ಸಿಂಧನೂರು: ತಾಲ್ಲೂಕಿನ ಅವಳಿ ಗ್ರಾಮಗಳಾದ ಬೊಮ್ಮನಾಳ ಮತ್ತು ಚಿರತ್ನಾಳ ಮಧ್ಯದ ಹಳ್ಳದ ಸೇತುವೆ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿದೆ.

ಮೂರು ದಿನಗಳಿಂದ ರಾತ್ರಿ ಸುರಿದ ಧಾರಾಕಾರ ಮಳೆಗೆ ಕಿರು ಸೇತುವೆಯೂ ಕೊಚ್ಚಿ ಹೋಗಿರುವುದರಿಂದ ಸಂಚಾರ ಸ್ಥಗಿತಗೊಂಡಿದೆ.

ಬೊಮ್ಮನಾಳ ಗ್ರಾಮದಿಂದ ಚಿರತ್ನಾಳಗೆ ಹೋಗಲು ಹಳ್ಳಕ್ಕೆ ಹಿಂದೆ ಇದ್ದ ಕಲ್ಲು ಜೋಡಣೆಯ ಕಿರು ಸೇತುವೆಯನ್ನು ತೆಗೆದು ಎತ್ತರದ ಸೇತುವೆ ನಿರ್ಮಾಣ ಮಾಡಲು ನಾಲ್ಕು ವರ್ಷಗಳ ಹಿಂದೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಮಾಜಿ ಸಚಿವ ವೆಂಕಟರಾವ್ ನಾಡಗೌಡರ ಅವಧಿಯಲ್ಲಿ ದೇವರಗುಡಿ, ಪಗಡದಿನ್ನಿ, ಬೊಮ್ಮನಾಳ ಮತ್ತು ಚಿರತ್ನಾಳ ನಡುವಿನ ಹಳ್ಳದ ಸೇತುವೆಗಳಿಗೆ ₹10 ಕೋಟಿ ಬಿಡುಗಡೆ ಮಾಡಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗಿತ್ತು.

ದೇವರಗುಡಿ ಮತ್ತು ಪಗಡದಿನ್ನಿ ಸೇತುವೆಗಳು ಪೂರ್ಣಗೊಂಡು 1 ವರ್ಷ ಗತಿಸಿದೆ. ಪ್ರಸ್ತುತ ಸೇತುವೆಗೆ ಮಾತ್ರ ಕಾಯಕಲ್ಪ ಸಿಗುತ್ತಿಲ್ಲ. ಈ ಸೇತುವೆಗೆ ₹3 ಕೋಟಿ ಹಣವನ್ನು ಕಾಯ್ದಿರಿಸಿ ವಿಜಯಪುರ ಮೂಲದ ಶಂಕ್ರಗೌಡ ಹೊಸಮನಿ ಎಂಬುವವರಿಗೆ ಕಾಮಗಾರಿಯ ಜವಾಬ್ದಾರಿ ವಹಿಸಲಾಗಿದೆ.

ಕಾಮಗಾರಿ ನನೆಗುದಿಗೆ ಬಿದ್ದಿರುವ ಕುರಿತು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಭರತ್ಕುಮಾರ ಅವರನ್ನು ಸಂಪರ್ಕಿಸಿದಾಗ ‘ಗ್ರಾಮೀಣ ಪ್ರದೇಶದ ಸೇತುವೆ ಆಗಿದ್ದರಿಂದ 6 ಮೀಟರ್ ಆಳ ತೋಡಲು ಯೋಜನೆ ಸಿದ್ಧಪಡಿಸಲಾಗಿತ್ತು. ಆದರೆ, 8 ತಿಂಗಳು ಸತತ ನೀರು ಇದ್ದ ಕಾರಣ ಹಾಗೂ ಒಂದು ಕಡೆ ಕಪ್ಪು ಮಣ್ಣಿನ ಸಮಸ್ಯೆ ಉದ್ಬವಿಸಿದ್ದರಿಂದ 40 ಮೀಟರ್ವರೆಗೆ ಅಡಿಪಾಯ ಸಿಗಲಿಲ್ಲ. ಇದರಿಂದ ರಾಜ್ಯ ತಾಂತ್ರಿಕ ಸಲಹೆಗಾರರಿಂದ ಪ್ರಮಾಣ ಪತ್ರ ಪಡೆದು ಹೊಸದಾಗಿ ಕ್ರಿಯಾ ಯೋಜನೆ ತಯಾರಿಸಿ, ಅನುಮತಿಗಾಗಿ ಇಲಾಖೆಯ ಮುಖ್ಯ ಕಾರ್ಯಾಚರಣೆ ಅಧಿಕಾರಿಗೆ ಕಳುಹಿಸಿ ಕೊಡಲಾಗಿದೆ ಎಂದು ಪ್ರತಿಕ್ರಿಯಿಸಿದರು.

ಕಾಮಗಾರಿ ಪ್ರಗತಿ ಮಾತ್ರ ಏನಿಲ್ಲ:

ಲಿಂಗಸುಗೂರಿನಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಕಚೇರಿ ಇದೆ. ಸಿಂಧನೂರಿಗೆ ಅಧಿಕಾರಿಗಳು ಯಾವಾಗ ಬರುತ್ತಾರೋ, ಯಾವಾಗ ಹೋಗುತ್ತಾರೋ ತಿಳಿಯುತ್ತಿಲ್ಲ. ದೂರ ವಾಣಿಯಲ್ಲಿ ಕಿರಿಯ ಎಂಜಿನಿಯರ್ ಅವರನ್ನು ಕೇಳಿದರೆ ‘ಎಸ್ಟಿಮೇಂಟ್ ಬದಲಾಗಿದೆ. ಬೇಕಾದ್ರೆ ಸಾಹೇಬ್ರನ್ನೇ ಕೇಳಿ’ ಎಂದು ಹೇಳುತ್ತಾರೆ.

‘ನಾಲ್ಕು ವರ್ಷಗಳಿಂದ ಇದೇ ಮಾತನ್ನೇ ಹೇಳುತ್ತಿದ್ದಾರೆ. ಸೇತುವೆ ನಿರ್ಮಾಣ ಪ್ರಗತಿ ಕುರಿತು ಏನು ಹೇಳುತ್ತಿಲ್ಲ’ ಎಂದು ಚಿರತ್ನಾಳ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಗ್ರಾಮಸ್ಥರಿಂದ ಹೋರಾಟ

ಸಣ್ಣ ಹಳ್ಳ ಬಂದರೂ ದಾಟಿ ಬೊಮ್ಮನಾಳಕ್ಕೆ ಬರಲು ಕಷ್ಟವಾಗುತ್ತಿದೆ. ಇದ್ದ ಕಿರು ಸೇತುವೆ ಕಿತ್ತೆಸೆದು ಅನ್ಯಾಯ ಮಾಡಿದ್ದಾರೆ. ಹೀಗಾಗಿ ಮೂರು ದಿನಗಳಿಂದ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಕಿರು ಸೇತುವೆಯೂ ಕೊಚ್ಚಿ ಹೋಗಿದೆ. ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ವ್ಯವಹಾರ, ವಹಿವಾಟು, ಸರ್ಕಾರಿ ಕಚೇರಿಗಳಿಗೆ ಸಿಂಧನೂರಿಗೆ ಹೋಗದೆ ಮನೆಯಲ್ಲಿಯೇ ಕುಳಿತು ಕೊಳ್ಳಬೇಕಾದ ಪರಿಸ್ಥಿತಿಯಿದೆ ಎಂದು ಎಂದು ಚಿರತ್ನಾಳ ಗ್ರಾಮಸ್ಥರಾದ ಶರಣೇಗೌಡ, ಮಲ್ಲಿಕಾರ್ಜುನ ಹಾಗೂ ಶರಣಪ್ಪ ತಿಳಿಸಿದರು.

ಆದಷ್ಟು ಶೀಘ್ರ ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಿ, ಗುಣಮಟ್ಟದ ಕೆಲಸ ಮಾಡಿ ಪೂರ್ಣಗೊಳಿಸಿ, ಜನರ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ನಾಲ್ಕು ಗ್ರಾಮಗಳ ನಿವಾಸಿಗಳೆಲ್ಲ ಬೃಹತ್ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ನಾಲ್ಕು ವರ್ಷ ಕಳೆದರೂ ಸೇತುವೆ ಕಾಮಗಾರಿ ಪೂರ್ಣಗೊಂಡಿಲ್ಲ. ತಾತ್ಕಾಲಿಕವಾಗಿ ನಿರ್ಮಿಸಿದ ಸೇತುವೆ ಕಿತ್ತು ಹೋಗಿದ್ದು, ಸಂಚಾರ ಸ್ಥಗಿತಗೊಂಡಿದೆ.
– ಶರಣೇಗೌಡ, ಮಲ್ಲಿಕಾರ್ಜುನ, ಶರಣಪ್ಪ ಚಿರತ್ನಾಳ ಗ್ರಾಮಸ್ಥರು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-32-1500036899

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.