ಸಿಂಧನೂರು: ‘ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಮೌನೇಶ ರಾಠೋಡ್ ಮತ್ತು ಸಿಬ್ಬಂದಿ ಉದ್ದೇಶಪೂರ್ವಕವಾಗಿ ಕಿರುಕುಳ ನೀಡಿ, ದೌರ್ಜನ್ಯ ಮತ್ತು ಬೆದರಿಕೆ ಹಾಕುತ್ತಿದ್ದಾರೆ’ ಎಂದು ತಾಲ್ಲೂಕಿನ ಶ್ರೀಪುರಂಜಂಕ್ಷನ್ನಲ್ಲಿರುವ ವಿ-1 ಹೋಟೆಲ್ ಮಾಲೀಕ ವೆಂಕಟರೆಡ್ಡಿ ಆರೋಪಿಸಿದ್ದಾರೆ.

ಈ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ‘ಸಾರಿಗೆ ಇಲಾಖೆಗೆ ಪ್ರತಿ ತಿಂಗಳು ₹85 ಸಾವಿರದವರೆಗೆ ಹಣ ಪಾವತಿಸಿ ನಿಯಮಾನುಸಾರ ಹೋಟೆಲ್ ನಡೆಸುತ್ತಿದ್ದೇವೆ. ಪ್ರತಿದಿನ ಸುಮಾರು 50 ಸರ್ಕಾರಿ ಬಸ್ಗಳು ಪ್ರಯಾಣಿಕರ ಊಟಕ್ಕಾಗಿ ಹೋಟೆಲ್ ಬಳಿ ನಿಲ್ಲುತ್ತವೆ. ರಾತ್ರಿ 12.30 ಎನ್ನುವಷ್ಟರಲ್ಲಿ ಹೋಟೆಲ್ ಬಂದ್ ಮಾಡುತ್ತೇವೆ. ಆದರೆ ಗ್ರಾಮೀಣ ಪೊಲೀಸ್ ಠಾಣೆಯ ಕಾನ್ಸ್ಟಬಲ್ ಮಾಳಪ್ಪ ಮತ್ತು ಹೋಮ್ ಗಾರ್ಡ್ ಸಿಬ್ಬಂದಿ ರಾತ್ರಿ ಪ್ರಯಾಣಿಕರು ಊಟ ಮಾಡುವಾಗ ಲೈಟ್ ಮತ್ತು ಹೋಟೆಲ್ ಬಂದ್ ಮಾಡಿ ದೌರ್ಜನ್ಯ ನಡೆಸಿ, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಪಿಎಸ್ಐ ಮೌನೇಶ ರಾಠೋಡ್ ಹೋಟೆಲ್ ಬಂದ್ ಮಾಡಿಸಿಯೇ ಬರಬೇಕು ಹೇಳಿದ್ದಾರೆ ಎಂದು ಸಿಬ್ಬಂದಿ ಹೇಳುತ್ತಾರೆ. ಇಲ್ಲದಿದ್ದರೆ ಹೋಟೆಲ್ ಹೇಗೆ ನಡೆಸುತ್ತೀಯಾ ನೋಡೋಣ ಎಂದು ಬೆದರಿಕೆ ಹಾಕುತ್ತಿದ್ದಾರೆ’ ಎಂದು ಅಳಲು ತೋಡಿಕೊಂಡರು.

ಮುಖಂಡ ಹುಸೇನಬಾಷಾ ಬಳಗಾನೂರು ಮಾತನಾಡಿ, ‘ನಾವು ಹೊಟ್ಟೆ ಪಾಡಿಗಾಗಿ ಹೋಟೆಲ್ ನಡೆಸುತ್ತಿದ್ದೇವೆ, ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿಲ್ಲ. ಪಿಎಸ್ಐ ಮೌನೇಶ ರಾಠೋಡ್ ಯಾವ ಉದ್ದೇಶದಿಂದ ಕಿರುಕುಳ ನೀಡುತ್ತಿದ್ದಾರೋ ತಿಳಿಯುತ್ತಿಲ್ಲ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಕ್ಷು ಗಿರಿ ಅವರಿಗೆ ದೂರು ನೀಡಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರಯಾಣಿಕರ ಜತೆ ಅನುಚಿತ ವರ್ತನೆ ಮಾಡದಂತೆ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ರಾಜಶೇಖರಯ್ಯಸ್ವಾಮಿ, ಸುಧಾಕರ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-32-1647434461

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.