ಸಿಂಧನೂರು: ‘ನಗರದಲ್ಲಿ ಮೇ 29ರಂದು ಜೈನ ಆಚಾರ್ಯ ವಿಮಲ್ ಸಾಗರ್ ಸುರೇಶ್ವರ ಮುನಿ ಅವರ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ’ ಎಂದು ಕುಂತುನಾಥ ಜೈನ ಶ್ವೇತಾಂಬರ ಮೂರ್ತಿ ಪೂಜಕ ಸಂಘದ ಅಧ್ಯಕ್ಷ ಲಾಲಚಂದ್ ಜೈನ್ ತಿಳಿಸಿದ್ದಾರೆ. ಬುಧವಾರ ಹೇಳಿಕೆ ನೀಡಿರುವ ಅವರು,‘ನಗರದಲ್ಲಿ 4 ದಿನಗಳ ಕಾಲ ವಾಸ್ತವ್ಯ ಹೂಡಿ ಬೆಳಿಗ್ಗೆ 9.15ರಿಂದ 10.30ರವರೆಗೆ ವಿಶೇಷ ಪ್ರವಚನ ನೀಡುವರು. ಮೇ 28ರಂದು ಕಾರಟಗಿ ಮಾರ್ಗವಾಗಿ ಬಂದು ಗೊರೆಬಾಳ ಗ್ರಾಮದಲ್ಲಿ ತಂಗಲಿದ್ದಾರೆ. ಮೇ 29ರಂದು ಬೆಳಿಗ್ಗೆ ಸಿಂಧನೂರಿಗೆ ಆಗಮಿಸುವರು. ನಂತರ ಮೆರವಣಿಗೆಯಲ್ಲಿ ಜೈನ ಕಲ್ಯಾಣ ಮಂಟಪಕ್ಕೆ ತೆರಳುವರು’ ಎಂದು ಲಾಲಚಂದ್ ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-32-973201473

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.