ಸಿಂಧನೂರು: ನಗರಕ್ಕೆ ಆಗಮಿಸಿದ ಜೈನ ಮುನಿ ಆಚಾರ್ಯ ವಿಮಲ್ ಸಾಗರ್ ಸುರೇಶ್ವರ ಅವರನ್ನು ಪ್ರಮುಖ ರಸ್ತೆಗಳಲ್ಲಿ ಕುಂತುನಾಥ ಜೈನ ಶ್ವೇತಾಂಬರ ಮೂರ್ತಿ ಪೂಜಕ ಸಂಘದ ನೇತೃತ್ವದಲ್ಲಿ ಜೈನ ಸಮಾಜದವರು ಅದ್ದೂರಿಯಾಗಿ ಮೆರವಣಿಗೆ ನಡೆಸಿದರು.

ಜೈನ ಆಚಾರ್ಯ ವಿಮಲ್ ಸಾಗರ್ ಸುರೇಶ್ವರಜೀ ಹಾಗೂ ಜೈನ ಮುನಿಗಳಾದ ಆಚಾರ್ಯ ಭಗವಂತ ಅವರು ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ವಿಶೇಷ ಪ್ರವಚನ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಗುರುವಾರ ಸಂಜೆ ತಾಲ್ಲೂಕಿನ ಗೊರೇಬಾಳ ಗ್ರಾಮದಲ್ಲಿರುವ ಮಠದಲ್ಲಿ ವಾಸ್ತವ್ಯ ಹೂಡಿದ್ದರು. ಅಲ್ಲಿಂದ ಕಾಲ್ನಡಿಗೆ ಮೂಲಕ ಶುಕ್ರವಾರ ಬೆಳಿಗ್ಗೆ 7.30ಕ್ಕೆ ನಗರದ ಪ್ರವಾಸಿ ಮಂದಿರದ ಬಳಿ ಬರುತ್ತಿದ್ದಂತೆ ಜೈನ ಸಮಾಜದ ಮುಖಂಡರು ವಿವಿಧ ವಾದ್ಯ ಮೇಳಗಳೊಂದಿಗೆ ಸ್ವಾಗತಿಸಿಕೊಂಡರು.

ನಂತರ ಮೆರವಣಿಗೆ ಮೂಲಕ ಮಹಾತ್ಮ ಗಾಂಧಿ ವೃತ್ತ, ಕನಕದಾಸ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ಸರ್ಕಲ್, ಹಳೆಬಜಾರ್ ರಸ್ತೆ, ಭಗವಾನ್ ಮಹಾವೀರ ರಸ್ತೆ ಮೂಲಕ ಜೈನ ಬಸದಿಗೆ ಬಂದು ತಲುಪಿ ಪ್ರಾರ್ಥನೆ ಸಲ್ಲಿಸಿದರು.

ನಂತರ ಜೈನ ಕಲ್ಯಾಣ ಮಂಟಪದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಜೈನ ಮುನಿ ಆಚಾರ್ಯ ವಿಮಲ್ ಸಾಗರ್ ಸುರೇಶ್ವರ ಅವರು ವಿಶೇಷ ಪ್ರವಚನ ನೀಡಿದರು.

ಕುಂತುನಾಥ ಜೈನ ಶ್ವೇತಾಂಬರ ಮೂರ್ತಿ ಪೂಜಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಲಾಲಚಂದ್ ಜೈನ್, ಜೈನ ಸಮಾಜದ ಮುಖಂಡರಾದ ಶ್ರೇಣಿಕರಾಜ್ ಚಾಜೆಡ್, ಸಂಜಯ್ ನಹಾರ್, ರಾಜೇಂದ್ರಕುಮಾರ ನಹಾರ್, ನರೇಂದ್ರ ನಕಲೇಚಾ, ನವರತನ್ಲಾಲ್ ಬೋಹರಾ, ಮಾಂಗಿಲಾಲ್ ಜೈನ್, ಸುಭಾಷ್ ಸಕಲೇಚಾ, ಸಂಜಯ್ ಬಂಬ್, ಮಹಾವೀರ ಜಿರಾವಾಲಾ, ವಿನೋದ್ ಲೋಡಾ, ಸುಜಿತ್ಕುಮಾರ ಓಸ್ತವಾಲ್, ಸುರೇಶ ನಹಾರ್, ಶಾಂತಿಲಾಲ್ ಲೋಡಾ, ಗೌತಮ್ ಮೆಹ್ತಾ, ಸುಂದರಲಾಲ್ ಕಟಾರಿಯಾ ಸೇರಿದಂತೆ ಜೈನ ಸಮಾಜದ ಮಹಿಳೆಯರು, ಯುವಕ, ಯುವತಿಯರು ಹಾಗೂ ಮಕ್ಕಳು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-32-1642043682

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.