ಸಿಂಧನೂರು: ‘ತಾಲ್ಲೂಕು ವ್ಯಾಪ್ತಿಯಲ್ಲಿ 2024ರಿಂದ ಇಲ್ಲಿಯವರೆಗೆ ಅಬಕಾರಿ ಇಲಾಖೆಯಿಂದ ಒಟ್ಟು 517 ಪ್ರಕರಣಗಳನ್ನು ದಾಖಲಿಸಲಾಗಿದ್ದು, 11 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಬಕಾರಿ ಕಚೇರಿಯ ಸರ್ಕಲ್ ಇನ್ಸ್ಪೆಕ್ಟರ್ ಗಂಗಾಧರ ಬಿ.ಬಡಿಗೇರ ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಸಿಂಧನೂರು ನಗರದಲ್ಲಿ 22, ಗ್ರಾಮೀಣ ಪ್ರದೇಶದಲ್ಲಿ 27 ಮದ್ಯದ ಅಂಗಡಿಗಳಿವೆ. ಇವುಗಳಲ್ಲಿ ಸಿಎಲ್-2 ಬೆಳಿಗ್ಗೆ 10 ರಿಂದ ರಾತ್ರಿ 10 ಗಂಟೆ, ಸಿಎಲ್-4, ಸಿಎಲ್-7 ಬೆಳಿಗ್ಗೆ 9ರಿಂದ ರಾತ್ರಿ 12 ಗಂಟೆ, ಎಂಎಸ್ಐಎಲ್ ಬೆಳಿಗ್ಗೆ 11ರಿಂದ ರಾತ್ರಿ 10 ಗಂಟೆಯವರೆಗೆ ತೆರೆಯಲು ಅವಕಾಶವಿದೆ. 2016ಕ್ಕಿಂತ ಪೂರ್ವದಲ್ಲಿ ಪರವಾನಗಿ ಪಡೆದ ಮದ್ಯದಂಗಡಿಗಳು ಶಾಲಾ-ಕಾಲೇಜು, ದೇವಸ್ಥಾನದಿಂದ 220 ಮೀಟರ್ ಅಂತರದಲ್ಲಿರಬೇಕೆಂಬ ನಿಯಮವಿದೆ’ ಎಂದರು.

‘2024ರಿಂದ 2026ರ ಮೇ ವರೆಗೆ ಮದ್ಯ ಅಕ್ರಮ ಮಾರಾಟಕ್ಕೆ ಸಂಬಂಧಿಸಿದಂತೆ 413 ಪ್ರಕರಣಗಳು ಹಾಗೂ ಅಬಕಾರಿ ಪರವಾನಗಿ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ 104 ಪ್ರಕರಣಗಳು ದಾಖಲಾಗಿವೆ. 398 ಲೀಟರ್ ಮದ್ಯ, 136 ಲೀಟರ್ ಬಿಯರ್, 23 ಲೀಟರ್ ಸೇಂದಿ ವಶಪಡಿಸಿಕೊಳ್ಳಲಾಗಿದೆ. ₹10.46 ಲಕ್ಷ ದಂಡ ವಸೂಲಿ ಮಾಡಲಾಗಿದೆ’ ಎಂದು ಹೇಳಿದರು.

‘ರೆಸ್ಟೋರೆಂಟ್ ಮತ್ತು ಸಾವಜಿ ಹೋಟೆಲ್ಗಳಲ್ಲಿ ಮದ್ಯ ಮಾರಾಟ ಮಾಡಲು ಪರವಾನಗಿ ಇಲ್ಲ. ಆದಾಗ್ಯೂ ಅನೇಕ ಕಡೆ ರಾಜಾರೋಷವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆಂಬ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ನಮಸ್ಕಾರ ಶ್ರೀ ರೆಸ್ಟೋರೆಂಟ್ ಸೇರಿದಂತೆ ಅನೇಕ ಡಾಬಾ, ರೆಸ್ಟೋರೆಂಟ್ ಮತ್ತು ಸಾವಜಿ ಹೋಟೆಲ್ಗಳ ಮೇಲೆ ಕೇಸ್ ದಾಖಲಿಸಿ, ದಂಡ ವಿಧಿಸಲಾಗಿದೆ. ಪುನಃ ಮದ್ಯ ಮಾರಾಟ ಮಾಡಿದಲ್ಲಿ ಕಾನೂನು ಕ್ರಮ ಜರುಗಿಸಿ, ಬಂದ್ ಮಾಡಿಸುವುದಾಗಿ ಎಚ್ಚರಿಕೆ ನೀಡಲಾಗಿದೆ’ ಎಂದರು.

‘ಪ್ರಸ್ತುತ ಅಬಕಾರಿ ಕಚೇರಿಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್–2, ಹೆಡ್ ಕಾನ್ ಸ್ಟೆಬಲ್–2, ಕ್ಲರ್ಕ್–2, ಒಬ್ಬ ಚಾಲಕ ಸೇರಿ 7 ಜನ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಇನ್ನೂ 5 ಜನ ಕಾನ್ಸ್ಟೆಬಲ್ ಬೇಕು. ಈ ಬಗ್ಗೆ ಸರ್ಕಾರ ಕ್ರಮವಹಿಸಿ ಹುದ್ದೆಗಳ ಭರ್ತಿಗೆ ಮುಂದಾಗಬೇಕು. ಅಗತ್ಯ ಸಿಬ್ಬಂದಿಗಳಿದ್ದರೆ, ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಲು ಸಾಧ್ಯ’ ಎಂದು ಗಂಗಾಧರ ಬಿ.ಬಡಿಗೇರ ಅಭಿಪ್ರಾಯಪಟ್ಟರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-32-1685630890

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.