ಸಿಂಧನೂರು: ‘ತಾಲ್ಲೂಕಿನ ವಿರುಪಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ 4ನೇ ಮೈಲ್ ಕ್ಯಾಂಪ್ ಪ್ರದೇಶದಲ್ಲಿ ಸರ್ವೆ ನಂಬರ್ 38/* 17 ಜಮೀನಿನಲ್ಲಿ ಮಹಾನಂದ ಫರ್ನಿಚರ್ ಹಾಗೂ ಕರ್ನಾಟಕ ಎಂಟರ್ಪ್ರೈಸೆಸ್ ಎರಡು ಉತ್ಪಾದನಾ ಘಟಕವನ್ನು ಶಾಶ್ವತವಾಗಿ ನಿಷೇಧಿಸುವಂತೆ ಹಾಗೂ ಫರ್ನಿಚರ್ ಮಾರುಕಟ್ಟೆ ಹೆಸರಿನಲ್ಲಿ ಪರವಾನಗಿ ನೀಡಬಾರದು’ ಎಂದು ಆಗ್ರಹಿಸಿ ಪರಿಸರ ರಕ್ಷಣಾ ವೇದಿಕೆ ತಾಲ್ಲೂಕು ಘಟಕ ಸೋಮವಾರ ಸ್ಥಳೀಯ ಮಿನಿವಿಧಾನಸೌಧ ಮುಂದೆ ಪ್ರತಿಭಟಿಸಿ ಶಿರಸ್ತೇದಾರ್ ವಾಣಿ ಅವರಿಗೆ ಮನವಿ ಪತ್ರ ಸಲ್ಲಿಸಿತು.

ಚೇರ್ ಮಾರುಕಟ್ಟೆ ಹೆಸರಿನಲ್ಲಿ ಪರವಾನಗಿ ಪಡೆದು ಒಳಗೊಳಗೆ ಕೈಗಾರಿಕಾ ಚಟುವಟಿಕೆ ನಡೆಸುವ ಯತ್ನವನ್ನು ತಕ್ಷಣ ತಡೆ ಹಿಡಿಯಬೇಕು. ಈಗಾಗಲೇ ವಿರೂಪಾಪುರ ಗ್ರಾಮ ಪಂಚಾಯತ್ಗೆ ಇಂಡಸ್ಟ್ರಿ ಮಾಲೀಕ ಲಕ್ಷ್ಮಿಕಾಂತ್ ಹಾಗೂ ಮೋನಿಕಾ ಪರವಾನಗಿಗಾಗಿ ಸಲ್ಲಿಸಿರುವ ಅರ್ಜಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು. ಸ್ಥಳ ಪರಿಶೀಲನೆ ನಡೆಸಿ, ಈಗಾಗಲೇ ಅನಧಿಕೃತವಾಗಿ 18 ತಿಂಗಳುಗಳ ಕಾಲ ಜನರ ಜೀವನಕ್ಕೆ ಹಾನಿ ಮಾಡಿ, ಪರಿಸರ ಹಾಳು ಮಾಡಿದ ಘಟಕಗಳ ಮಾಲೀಕ ಲಕ್ಷ್ಮಿಕಾಂತ್ ಹಾಗೂ ಪತ್ನಿ ಮೋನಿಕಾ ಅವರು ಕಾನೂನು ನಿಯಮ ಉಲ್ಲಂಘನೆ ಮಾಡಿದ್ದು ಹಾಗೂ ಇದರಲ್ಲಿ ನೇರವಾಗಿ ಶ್ಯಾಮೀಲಾದ ಸಿಂಧನೂರು ಜೆಸ್ಕಾಂ ಇಲಾಖೆಯ ಇಇ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಿ ಅಕ್ರಮ ಆಸ್ತಿ ಮುಟ್ಟುಗಳು ಹಾಕಿಕೊಳ್ಳಬೇಕು. ಸ್ಥಳೀಯ ನಿವಾಸಿಗಳ ಆರೋಗ್ಯ, ಪರಿಸರ ಮತ್ತು ಜೀವನ ಹಕ್ಕನ್ನು ಕಾಪಾಡಲು ಸ್ಥಿರ ಕ್ರಮಗಳನ್ನು ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.

ಸಂಚಾಲಕರಾದ ಎಂ.ಭಾಸ್ಕರ್, ಕನಕಪ್ಪ ಮುರಣಿ, 4ನೇ ಮೈಲ್ ಕ್ಯಾಂಪ್ ನಿವಾಸಿಗಳಾದ ನಿರುಪಾದಿ, ಹನುಮಂತ, ಧರಗಯ್ಯ, ಶರಣಪ್ಪ, ಎಚ್.ಆರ್.ಹೊಸಮನಿ, ನಾಗರಾಜ್, ಮುತ್ತಪ್ಪ, ರಾಯಪ್ಪ, ಮುದಿಯಪ್ಪ, ರಂಗಪ್ಪ, ಸಂಗಮೇಶ, ರಾಜಪ್ಪ, ಆಂಜನೇಯ, ಬಾಲಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-32-178552912

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.