ಸಿಂಧನೂರು: ತಾಲ್ಲೂಕಿನ ಸಾಲಗುಂದಾ ಬೆಟ್ಟದಲ್ಲಿ ಚಿರತೆಯ ಹೆಜ್ಜೆಗಳು ಪತ್ತೆಯಾಗಿದ್ದು, ಸಾರ್ವಜನಿಕರಿಂದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಇರುವುದನ್ನು ಖಚಿತ ಪಡಿಸಿಕೊಂಡಿದ್ದಾರೆ.

ಇಲಾಖೆಯಿಂದ ಮಂಗಳವಾರ ಡಂಗೂರ ಸಾರಿಸಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.

ಸಾರ್ವಜನಿಕರು ತಮ್ಮ ದನ-ಕರುಗಳು, ಆಡು- ಕುರಿಗಳನ್ನು ಹೊರಗಡೆ ಬಿಡಬಾರದೆಂದು ಅರಣ್ಯಾಧಿಕಾರಿಗಳು ಗ್ರಾಮಸ್ಥರಿಗೆ ತಿಳಿಸಿದ್ದಾರೆ.

ಸಾಲಗುಂದಾ ಪಕ್ಕದಲ್ಲಿರುವ ಗ್ರಾಮಗಳಾದ ಹುಡಾ, ಅಂಬಾಮಠ, ರವುಡಕುಂದ, ಸಿಂಗಾಪುರ, ಮುಕುಂದ ಗ್ರಾಮಗಳು ಸಹ ಬೆಟ್ಟಗುಡ್ಡಗಳಿಂದ ಆವೃತವಾಗಿವೆ. ಅಲ್ಲಿ ಚಿರತೆ, ಕರಡಿ ಸೇರಿ ಇತರೆ ಕಾಡು ಪ್ರಾಣಿಗಳು ಬರುವುದು ಸಹಜವಾಗಿದೆ.

ಯಾವುದೇ ಕಾರಣಕ್ಕೂ ಸಾರ್ವ ಜನಿಕರು ಗುಡ್ಡದ ಕಡೆಗೆ ದನ-ಕುರಿಗಳನ್ನು ಮೇಯಿಸಲು ಹೋಗಬಾರದು. ಗುಡ್ಡದಲ್ಲಿ ಹಲವಾರು ಕಡೆಗಳಲ್ಲಿ ಬೋನು ಇಟ್ಟು ಚಿರತೆಯನ್ನು ಸೆರೆ ಹಿಡಿಯಲಾಗುವುದು ಎಂದು ವಲಯ ಅರಣ್ಯಾಧಿಕಾರಿ ವಿಜಯ ಕುಮಾರ ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-32-319306014

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.