ಸಿಂಧನೂರು: ಕೂಲಿಕಾರರಿಗೆ ಕೆಲಸ ನೀಡಬೇಕು ಮತ್ತು ಬಾಕಿ ಕೂಲಿ ಪಾವತಿ ಮಾಡಬೇಕು ಎನ್ನುವುದೂ ಸೇರಿದಂತೆ ವಿವಿಧ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕ ಸಂಘದ ತಾಲ್ಲೂಕು ಘಟಕದಿಂದ ಶುಕ್ರವಾರ ತಾಲ್ಲೂಕಿನ ವಿರುಪಾಪುರ, ದಢೇಸುಗೂರು ಮತ್ತು ಸಾಲಗುಂದಾ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಲಾಯಿತು.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನರೇಗಾ ಕಾಯ್ದೆ ಏಕಾಏಕಿ ರದ್ದು ಮಾಡಿ, ವಿಬಿ ಜಿ ರಾಮ್ ಜಿ ಎಂಬ ಹೆಸರಿನಲ್ಲಿ ಯೋಜನೆ ರೂಪಿಸಿ ಜಾರಿಗೆ ತರುವ ಮೂಲಕ ದೇಶದ ಕೂಲಿಕಾರರ ಬದುಕನ್ನು ಸರ್ವನಾಶ ಮಾಡಿದೆ. 2004ರಲ್ಲಿ ಅಧಿಕಾರಕ್ಕೆ ಬಂದ ಯುಪಿಎ ಸರ್ಕಾರ ಎಡಪಕ್ಷಗಳ ತೀವ್ರ ಒತ್ತಡಕ್ಕೆ ಮಣಿದು ಗ್ರಾಮೀಣ ಪ್ರದೇಶದ ಕೂಲಿಕಾರರು ಗುಳೆ ಹೋಗುವುದನ್ನು ತಪ್ಪಿಸಲು ಮತ್ತು ಮಹಿಳಾ ಕೂಲಿಕಾರರ ಸಬಲೀಕರಣಕ್ಕಾಗಿ ಉದ್ಯೋಗದ ಹಕ್ಕನ್ನು ಸಂಸತ್ತಿನಲ್ಲಿ ಅಂಗೀಕರಿಸಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ರೂಪಿಸಿತ್ತು ಎಂದು ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ಅಪ್ಪಣ್ಣ ಕಾಂಬಳೆ ವಿವರಿಸಿದರು.

75 ದಿನದ ಕೆಲಸವನ್ನು ರಾಜ್ಯ ಸರ್ಕಾರವನ್ನು ಅವಲಂಬಿಸದೆ ನೀಡಬೇಕು. ಕಾಯಕ ಬಂಧುಗಳ ಬಾಕಿ ಪ್ರೋತ್ಸಾಹ ಧನವನ್ನು ಲೆಕ್ಕಹಾಕಿ ಚುಕ್ತಾ ಮಾಡಬೇಕು ಹಾಗೂ ವೈಯಕ್ತಿಕ ಕಾಮಗಾರಿಗಳ ರೈತ ಮತ್ತು ಕೂಲಿಕಾರರ ಎಲ್ಲ ಬಾಕಿಗಳನ್ನು ನೀಡಬೇಕು. ಎನ್ಎಂಎಂಎಸ್, ಇ-ಕೆವೈಸಿ ಅವೈಜ್ಞಾನಿಕ ತಂತ್ರಜ್ಞಾನ ಅಳವಡಿಸುವುದನ್ನು ಕೈಬಿಟ್ಟು ಸರಳ ರೀತಿಯಲ್ಲಿ ಕೂಲಿಕಾರರಿಗೆ ಹಾಜರಾತಿ ನಿರ್ವಹಿಸಬೇಕು ಎಂದು ಅವರು ಆಗ್ರಹಿಸಿದರು.

ರಾಜ್ಯ ಸರ್ಕಾರ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಒಪ್ಪದಿರುವುದರಿಂದ ನರೇಗಾ ಅಡಿಯಲ್ಲಿ 100 ದಿನದ ಕೆಲಸವನ್ನು ಕೊಡಲು ನಮೂನೆ–6 ಪಡೆದು ಉದ್ಯೋಗ ಕಲ್ಪಿಸಬೇಕು. ವಿಪರೀತ ಬೇಸಿಗೆ ಇರುವುದರಿಂದ ಬೆಳಿಗ್ಗೆ 7 ರಿಂದ 11 ಗಂಟೆಯೊಳಗೆ ಕೆಲಸ ಕಲ್ಪಿಸಬೇಕು. ಕೆಲಸದ ಸಂದರ್ಭದಲ್ಲಿ ಬಿಸಿಲಿನ ತಾಪಕ್ಕೆ ಸಾವನ್ನಪ್ಪಿರುವ ಕೂಲಿಕಾರರಿಗೆ ತಲಾ ₹10 ಲಕ್ಷ ಹಣ ಪರಿಹಾರವಾಗಿ ನೀಡಬೇಕು ಎಂದು ಒತ್ತಾಯಿಸಿದರು.

ವಿರುಪಾಪುರ ಗ್ರಾಮ ಘಟಕದ ಕರಿಯಮ್ಮ, ಶರಣಪ್ಪ, ಉಮೇಶ, ಹನುಮಂತ, ಸತ್ಯಪ್ಪ, ಮಾರುತಿ, ಸಣ್ಣ ಆನಂದ, ದೇವಕೆಮ್ಮ, ತಾಯಮ್ಮ, ವಿರುಪಮ್ಮ, ಗಂಗಮ್ಮ, ದುರುಗಪ್ಪ, ಕೆಂಗಲ್ ಗ್ರಾಮ ಘಟಕದ ಶಂಕ್ರಪ್ಪ, ಹುಸೇನಪ್ಪ ದಢೇಸುಗೂರು, ಮೌಲಪ್ಪ ಕೆಂಗಲ್, ಹಂಪಮ್ಮ, ರೇಣುಕಮ್ಮ, ಲಕ್ಷ್ಮಮ್ಮ, ಗಂಗಮ್ಮ, ರಾಮಮ್ಮ, ಶಾಂತಮ್ಮ, ಸಿದ್ದಪ್ಪ ಹಾಗೂ ಮೌನೇಶ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-32-1321824515

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.