೆಯಲ್ಲಿ ಇಲ್ಲದೇ ಇದ್ದಾಗ ಅತ್ತಿಗೆ ಅಮೃತಾ ಸಿದ್ದಪ್ಪ ಆಲ್ವಿ ಅವರೊಂದಿಗೆ ಆಸ್ತಿ ಪಾಲಿಗಾಗಿ ಬಸವರಾಜ ಜಗಳ ತೆಗೆದಿದ್ದಾನೆ. ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದ್ದರಿಂದ ಅತ್ತಿಗೆಯ ಹೊಟ್ಟೆ, ಕುತ್ತಿಗೆ, ಕೈಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಪ್ರಯತ್ನಿಸಿದ್ದಾನೆ.

ಈ ಸಂದರ್ಭದಲ್ಲಿ ಇದನ್ನು ತಡೆಯಲು ಹೋದ ಸಹೋದರನ ಪುತ್ರ ನಾಗರಾಜ ಸಿದ್ದಪ್ಪ ಆಲ್ವಿ (13) ಈತನಿಗೂ ಚಾಕುವಿನಿಂದ ಹೊಟ್ಟೆಗೆ ಇರಿದಿದ್ದರಿಂದ ತೀವ್ರವಾಗಿ ಗಾಯಗೊಂಡು ಅಪಾರ ರಕ್ತಸ್ರಾವವಾಗಿ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇದಲ್ಲದೆ ಸಿದ್ದಪ್ಪ ಅವರ ಎರಡನೇ ಪುತ್ರ ಧನುಷ್ ಕುಮಾರ (8) ಎಂಬ ಬಾಲಕನನ್ನು ಸಹ ಮೇಲಕ್ಕೆ ಎತ್ತಿ ಗೋಡೆಗೆ ಬಿಸಾಕಿ ಹಲ್ಲೆ ನಡೆಸಿದ್ದರಿಂದ ತಲೆ ಮತ್ತು ಕಾಲಿಗೆ ತೀವ್ರ ಪೆಟ್ಟಾಗಿದೆ. ಅವರ ಅಜ್ಜ ಬಂದು ಬಾಲಕನನ್ನು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.

ತೀವ್ರ ಗಾಯಗೊಂಡಿದ್ದ ಅಮೃತಾ ಮತ್ತು ಅವರ ಎರಡನೇ ಪುತ್ರ ಧನುಷ್ ಕುಮಾರ ಅವರನ್ನು ಗ್ರಾಮಸ್ಥರು ತಕ್ಷಣವೇ ಸಿಂಧನೂರು ನಗರದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರಿಂದ ವೈದ್ಯರು ಹಾಗೂ ಸಿಬ್ಬಂದಿ ಸೂಕ್ತ ಚಿಕಿತ್ಸೆ ನೀಡಿ ರಕ್ಷಿಸಿದ್ದಾರೆ. ನಂತರ ಡಿವೈಎಸ್ಪಿ ಚಂದ್ರಶೇಖರ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಂದ ಮಾಹಿತಿ ಪಡೆದುಕೊಂಡರು. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಸವರಾಜನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಬಾಲಕ ನಾಗರಾಜನ ಮೃತದೇಹವನ್ನು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-32-836446123

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.