ಸಿಂಧನೂರು: ಉದಯೋನ್ಮುಖ ಬರಹಗಾರರು ಸಮಾಜ ಮುಖಿಯಾದ ವೈಚಾರಿಕ ಭಾವನೆಗಳೊಂದಿಗೆ ಸಾಹಿತ್ಯ ನಿರ್ಮಾಣ ಮಾಡುವ ಅವಶ್ಯಕತೆ ಇದೆ ಎಂದು ತುರ್ವಿಹಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೆ.ಖಾದರ್ ಬಾಷಾ ಅಭಿಪ್ರಾಯಪಟ್ಟರು.

ಸೋಮವಾರ ತುರ್ವಿಹಾಳ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತುರ್ವಿಹಾಳ ಹೋಬಳಿ ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಾರ್ಯಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ತಮ್ಮ ಸುತ್ತ-ಮುತ್ತಲಿನ ಪರಿಸರದಲ್ಲಿ ನಡೆಯುವ ವಿದ್ಯಮಾನಗಳನ್ನು ಗ್ರಹಿಸಿಕೊಂಡು ಭಾವನೆಗಳನ್ನು ಬರಹದ ಮೂಲಕ ಕಲಾತ್ಮಕವಾಗಿ ಅಭಿವ್ಯಕ್ತಿಸಿದರೆ ಅದೇ ಸಾಹಿತ್ಯವಾಗುತ್ತದೆ’ ಎಂದರು.

‘ಕನ್ನಡ ನಾಡು-ನುಡಿಗೆ ಎರಡು ಸಾವಿರದ ಇತಿಹಾಸವಿದ್ದು, ಕನ್ನಡಿಗರು ಸಿಂಧು ನಾಗರಿಕತೆಯ ಸಂಸ್ಥಾಪಕರಾಗಿದ್ದಾರೆ. ಸಿಂಧನೂರು ತಾಲ್ಲೂಕು ಶಿಕ್ಷಣದಲ್ಲಿ ಹಿಂದುಳಿದಿದೆ ಎನ್ನುವ ಅಪಖ್ಯಾತಿಯನ್ನು ತೆಗೆದು ಹಾಕುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಬೇಕು’ ಎಂದರು.

ಜಿಲ್ಲಾ ಪ್ರತಿನಿಧಿ ಎಸ್.ದೇವೆಂದ್ರಗೌಡ ಮಾತನಾಡಿ ‘ವಿದ್ಯಾರ್ಥಿಗಳು ಕನ್ನಡ ಭಾಷೆಯ ಇತಿಹಾಸ ತಿಳಿದುಕೊಂಡು ಬದುಕು ಕಟ್ಟಿಕೊಳ್ಳಬೇಕು. ಕನ್ನಡಿಗರಲ್ಲಿ ಔದಾರ್ಯ ಹೆಚ್ಚಾಗಿ, ಪರಭಾಷೆಗೆ ಒತ್ತು ನೀಡಲಾಗುತ್ತಿದೆ. ಇದು ಸರಿಯಾದ ಬೆಳವಣಿಗೆ ಅಲ್ಲ. ಎಲ್ಲಾ ಭಾಷೆಗಳನ್ನು ಕಲಿಯುವುದರಲ್ಲಿ ನಮ್ಮ ಭಾಷೆಯನ್ನು ಮರೆಯಬಾರದು’ ಎಂದರು.

ಕಸಾಪ ಜಿಲ್ಲಾ ಘಟಕದ ಮಹಿಳಾ ಪ್ರತಿನಿಧಿ ರಮಾದೇವಿ ಶಂಭೋಜಿ ಮಾತನಾಡಿದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎಫ್.ಮಸ್ಕಿ ಅವರು ತುರ್ವಿಹಾಳ ಹೋಬಳಿ ಘಟಕದ ನೂತನ ಅಧ್ಯಕ್ಷ ಕನಕರಾಯ ಆನೆಗುಂದಿ ಅವರಿಗೆ ಕನ್ನಡ ಭಾವುಟ ನೀಡಿದರು.

ಕಸಾಪ ಗೌರವ ಕಾರ್ಯದರ್ಶಿ ಮಹ್ಮದ್ ಮುಸ್ತಫಾ, ಸಂಘಟನಾ ಕಾರ್ಯದರ್ಶಿ ವೀರೇಶ ಕನ್ನಾರಿ, ಕೋಶಾಧ್ಯಕ್ಷೆ ಶಾಂತಾ ಒಳಗಿನ ಮನಿ, ಕರ್ನಾಟಕ ರೈತ ಪ್ರಾಂತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವಂತರಾಯಗೌಡ ಕಲ್ಲೂರು, ಕಸಾಪ ತುರ್ವಿಹಾಳ ಪತ್ರಿಕಾ ಪ್ರತಿನಿಧಿ ನವಾಬ್ ಷರೀಪ್, ಸಾಹಿತಿ ಭೀಮಮ್ಮ ಶಿವಪ್ಪ ಆನೆಗುಂದಿ ಇದ್ದರು.

ಆಧ್ಯಾತ್ಮಿಕ ಚಿಂತಕ ನಾಗಪ್ಪ ಹೂವಿನಭಾವಿ ಅವರನ್ನು ಸನ್ಮಾನಿಸಲಾಯಿತು. ಬಸವಚೇತನ ಕಾಲೇಜಿನ ಪ್ರಾಂಶುಪಾಲ ವಿರೂಪಾಕ್ಷಪ್ಪ ಗಚ್ಚಿನಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-32-836418783

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.