ಸಿಂಧನೂರು: ‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕಾರ್ಮಿಕ ಸಂಹಿತೆಗಳು ಶೋಷಣೆಯ ಅಸ್ತ್ರವಾಗಿದ್ದು, ಬರುವ ದಿನಗಳಲ್ಲಿ ದೇಶದ ಕಾರ್ಮಿಕ ವರ್ಗ ತೀವ್ರ ಸಂಕಷ್ಟ ಎದುರಿಸಲಿದೆ’ ಎಂದು ಹೋರಾಟಗಾರ ಚಂದ್ರಶೇಖರ ಗೊರಬಾಳ ಅಭಿಪ್ರಾಯಪಟ್ಟರು.

ನಗರದ ಎಐಟಿಯುಸಿ ಕಚೇರಿ ಆವರಣದಲ್ಲಿ ಶುಕ್ರವಾರ ಕಾರ್ಮಿಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ದಿನವಿಡೀ ದುಡಿಯುವ ಕಾರ್ಮಿಕರಿಗೆ ಕನಿಷ್ಠ ಕೂಲಿ ಇಲ್ಲ. ಶಾಸನಬದ್ಧ ಸೌಲಭ್ಯಗಳು ದೊರೆಯುತ್ತಿಲ್ಲ. ಇಂತಹ ಸಂದರ್ಭದಲ್ಲಿ ಕೆಲಸದ ಅವಧಿಯನ್ನು 8 ಗಂಟೆಯಿಂದ 12 ಗಂಟೆಗೆ ಹೆಚ್ಚಿಸುವ ಮೂಲಕ ಬಂಡವಾಳಿಗರ ಏಜೆಂಟ್ನಂತೆ ಸರ್ಕಾರ ಕಾಯ್ದೆ ರೂಪಿಸಿದೆ. ಇಡೀ ದೇಶದ ಕಾರ್ಮಿಕರ ಜೀವನಮಟ್ಟ ಕುಸಿದಿದ್ದು, ದೈನಂದಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲಾರದಂತಹ ಅಸಹಾಯಕ ಸ್ಥಿತಿಗೆ ತಲುಪಿದೆ. ಸಂದಿಗ್ದ ಪರಿಸ್ಥಿತಿಯಲ್ಲಿ ಕಾರ್ಮಿಕರು ರಾಜಕೀಯ ಪ್ರಜ್ಞೆ ಬೆಳೆಸಿಕೊಂಡು ಸಂವಿಧಾನ ಬದ್ಧ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕಿದೆ’ ಎಂದು ಹೇಳಿದರು.

ಎಐಟಿಯುಸಿ ಜಿಲ್ಲಾಧ್ಯಕ್ಷ ಬಾಷುಮಿಯಾ ಮಾತನಾಡಿ,‘ಕಾರ್ಮಿಕ ವರ್ಗದ ಹಿತ ಒಗ್ಗಟ್ಟಿನಲ್ಲಿ ಅಡಗಿದೆ. ರೈತರು ಹಾಗೂ ಕಾರ್ಮಿಕರು ಒಗ್ಗೂಡಿ ದೇಶದ ಸಂಪತ್ತನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಹರಾಜು ಹಾಕುತ್ತಿರುವ ಸರ್ಕಾರಗಳನ್ನು ಕಿತ್ತೊಗೆಯಬೇಕು’ ಎಂದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಕ್ಯಾತ್ನಟ್ಟಿ, ಕಾರ್ಮಿಕ ಮುಖಂಡರಾದ ವೆಂಕನಗೌಡ ಗದ್ರಟಗಿ ಮಾತನಾಡಿದರು.

ಹನುಮಂತ ಹಂಚಿನಾಳ, ಪ್ರಕಾಶ್, ನಾಗರಾಜ ಎ.ಕೆ.ಗೋಪಾಲನಗರ, ರಾಜಾಸಾಬ್ ಗಂಗನಾಳ, ಬಲರಾಮ್, ಸುಭಾನ್ಸಾಬ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.