ಸಿಂಧನೂರು: ‘ಮಾಜಿ ದೇವದಾಸಿ ಮತ್ತು ದಲಿತ ಮಹಿಳೆಯರಿಗೆ ನೀಡಿರುವ ಭೂಮಿಯನ್ನು ಕಬ್ಜಾ ಮಾಡಿರುವ ಮಾಲೀಕನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕೂಲಿಕಾರರ ಸಂಘದ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಅಪ್ಪಣ್ಣ ಕಾಂಬಳೆ ಒತ್ತಾಯಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನ ವಿರುಪಾಪುರ ಗ್ರಾಮದ ಸ.ನಂ.184/5 ರಲ್ಲಿ 9 ಎಕರೆ ಭೂಮಿಯನ್ನು ವೀರಬಸಪ್ಪ ಅವರಿಂದ ಒಂದು ಎಕರೆಗೆ ₹16 ಸಾವಿರದಂತೆ ಖರೀದಿಸಿ 2005-26 ರಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮ ದೇವದಾಸಿ ಮಹಿಳೆ ಕರಿಯಮ್ಮ, ದಲಿತ ಮಹಿಳೆಯರಾದ ತಾಯಮ್ಮ, ದೇವಕ್ಯೆಮ್ಮ, ಗಂಗಮ್ಮ ಅವರಿಗೆ ಮಂಜೂರು ಮಾಡಿದೆ’ ಎಂದು ವಿವರಿಸಿದರು.

‘ಆದರೆ ಭೂಮಿ ಮಾಲೀಕ ವೀರಬಸಪ್ಪ ಭೂಮಿಯನ್ನು ಫಲಾನುಭವಿಗಳ ಹೆಸರಿಗೆ ಮಾಡಿಸಿ ಕೊಡುವುದಾಗಿ ಹೇಳಿ ನಾಲ್ವರು ಫಲಾನುಭವಿಗಳಿಂದ ತಲಾ ₹5 ಸಾವಿರ ಪಡೆದು ಪೆಡ್ಡಿಂಗ್ ನೋಂದಣಿ ಮಾಡಿಸಿ, ತನ್ನ ಮಗಳಿಗೆ ದಾನ ಪತ್ರ ಮಾಡಿಕೊಟ್ಟಿದ್ದಾರೆ. ಈ ಕುರಿತು ಉಪ ನೋಂದಣಾಧಿಕಾರಿ ಮತ್ತು ನಿಗಮದ ಅಧಿಕಾರಿಗಳು ದಾಖಲಾತಿ ಪತ್ರಗಳನ್ನು ಕೊಡುತ್ತಿಲ್ಲ’ ಎಂದು ಆರೋಪಿಸಿದರು.

ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಮಾಳಮ್ಮ ಮಾತನಾಡಿ, ‘ನಿಗಮದಿಂದ ಮಂಜೂರಾದ 9 ಎಕರೆ ಭೂಮಿ ಕಳೆದ 20 ವರ್ಷಗಳಿಂದ ಭೂಮಾಲೀಕರ ಕಬ್ಜಾದಲ್ಲಿಯೇ ಇದೆ. ಈ ಭೂಮಿ ಹೆಸರಿಯಲ್ಲಿ ಸೊಸೈಟಿಯಲ್ಲಿ ಸಾಲ ಪಡೆದಿದ್ದಾರೆ. ಫಲಾನುಭವಿಗಳಿಗೆ ಭೂಮಿ ಬಿಟ್ಟು ಕೊಡುವಂತೆ ಮಾಲೀಕ ವೀರಬಸಪ್ಪ ಅವರಿಗೆ ಕೇಳಿದರೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಧಮ್ಕಿ ಹಾಕುತ್ತಿದ್ದಾರೆ. ಅಲ್ಲದೆ ಫಲಾನುಭವಿಗಳಿಗೆ ಜೀವ ಭಯ ಇದೆ. ಆದ್ದರಿಂದ ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಮತ್ತು ನಿಗಮದ ಅಧಿಕಾರಿಗಳು ತಕ್ಷಣವೇ ಸೂಕ್ತ ಕ್ರಮಕೈಗೊಂಡು ಫಲಾನುಭವಿಗಳಿಗೆ ಭೂಮಿ ಕೊಡಿಸಬೇಕು. ಕಬ್ಜಾ ಮಾಡಿರುವ ಮಾಲೀಕ ಮತ್ತು ಅಂದಿನ ನಿಗಮದ ಅಧಿಕಾರಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ನಿರ್ಲಕ್ಷ್ಯ ವಹಿಸಿದರೆ ನ್ಯಾಯಾಲಯದಲ್ಲಿ ದಾವೆ ಹೂಡಿ, ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕೂಲಿಕಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಂಕ್ರಪ್ಪ ಕೆಂಗಲ್, ಉಪಾಧ್ಯಕ್ಷ ಶರಣಪ್ಪ, ದೇವದಾಸಿ ಮಹಿಳಾ ವಿಮೋಚನಾ ಸಂಘದ ಗೌರವಾಧ್ಯಕ್ಷ ಕೆ.ಜಿ.ವೀರೇಶ, ಫಲಾನುಭವಿಗಳಾದ ಕರಿಯಮ್ಮ, ತಾಯಮ್ಮ, ದೇವಕ್ಯೆಮ್ಮ, ಗಂಗಮ್ಮ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-32-223863044

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.