ಸಿಂಧನೂರು: ತಾಲ್ಲೂಕಿನ ಸತ್ಯವತಿ ಕ್ಯಾಂಪ್ನಲ್ಲಿ ನಾಲ್ಕು ವರ್ಷದ ಬಾಲಕ ತೆರೆದ ಸೆಪ್ಟಿಕ್ ಟ್ಯಾಂಕಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಲ್ಲಯ್ಯ ಈರಣ್ಣ (4) ಮೃತ ಬಾಲಕ. ಏಪ್ರಿಲ್ 3ರಂದು ಗುಡ್ ಫ್ರೈಡೆ ದಿನ ಈ ಘಟನೆ ನಡೆದಿದ್ದು, ಬಾಲಕನ ತಂದೆ ಈರಣ್ಣ ನೀಡಿದ ದೂರಿನನ್ವಯ ತುರುವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಗುಡ್ ಫ್ರೈಡೆ ಪ್ರಯುಕ್ತ ಬಾಲಕನ ತಾಯಿ ಸುಮಿತ್ರಾ ಮತ್ತು ಕುಟುಂಬದವರು ಪಕ್ಕದ ಚರ್ಚ್ಗೆ ಹೋಗಿದ್ದರು. ಈ ವೇಳೆ ಆ ಮಗು ಸೆಪ್ಟಿಕ್ ಟ್ಯಾಂಕ್ನ ಕಡೆ ಹೋಗಿ ಟ್ಯಾಂಕ್ನೊಳಗೆ ಬಿದ್ದಿರಬೇಕು ಎಂದು ಪೊಲೀಸರು ಊಹಿಸಿದ್ದಾರೆ. ಆದರೆ, ಬಾಲಕನು ಪಾಲಕರು ಮಗನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.

ಚಿದಾನಂದಪ್ಪ ಅವರು ಸೆಪ್ಟಿಕ್ ಟ್ಯಾಂಕ್ ಮುಚ್ಚದೆ ಕೆಲವು ವರ್ಷಗಳಿಂದ ತೆರೆದ ಸ್ಥಿತಿಯಲ್ಲಿ ಬಿಟ್ಟಿದ್ದಾರೆ. ಈ ಹಿಂದೆ ಒಂದು ಎತ್ತು ಟ್ಯಾಂಕ್ನಲ್ಲಿ ಬಿದ್ದು ಕಾಲು ಮುರಿದುಕೊಂಡಿತ್ತು. ಇದರಲ್ಲಿಯೇ ಒಂದು ನಾಯಿ ಸಹ ಬಿದ್ದು ಸತ್ತಿದೆ. ಚಿದಾನಂದಪ್ಪ ಅವರ ಬೇಜವಾಬ್ದಾರಿ ಸಾಕು ಪ್ರಾಣಿ ಹಾಗೂ ಮಗುವಿನ ಜೀವ ತೆಗೆದುಕೊಂಡಿದೆ ಎಂದು ದೂರಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-35-637360667

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.